ಯುಜಿ, ಪಿಜಿಗೆ (UG and PG)ವೇಳಾಪಟ್ಟಿ ಪ್ರಕಟ ಎಪ್ರಿಲ್‌ನಿಂದಲೇ ಪದವಿಯ ಪ್ರಥಮ ಸೆಮಿಸ್ಟರ್‌ಗೆ ದಾಖಲಾತಿ ಪ್ರಕ್ರಿಯೆ ಆರಂಭ

ರಾಜ್ಯದಾದ್ಯಂತ ಇರುವ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಮತ್ತು ಹೊಸ ಕೋರ್ಸ್‌ಗಳ ಸಂಯೋಜನೆ ಪ್ರಕ್ರಿಯೆಗೆ ಏಕರೂಪದ ವೇಳಾಪಟ್ಟಿ ಪ್ರಕಟಿಸಲು ಉನ್ನತ ಶಿಕ್ಷಣ ಇಲಾಖೆ ದೃಢ ಹೆಜ್ಜೆ ಇರಿಸಿದ್ದು 2025-26ನೇ ಸಾಲಿನ ವೇಳಾಪಟ್ಟಿಯನ್ನು ಪ್ರಕಟಿಸಿದೆ.
2025-26ನೇ ಸಾಲಿನ ಶೈಕ್ಷಣಿಕ ಮತ್ತು ಸಂಯೋಜನ ವೇಳಾಪಟ್ಟಿಯು ಅ. 2024ರಿಂದಲೇ ಆರಂಭಗೊಂಡು 2025ರ ಮಾರ್ಚ್/ಎಪ್ರಿಲ್ ನಲ್ಲಿ ಅಂತ್ಯಗೊಳ್ಳಲಿದೆ. ಎಪ್ರಿಲ್‌ ನಿಂದಲೇ ಪದವಿಯ ಪ್ರಥಮ ಸೆಮಿಸ್ಪರ್‌ಗೆ ದಾಖಲಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಉನ್ನತ ಶಿಕ್ಷಣ ಇಲಾಖೆ ಮೂರ್ನಾಲ್ಕು ವರ್ಷದಿಂದ ಏಕರೂಪದ ವೇಳಾಪಟ್ಟಿತಯಾರಿಸಿ, ಜಾರಿಗೊಳಿಸುವ ಪ್ರಯತ್ನ
ನಡೆಸುತ್ತಿದ್ದು ಅಂತಿಮವಾಗಿ ಇದೀಗ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ಸಿದ್ಧತೆ ಆರಂಭಿಸಿದೆ. ಪದವಿಯ ಮೊದಲ ಸೆಮಿಸ್ಟರ್‌ನ ದಾಖಲಾತಿ ಎ.15ರಿಂದ ಆರಂಭಗೊಳ್ಳಲಿದೆ. ಪ್ರಥಮ, ತೃತೀಯ ಮತ್ತು ಐದನೇ ಸೆಮಿಸ್ಟರ್ ಜು, 9ರಿಂದ ಆರಂಭಗೊಳ್ಳಲಿದ್ದು, ಈ ಸೆಮಿಸ್ಟರ್ ಸೆ.26ಕ್ಕೆ ಕೊನೆಗೊಳ್ಳಲಿದೆ. (UG and PG)

