ವನಿತಾ ಟಿ20 ವಿಶಕಪ್ ಪಾಕಿಸ್ಥಾನವನ್ನು ಬಗ್ಗುಬಡಿದ ವನಿತೆಯರು(team india)
ಪಾಕಿಸ್ಥಾನ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಭಾರತ, ವನಿತಾ ಟಿ20 ವಿಶ್ವಕಪ್
ನಲ್ಲಿ ಗೆಲುವಿನ ಖಾತ ತರದಿದ.ರವಿವಾರದ ಮುಖಾಮುಖಿಯಲ್ಲಿ ಕೌರ್ ಪಡೆ 6 ವಿಕೆಟ್ಗಳಿಂದ ನೆರೆಯ
ಎದುರಾಳಿಯನ್ನು ಸದೆಬಡಿಯಿತು.
ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ಥಾನ 8 ವಿಕೆಟಿಗೆ ಕೇವಲ 105 ರನ್
ಗಳಿಸಿದರೆ, ಭಾರತ(team india) 18.5 ಓವರ್ ಗಳಲ್ಲಿ 4 ವಿಕೆಟಿಗೆ 108 ರನ್ ಬಾರಿಸಿತು. ಮೊದಲ
ಪಂದ್ಯದಲ್ಲಿಕೌ ಬಳಗನ್ಯೂಜಿಲ್ಯಾಂಡ್ವಿರುದ್ಧ 58 ರನ್ನುಗಳಿಂದ ಸೋಲನ್ನು ಅನುಭವಿಸಿತ್ತು.
ಭಾರತ(team india) ಗೆಲುವಿನ ಜತೆಗೆ ರನ್ ರೇಟ್ ಏರಿಸುವ ಯೋಜನೆಯೊಂದಿಗೆ
ಚೇಸಿಂಗ್ ಮಾಡಿತು. ಪವರ್ ಪ್ಲೇಯಲ್ಲಿ ಬಿಗ್ ಹಿಟ್ಲರ್ ಶಫಾಲಿ, ಮಂಧನಾ,
ಜೆಮಿಮಾ ಅವರಿದ್ದರೂ ಒಂದೇ ಒಂದು ಬಿಗಿ ಹೊಡೆತ ಬರಲಿಲ್ಲ. 8ನೇ
ಓವರ್ನ ಮೊದಲ ಎಸೆತದಲ್ಲಿ ಶಫಾಲಿ ಬೌಂಡರಿ ಖಾತೆ ತೆರೆದರು.
ಸ್ಕೋರ್ 18 ರನ್ ಆದಾಗ ಮಂಧನಾ (7) ವಿಕೆಟ್ ಬಿತ್ತು. ಆದರೆ ಶಫಾಲಿ-ಜೆಮಿಮಾ ಸೇರಿಕೊಂಡು
ಇನ್ನಿಂಗ್ಸ್ ಬೆಳೆಸತೊಡಗಿದರು. 10 ಓವರ್ ಅಂತ್ಯಕ್ಕೆ ಸರಿಯಾಗಿ 50 ರನ್ಒಟ್ಟುಗೂಡಿತು. 12ನೇ ಓವರ್ ತನಕ ಬ್ಯಾಟಿಂಗ್ ನಡೆಸಿದ ಶಫಾಲಿ 35 ಎಸೆತಗಳಿಂದ 32 ರನ್ ಹೊಡೆದರು,(3 ಬೌಂಡರಿ), ವನ್ ಡೌನ್ನಲ್ಲಿ ಬಂದ ಜೆಮಿಮಾ ಕೊಡುಗೆ 28 ಎಸೆತಗಳಿಂದ 23 ರನ್, ಕೌರ್ 29 ರನ್ ಮಾಡಿದ ವೇಳೆ ಗಾಯಾಳಾಗಿ ನಿರ್ಗಮಿಸಿದರು.ಜೆಮಿಮಾ ಮತ್ತು ರಿಚಾ ಘೋಷ್(0) ಅವರನ್ನು ಒಂದೇ ಓವರ್ನಲ್ಲಿ ಕೆಡವಿದ ಫಾತಿಮಾ ಸನಾ ಅಪಾಯದ ಮುನ್ಸೂಚನೆ ನೀಡಿದರೂ ಭಾರತ ಇದನ್ನು ಯಶಸ್ವಿಯಾಗಿ ನಿಭಾಯಿಸಿತು.
ಸಂಘಟಿತ ಬೌಲಿಂಗ್ ದಾಳಿ:
ಕಳೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ನ ವಿರುದ್ಧ ಸೋಲನ್ನು ಅನುಭವಿಸಿರುವ ಭಾರತ(team india).
