ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಸ್ಯಾಂಡಲ್‌ವುಡ್‌ನಲ್ಲೀಗ ‘ಯುಐ'(ui)

ಸ್ಯಾಂಡಲ್‌ವುಡ್‌ನಲ್ಲೀಗ ‘ಯುಐ’ ಸಿನಿಮಾ ಫೀವರ್ ಜೋರಾಗಿದೆ. ಉಪೇಂದ್ರ ನಿರ್ದೇಶಿಸಿ ನಟಿಸಿರುವ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್‌ನಲ್ಲಿ ಕೂಡ ಕಲೆಕ್ಷನ್ ಜೋರಾಗಿದೆ. ಶುಕ್ರವಾರ ತೆರೆಕಂಡ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು.ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಕ್ಸಸ್ ಕಂಡಿದೆ.

ui

ರಿಯಲ್ ಸ್ಟಾರ್ ನಿರ್ದೇಶನದ ಸಿನಿಮಾ(ui)

ರಿಯಲ್ ಸ್ಟಾರ್ ನಿರ್ದೇಶನದ ಸಿನಿಮಾಗಳಿಗೆ ಅಭಿಮಾನಿ ಬಳಗ ದೊಡ್ಡದಿದೆ. ಸ್ಟಾರ್ ಫಿಲ್ಮ್ ಮೇಕರ್‌ಗಳೇ ಉಪ್ಪಿ ಚಿತ್ರಕ್ಕಾಗಿ ಕಾದು ನಿಂತಿದ್ದಾರೆ. ಇನ್ನು ಕಲ್ಟ್ ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡ ಅಭಿಮಾನಿಗಳ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ದೊಡ್ಡಮಟ್ಟದಲ್ಲಿ ಪ್ರಚಾರ ಮಾಡದೇ ಇದ್ದರೂ ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿತ್ತು. ಕರ್ನಾಟಕ ಮಾತ್ರವಲ್ಲದೇ ಆಂಧ್ರ, ತೆಲಂಗಾಣ, ತಮಿಳುನಾಡು ಹಾಡು ವಿದೇಶಗಳಲ್ಲಿ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ui ಸಿನಿಮಾ ಕಲೆಕ್ಷನ್

ವರದಿ ಪ್ರಕಾರ ಮೊದಲ ದಿನ ಭಾರತದಲ್ಲಿ ‘ಯುಐ'(ui) ಸಿನಿಮಾ 6.95 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿತ್ತು. ಎರಡನೇ ದಿನವಾದ ಶನಿವಾರ 5.6 ಕೋಟಿ ರೂ. ಬಾಚಿತ್ತು. ಮೂರನೇ ದಿನವೂ ‘ಯುಐ'(ui) ಕ್ರೇಜ್ ಜೋರಾಗಿತ್ತು. 5.79 ಕೋಟಿ ರೂ. ಗಳಿಕೆ ಕಂಡಿದ್ದಾಗಿ ಹೇಳಲಾಗುತ್ತಿದೆ. ಒಟ್ಟಾರೆ ಮೊದಲ ಮೂರು ದಿನಕ್ಕೆ ಸಿನಿಮಾ 18.3 ಕೋಟಿ ರೂ. ಕಲೆಕ್ಷನ್ ಮಾಡಿದೆ.ಈ ವಾರ ಕ್ರಿಸ್‌ಮಸ್ ರಜೆ ‘ಯುಐ'(ui) ಚಿತ್ರದ ಗಳಿಕೆಗೆ ಪ್ಲಸ್ ಆಗುವ ನಿರೀಕ್ಷೆಯಿದೆ. ಕನ್ನಡು ತೆಲುಗು, ತಮಿಳಿನಲ್ಲಿ ಕೂಡ ಚಿತ್ರ ತಕ್ಕಮಟ್ಟಿಗೆ ಕಲೆಕ್ಷನ್ ಮಾಡುತ್ತಿದೆ. ಹಾಗಾಗಿ ಚಿತ್ರ ಮುಂದೆ ನಿಧಾನವಾಗಿ ಮತ್ತಷ್ಟು ಕಲೆಕ್ಷನ್ ಮಾಡುವ ಅಂದಾಜಿದೆ. ಬುಧವಾರ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಕಿಚ್ಚನ ಸಿನಿಮಾ ‘ಯುಐ’ ಕಲೆಕ್ಷನ್ ಮೇಲೆ ಪರಿಣಾಮ ಬೀರುತ್ತಾ ಕಾದು ನೋಡಬೇಕಿದೆ.