ಸ್ನಾತಕೋತ್ತರ ಕೋರ್ಸ್‌ಗಳ ದಾಖಲಾತಿ ಪ್ರಕ್ರಿಯೆ ಆ. 19ರಿಂದ ಆರಂಭಗೊಳ್ಳಲಿದೆ. ಸಪ್ಟೆಂಬರ್ 1ಕ್ಕೆ ಪ್ರಥಮ, ತೃತೀಯ ಸೆಮಿಸ್ಟ‌ನ ತರಗತಿಗಳುಆರಂಭಗೊಳ್ಳಲಿದ್ದು ಡಿ. 19ಕ್ಕೆ ಅಂತ್ಯಗೊಳ್ಳಲಿದೆ.ಪರೀಕ್ಷೆಗಳು ಡಿ.12ಕ್ಕೆ ಆರಂಭವಾಗಲಿದೆ.ಯುಜಿಸಿ ನಿಯಮದಂತೆ 2025-26ರಸಾಲಿನಲ್ಲಿ ಪ್ರತಿ ಸೆಮಿಸ್ಟರ್‌ನಲ್ಲಿ ಕನಿಷ್ಠ 90 ದಿನಗಳ ಕೆಲಸದ ಅವಧಿ ಇರುವಂತೆ ವೇಳಾಪಟ್ಟಿರೂಪಿಸಲಾಗಿದೆ. ವಾರದಲ್ಲಿ ಆರು ದಿನಗಳನ್ನು ಕೆಲಸದ ದಿನಗಳೆಂದು ಪರಿಗಣಿಸಲಾಗಿದೆ.ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಡಿ ಬರುವ ಸಾರ್ವಜನಿಕ ವಿ.ವಿ.ಗಳಲ್ಲಿಸಂಯೋಜನ ಪ್ರಕ್ರಿಯೆಯನ್ನು ಇದೇ ಅ. 9ರಿಂದ ಆರಂಭಿಸಿ 2025ರ ಮಾರ್ಚ್ 31ರೊಳಗೆ ಪೂರ್ಣಗೊಳಿಸಬೇಕು.ಖಾಸಗಿ ವಿ.ವಿ.ಗಳ ಸೀಟು ಹೆಚ್ಚಳ, ಕಡಿತ, ಹೊಸ ಸಂಯೋಜನೆ ಸೇರಿದಂತೆ ಇನ್ನಿತರ ಚಟುವಟಿಕೆಗೆ ಇದೇ ಆ. 7ರಿಂದ ಅವಕಾಶ ಆರಂಭವಾಗಲಿದ್ದು ಮಾ. 31ಕ್ಕೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದೆ.

ಬಿಇ, ಬಿ.ಟೆಕ್ ಮತ್ತು ಬಿ.ಅರ್ಕ್‌ ಕೋರ್ಸ್‌ಗೆ ಸಂಬಂಧಿಸಿದಂತೆ 2025ರ ಎಪ್ರಿಲ್ 10ರಿಂದವಿಟಿಯು ಸ್ಥಳ ಪರಿಶೀಲನೆ ನಡೆಸುವುದರೊಂದಿಗೆ ಆರಂಭಗೊಳ್ಳಲಿದ್ದು ಮೇ 21ಕ್ಕೆ ರಾಜ್ಯ ಸರಕಾರದಿಂದ ನಿರಾಕ್ಷೇಪಣ ಪತ್ರ ಪಡೆಯಲು ಕೊನೆಯ ದಿನವಾಗಿರಲಿದೆ. ಇನ್ನು ಎಂಬಿಎ, ಎಂಸಿಎ, ಎಂಟೆಕ್ಮತ್ತು ಎಂ. ಅರ್ಕ್ ಸ್ನಾತಕೋತ್ತರ ಕೋರ್ಸ್ ವಿಟಿಯು 2025ರ ಎಪ್ರಿಲ್ 10ಕ್ಕೆ ಸ್ಥಳ ಪರಿಶೀಲನೆಗಳ ಸಂಯೋಜನೆ, ಸೀಟು ಹೆಚ್ಚಳ ಪ್ರಕ್ರಿಯೆಗೆ ನಡೆಸಲಿದೆ. ಮೇ 21 ರಾಜ್ಯ ಸರಕಾರ ನಿರಾಕ್ಷೇಪಣಪತ್ರ ನೀಡಲಿದೆ.


