ಟಿ20 ಕ್ರಿಕೆಟ್ನಲ್ಲಿ ಝಿಂಬಾಬ್ವೆ ಹೊಸ ಇತಿಹಾಸ ಬರೆದಿದೆ. ಗ್ಯಾಂಬಿಯಾ ವಿರುದ್ಧದ ಪಂದ್ಯದಲ್ಲಿ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಝಿಂಬಾಬ್ವೆ 344 ರನ್ ಕಲೆಹಾಕಿದೆ. ಇದರೊಂದಿಗೆ ಸೀಮಿತ ಓವರ್ಗಳ ಪಂದ್ಯಗಳಲ್ಲಿ ಬೃಹತ್ ಮೊತ್ತ ಕಲೆಹಾಕಿದ ವಿಶೇಷ ದಾಖಲೆಯೊಂದು ಸಿಕಂದರ್ ರಾಝ ಪಡೆಯ ಹೆಸರಿಗೆ ಸೇರ್ಪಡೆಯಾಗಿದೆ.
ಟಿ20 ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಝಿಂಬಾಬ್ವೆ(zimbabwe )ತಂಡವು ಹೊಸ ಇತಿಹಾಸ ನಿರ್ಮಿಸಿದೆ. ನೈರೋಬಿಯಾದಲ್ಲಿ ನಡೆದ ಗ್ಯಾಂಬಿಯಾ ವಿರುದ್ಧದ ಈ ಪಂದ್ಯದಲ್ಲಿ ಝಿಂಬಾಬ್ವೆ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 344 ರನ್ ಕಲೆಹಾಕಿತು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ಗಳಿಸಿದ ವಿಶ್ವ ದಾಖಲೆ ಬರೆದಿದೆ.
ಇದರೊಂದಿಗೆ ಸೀಮಿತ ಓವರ್ಗಳ ಪಂದ್ಯಗಳಲ್ಲಿ 300+ ಹಾಗೂ 400+ ರನ್ಗಳಿಸಿದ ವಿಶ್ವದ ಏಕೈಕ ತಂಡವೆಂಬ ವಿಶ್ವ ದಾಖಲೆ ಕೂಡ ಝಿಂಬಾಬ್ವೆ(zimbabwe )ಕೈ ವಶವಾಯಿತು. ಅಂದರೆ ಅಂತಾರಾಷ್ಟ್ರೀಯ ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 300+ ಹಾಗೂ 400+ ರನ್ಗಳಿಸಿದ ವಿಶೇಷ ದಾಖಲೆಯೊಂದನ್ನು ಝಿಂಬಾಬ್ವೆ ತಂಡ ನಿರ್ಮಿಸಿದೆ.
2023ರ ಏಕದಿನ ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಝಿಂಬಾಬ್ವೆ ತಂಡವು 50 ಓವರ್ಗಳಲ್ಲಿ 408 ರನ್ಗಳನ್ನು ಕಲೆಹಾಕಿದ್ದರು. ಇದೀಗ ಟಿ20 ಕ್ರಿಕೆಟ್ನಲ್ಲಿ 20 ಓವರ್ಗಳಲ್ಲಿ 344 ರನ್ ಬಾರಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 300 ಹಾಗೂ ಏಕದಿನ ಕ್ರಿಕೆಟ್ನಲ್ಲಿ 400 ರನ್ಗಳ ಗಡಿದಾಟಿದ ವಿಶ್ವದ ಏಕೈಕ ತಂಡವೆಂಬ ಹೆಗ್ಗಳಿಕೆಗೆ ಝಿಂಬಾಬ್ವೆ (zimbabwe )ತಂಡದ ಪಾಲಾಗಿದೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಭಾರತ ಸೇರಿದಂತೆ ಒಟ್ಟು 6 ತಂಡಗಳು 400+ ರನ್ ಕಲೆಹಾಕಿದೆ. ಆದರೆ ಈ ತಂಡಗಳಿಗೆ ಟಿ20 ಕ್ರಿಕೆಟ್ನಲ್ಲಿ 300ರ ಗಡಿದಾಟಲು ಸಾಧ್ಯವಾಗಿಲ್ಲ. ಇದೀಗ ಅಸಾಧ್ಯವಾದ ದಾಖಲೆಯನ್ನು ಝಿಂಬಾಬ್ವೆ (zimbabwe)ತಂಡ ಮಾಡಿದೆ. ಈ ಮೂಲಕ ಸೀಮಿತ ಓವರ್ಗಳ ಪಂದ್ಯಗಳಲ್ಲಿ 300+ ಹಾಗೂ 400+ ಸ್ಕೋರ್ಗಳಿಸಿದ ಐತಿಹಾಸಿಕ ಸಾಧನೆ ಮಾಡಿದೆ.
ಇನ್ನು ಗ್ಯಾಂಬಿಯಾ ವಿರುದ್ಧದ ಪಂದ್ಯದಲ್ಲಿ 344 ರನ್ಗಳನ್ನು ಕಲೆಹಾಕಿದ ಝಿಂಬಾಬ್ವೆ ಆ ಪಂದ್ಯವನ್ನು ಗೆದ್ದಿರುವುದು ಬರೋಬ್ಬರಿ 290 ರನ್ಗಳಿಂದ. ಅಂದರೆ ವಿಶ್ವ ದಾಖಲೆಯ ಗುರಿ ಬೆನ್ನತ್ತಿದ ಗ್ಯಾಂಬಿಯಾ ಕೇವಲ 54 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಭಾರೀ ಅಂತರದಿಂದ ಗೆದ್ದ ವಿಶ್ವ ದಾಖಲೆಯನ್ನು ಸಹ ಝಿಂಬಾಬ್ವೆ ತನ್ನ ತೆಕ್ಕೆಗೆ ಪಡೆದುಕೊಂಡಿದೆ.