ui

ಫಸ್ಟ್ ವೀಕೆಂಡ್ ವಿಶ್ವದಾದ್ಯಂತ ಗ್ರಾಸ್ ಕಲೆಕ್ಷನ್ 25 ಕೋಟಿ ರೂ. ದಾಟಿರುವ ಅಂದಾಜಿದೆ. ಮೊದಲ 4 ದಿನಕ್ಕೆ ‘ಯುಐ’ ಸಿನಿಮಾ 30 ಕೋಟಿ ರೂ.ಗೂ ಗಡಿ ದಾಟುವ ಲೆಕ್ಕಾಚಾರ ನಡೀತಿದೆ. ಒಟ್ಟಾರೆ ‘ಯುಐ’ ಸಿನಿಮಾ ಹಿಟ್ ಲಿಸ್ಟ್ ಸೇರಿದೆ. ಇನ್ನು ಅಡ್ವಾನ್ಸ್ ಬುಕ್ಕಿಂಗ್ ಸೇರಿ ಮೊದಲ 3 ದಿನಕ್ಕೆ ಬುಕ್‌ಮೈ ಶೋನಲ್ಲಿ 4 ಲಕ್ಷಕ್ಕೂ ಅಧಿಕ ಟಿಕೆಟ್ ಬುಕ್ ಆಗಿದೆ.

ಈ ವರ್ಷ ಬುಕ್‌ಮೈ ಶೋನಲ್ಲಿ ಮೊದಲ 3 ದಿನಕ್ಕೆ ಅತಿಹೆಚ್ಚು ಟಿಕೆಟ್ ಮಾರಾಟವಾದ ಕನ್ನಡ ಸಿನಿಮಾ ಎನ್ನುವ ದಾಖಲೆ ‘ಯುಐ’ಪಾಲಾಗಿದೆ. ಸಿನಿಮಾ ನೋಡಿದ ಕೆಲವರು ಬಹಳ ಮೆಚ್ಚಿ ರಿವ್ಯೂ ಕೊಡುತ್ತಿದ್ದಾರೆ. ಅದೇ ರೀತಿ ಮನರಂಜನೆಗಾಗಿ ಚಿತ್ರಮಂದಿರಕ್ಕೆ ಹೋದವರು ಸಿನಿಮಾ ಚೆನ್ನಾಗಿಲ್ಲ ಎಂದು ಕಾಮೆಂಟ್ ಮಾಡುತ್ತಿರುವುದು ಇದೆ.

ನಿರ್ದೇಶಕರಾಗಿಯೇ ಉಪೇಂದ್ರ(upendra )ಕಂಬ್ಯಾಕ್ .!!(ui)

ನಿರ್ದೇಶಕರಾಗಿಯೇ ಉಪೇಂದ್ರ ಕಂಬ್ಯಾಕ್ ಮಾಡಿದ್ದಾರೆ. ಇತ್ತೀಚೆಗೆ ಅವರ ಸಿನಿಮಾಗಳು ಅಷ್ಟಾಗಿ ಸದ್ದು ಮಾಡುತ್ತಿರಲಿಲ್ಲ. ಅಭಿಮಾನಿಗಳು ಕೂಡ ಚಿತ್ರ ನಿರ್ದೇಶಿಸುವಂತೆ ಕೇಳುತ್ತಲೇ ಇದ್ದರು. ಕೊನೆಗೂ ನಿರ್ದೇಶಕನ ಕ್ಯಾಪ್ ತೊಟ್ಟು ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಆ ಪ್ರಯತ್ನದಲ್ಲಿ ಭಾಗಶಃ ಸಕ್ಸಸ್ ಕಂಡಿದ್ದಾರೆ. ಇದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ui

ಇದು ದಡ್ಡರಿಗೆ ಮಾತ್ರ..(ui)

ಇದು ದಡ್ಡರಿಗೆ ಮಾತ್ರ..ಉಪೇಂದ್ರ ಸಿನಿಮಾದಲ್ಲಿ ಸಂಕೀರ್ಣತೆ ಇರುತ್ತದೆ. ಇದು ಸುಲಭಕ್ಕೆ ಅರ್ಥವಾಗುವಂಥದ್ದಲ್ಲ. ಯುಐ ಸಿನಿಮಾದಲ್ಲಿ ಕೂಡ ಪ್ರೇಕ್ಷಕರು ಡಿಕೋಡ್‌ ಮಾಡಿಕೊಳ್ಳಬೇಕಾದ ದೃಶ್ಯಗಳು ಹಲವು ಇವೆ. ಸುಮಾರು 2 ತಾಸು 12 ನಿಮಿಷಗಳ ಸಿನಿಮಾ ಇದು. ಅಭಿವೃದ್ಧಿಯ ಜೊತೆ ಏನೆಲ್ಲ ಅಪಾಯಗಳು ತಳುಕು ಹಾಕಿಕೊಂಡಿವೆ. ಜಾಗತಿಕ ತಾಪಮಾನದಿಂದ ಏನೆಲ್ಲ ವಿನಾಶಗಳು ಆಗುತ್ತವೆ ಎಂಬ ವಿಷಯಗಳನ್ನ ಯುಐ ಸಿನಿಮಾದಲ್ಲಿ ಸಂದೇಶ ರೂಪದಲ್ಲಿ ಕೊಡಲಾಗಿದೆ. ಈ ಸಿನಿಮಾ ಮೊದಲ ದಿನದ ಗಳಿಕೆಯಲ್ಲಿ ಧ್ರುವ ಸರ್ಜಾ ಅವರ ಮಾರ್ಟಿನ್‌, ದುನಿಯಾ ವಿಜಯ್‌ ಅವರ ಭೀಮಾ ಸಿನಿಮಾಗಳನ್ನ ಮೀರಿಸಿದೆ