ಎಪ್ರಿಲ್ 18, 19ಕ್ಕೆ ಸಿಇಟಿ ಎಂಜಿನಿಯರಿಂಗ್, ನರ್ಸಿಗ್, ಪುವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ
ಪ್ರವೇಶಕ್ಕಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)- 2025-26ನೇ ಸಾಲಿನಲ್ಲಿ
ಎಪ್ರಿಲ್ 18 ಮತ್ತು ಎ.19ರಂದು ನಡೆಯಲಿದೆ.ಮೇ 28ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದ್ದು
ಜೂನ್ 25ಕ್ಕೆ ಮೊದಲ ಸುತ್ತಿನ ಕೌನ್ಸಿಲಿಂಗ್‌,ಜುಲೈ 10ಕ್ಕೆ ಎರಡನೇ ಸುತ್ತಿನ ಕೌನ್ಸಿಲಿಂಗ್ ಮತ್ತು
ಜು. 25 ಎರಡನೇ ಸುತ್ತಿನ ಮುಂದುವರಿದ ಕೌನ್ಸಿಲಿಂಗ್‌ ನಡೆಯಲಿದ್ದು ಆಗಸ್ಟ್ 1ಕ್ಕೆ ತರಗತಿ
ಪ್ರಾರಂಭವಾಗಲಿದೆ.
ಇನ್ನು ಎಂಬಿಎ, ಎಂಸಿಎ, ಎಂಟೆಕ್ ಮತ್ತು ಎಂ. ಅರ್ಕ್ ಸ್ನಾತಕೋತ್ತರ ಕೋರ್ಸ್‌ಗಳಿಗೆ
ಸಿಐಟಿ ಜೂನ್ 30ಕ್ಕೆ ನಿಗದಿಯಾಗಿದ್ದು ಆಗಸ್ಟ್ 5ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ ಕೌನ್ಸಿಲಿಂಗ್ ಆ.26, ಎರಡನೇ ಸುತ್ತಿನ ಕೌನ್ಸಿಲಿಂಗ್ ಸೆ.4ಕ್ಕೆ ನಡೆಯಲಿದ್ದು ಸೆ.10ಕ್ಕೆಪ್ರಾರಂಭಗೊಳ್ಳಲಿದೆ.

(UG and PG)

(UG and PG)

Related Posts

ಮನೆ ಯಜಮಾನಿಯರಿಗೆ ಗುಡ್ ನ್ಯೂಸ್ : ನವೆಂಬರ್ ತಿಂಗಳ “ಗೃಹಲಕ್ಷ್ಮಿ”(gruha lakshmi) ಹಣ ಬಿಡುಗಡೆ ಬಗ್ಗೆ ಸಿಎಂ ಮಾಹಿತಿ!!

ಬಳ್ಳಾರಿ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ (gruha lakshmi ) ಯೋಜನೆಯಡಿ ನವೆಂಬರ್ ತಿಂಗಳ ಹಣ ಬಿಡುಗಡೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಗೃಹಲಕ್ಷ್ಮಿಗೆ ( gruha lakshmi )ಹಂಚಲು…

Continue reading
ಉಪ ಚುನಾವಣೆ (By Election)ಜಿದ್ದಾಜಿದ್ದಿ; ಮೂರು ಕ್ಷೇತ್ರ ಗೆಲ್ತೇವೆ ಅಂತಿದ್ದ ಕಾಂಗ್ರೆಸ್ಗೆ ಆಂತರಿಕ ಸಮೀಕ್ಷೆಯಲ್ಲಿ ​ ಶಾಕ್!!(bjp vs congress)

ಸಂಡೂರು (Sandur By Election) ಮಿನಿ ಸಮರ ರಣಕಣ ರಂಗೇರಿದೆ. ಕಾಂಗ್ರೆಸ್‌, ಬಿಜೆಪಿ ತಮ್ಮ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ. ಸಂಡೂರಿನ ಬನ್ನಿಕಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ತುಕಾರಂ ಪರ ಮತಯಾಚನೆ ಮಾಡಿದರು. (bjp vs congress)…

Continue reading

Leave a Reply

Your email address will not be published. Required fields are marked *

You Missed

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).

Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh!!

Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh!!

Pushap 2: ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

Pushap 2:  ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

ಕೆಎಲ್ ರಾಹುಲ್​ಗೆ ತಮ್ಮ ಸ್ಥಾನ ತ್ಯಾಗ ಮಾಡಿದ ನಾಯಕ ರೋಹಿತ್ ಶರ್ಮಾ; ಪಿಂಕ್ ಬಾಲ್ ಟೆಸ್ಟ್ (india vs australia)

ಕೆಎಲ್ ರಾಹುಲ್​ಗೆ ತಮ್ಮ ಸ್ಥಾನ ತ್ಯಾಗ ಮಾಡಿದ     ನಾಯಕ ರೋಹಿತ್ ಶರ್ಮಾ; ಪಿಂಕ್ ಬಾಲ್ ಟೆಸ್ಟ್ (india vs australia)

ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ (pushpa 2)! !

ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ (pushpa 2)! !