ಯುಐ(ui) ಸಿನಿಮಾ ಶುರುವಾಗುವುದೇ ಉಪೇಂದ್ರ ಅವರ ಮಾತಿನಿಂದ..ʼನಿಮ್ಮನ್ನ ನೀವು ಬುದ್ಧಿವಂತರು ಎಂದುಕೊಂಡಿದ್ದರೆ..ಥಿಯೇಟರ್‌ನಿಂದ ಹೊರನಡೆದುಬಿಡಿʼ ಎಂದು ಹೇಳುತ್ತಾರೆ. ಇಷ್ಟುದಿನ ಬುದ್ಧಿವಂತರಿಗೆ ಎನ್ನುತ್ತಿದ್ದ ಉಪ್ಪಿ, ಈ ಸಿನಿಮಾವನ್ನ ದಡ್ಡರಿಗೆ ಮಾತ್ರ ಎಂದು ಹೇಳಿದ್ದಾರೆ. ಇದೊಂತರ ಬುದ್ಧಿವಂತ ದಡ್ಡರಿಗಾಗಿ ಮಾಡಿದ ಸಿನಿಮಾ ಎಂದು ಉಪೇಂದ್ರ ಅವರೇ ಹೇಳಿಕೊಂಡಿದ್ದಾರೆ..ಯುಐನಲ್ಲಿ ಕಥೆಯ ವ್ಯಾಖ್ಯಾನವನ್ನ ಸಂಪೂರ್ಣವಾಗಿ ವೀಕ್ಷಕರ ಹೆಗಲಿಗೇ ಬಿಡಲಾಗುತ್ತದೆ. ಚಿತ್ರದ ಆಳವಾದ ಅರ್ಥವನ್ನ ಡಿಕೋಡ್‌ ಮಾಡುವ ಟಾಸ್ಕ್‌ನ್ನ ಪ್ರೇಕ್ಷಕರಿಗೇ ನೀಡಲಾಗುತ್ತದೆ. ಯುಐ ಸಿನಿಮಾ ಆರಂಭ ಮತ್ತು ಅಂತ್ಯವನ್ನ ನೀವು ನೋಡದೆ ಇದ್ದರೆ ಈ ಸಿನಿಮಾ ಪೂರ್ತಿಯಾಗಿ ಅರ್ಥವೇ ಆಗುವುದಿಲ್ಲ. ಇಡೀ ಸಿನಿಮಾ ನೋಡುವಾಗ ನೀವು ಸಂಪೂರ್ಣವಾಗಿ ಗಮನ ನೀಡಬೇಕು…

Related Posts

Pushap 2: ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

Pushap 2: ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!! ‘ಪುಷ್ಪ 2’ (Pushpa 2)ಸಿನಿಮಾದ ಅಬ್ಬರ ಸದ್ಯಕ್ಕಂತೂ ನಿಲ್ಲುವ ರೀತಿ ಕಾಣುತ್ತಿಲ್ಲ. ಬಹುತೇಕ ಎಲ್ಲ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ನೀಡುತ್ತಿದೆ. ಅಲ್ಲು ಅರ್ಜುನ್ ಅಭಿಮಾನಿಗಳು ಸಿನಿಮಾ…

Continue reading
ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ (pushpa 2)! !

ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ !!(pushpa 2) ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2′(pushpa 2) ಸಿನಿಮಾ ಡಿಸೆಂಬರ್ 5 ಕ್ಕೆ ತೆರೆಗೆ ಬರಲಿದ್ದು, ವಿಶ್ವದಾದ್ಯಂತ 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಈ ಸಿನಿಮಾ ತೆರೆಗೆ…

Continue reading

Leave a Reply

Your email address will not be published. Required fields are marked *

You Missed

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).

Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh!!

Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh!!

Pushap 2: ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

Pushap 2:  ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

ಕೆಎಲ್ ರಾಹುಲ್​ಗೆ ತಮ್ಮ ಸ್ಥಾನ ತ್ಯಾಗ ಮಾಡಿದ ನಾಯಕ ರೋಹಿತ್ ಶರ್ಮಾ; ಪಿಂಕ್ ಬಾಲ್ ಟೆಸ್ಟ್ (india vs australia)

ಕೆಎಲ್ ರಾಹುಲ್​ಗೆ ತಮ್ಮ ಸ್ಥಾನ ತ್ಯಾಗ ಮಾಡಿದ     ನಾಯಕ ರೋಹಿತ್ ಶರ್ಮಾ; ಪಿಂಕ್ ಬಾಲ್ ಟೆಸ್ಟ್ (india vs australia)

ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ (pushpa 2)! !

ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ (pushpa 2)! !