ಪಾಕಿಸ್ಥಾನ ಪಡೆಯ ವಿರುದ್ದ ಭಾರತದ ಬೌಲರ್ ಗಳು ಅಮೋಘದಾಳಿ ಸಂಘಟಿಸಿದರು. ಮಧ್ಯಮವೇಗಿ ಅರುಂಧತಿ ರೆಡ್ಡಿ ಮತ್ತು ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್ ಸೇರಿಕೊಂಡು ನಿಯಂತ್ರಣ ಹೇರಿದರು. ಅರುಂಧತಿ
19 ರನ್ನಿಗೆ 3 ವಿಕೆಟ್ ಉರುಳಿಸಿದರೆ, ಶ್ರೇಯಾಂಕಾ 12 ರನ್ ನೀಡಿ ಇಬ್ಬರನ್ನು ಪೆವಿಲಿಯನ್ಗೆ ಅಟ್ಟಿದರು. ಕನ್ನಡತಿಯ 4 ಓವರ್ ಕೋಟಾದಲ್ಲಿ ಒಂದು ಮೇಡನ್ ಆಗಿತ್ತು. ಅವರು ಎದುರಾಳಿಗೆ ಒಂದೂ ಬೌಂಡರಿ ಬಿಟ್ಟುಕೊಡಲಿಲ್ಲ. ರೇಣುಕಾ, ದೀಪ್ತಿ, ಆಶಾ ಶೋಭನಾ ಒಂದೊಂದು ವಿಕೆಟ್ ಉರುಳಿಸಿದರು.ಗುಲ್ ಫಿರೋಜಾ ಅವರನ್ನು ಪಂದ್ಯದ ಮೊದಲ ಓವರ್ನಲ್ಲೇ ಇನ್ಸ್ವಿಂಗ್ ಎಸೆತದ ಮೂಲಕ ಬೌಲ್ಡ್
ಮಾಡಿದರೇಣುಕಾಭಾರತಕ್ಕೆ ಅಮೋಘ ಆರಂಭ ಒದಗಿಸಿದರು. ಸಿದ್ರಾ ಅಮಿನ್(8), ಒಮೈನಾ ಸೊಹೈಲ್ (3) ಕೂಡ ಬೇಗನೇ ವಾಪಸಾದರು. ಕ್ರೀಸ್ಆಕ್ರಮಿಸಿಕೊಳ್ಳಲು ಮುಂದಾಗಿದ್ದ ಎಡಗೈ ಆರಂಭಿಕ ಆಟಗಾರ್ತಿ
ಮುನೀಬಾ ಅಲಿ (17) ಶ್ರೇಯಾಂಕಾ ಎಸೆತದಲ್ಲಿ ಸಂಪ್ಟ್ ಆದರು.ಪಾಕ್ ಸರದಿಯಲ್ಲಿ ಯಾವ
ಸರದಿಯಲ್ಲಿ ಜೋಡಿಯಿಂದಲೂ ದೊಡ್ಡ ಜತೆಯಾಟ ಸಾಧ್ಯವಾಗಲಿಲ್ಲ28 ರನ್ ಮಾಡಿದ
ಮಾಜಿ ನಾಯಕಿ ನಿದಾ ದರ್ ಅವರದೇಹೆಚ್ಚಿನ ಗಳಿಕೆ, ಪವರ್ ಪ್ಲೇಯಲ್ಲಿ ಪಾಕ್ 2 ವಿಕೆಟಿಗೆ 29 ರನ್, ಅರ್ಧ ಹಾದಿ ಕ್ರಮಿಸುವಾಗ 4ಕ್ಕೆ 41 ರನ್ ಮಾಡಿತ್ತು.ಈ ಪಂದ್ಯಕ್ಕಾಗಿ ಎರಡೂ ತಂಡಗಳಲ್ಲಿ ಒಂದೊಂದು ಬದಲಾವಣೆ ಕಂಡುಬಂತು. ಗಾಯಾಳು ಪೂಜಾ ವಸ್ತ್ರಾಕರ್ ಬದಲು ಸಜೀವನ್ ಸಾಜನಾ ಅವಕಾಶ ಪಡೆದರೆ, ಪಾಕಿಸ್ತಾನ ದಿಯಾನಾ ಬೇಗ್ ಬದಲು ಸಯೀದಾ ಅರೂಬ್ ಶಾ ಅವರನ್ನು ಆಡಿಸಿತು.
ಭಾರತ ತನ್ನ ಮುಂದಿನ ಪಂದ್ಯವನ್ನು ಬುಧವಾರ ಶ್ರೀಲಂಕಾ ವಿರುದ್ಧ ಆಡಲಿದೆ.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-8
ವಿಕೆಟಿಗೆ 105 (ನಿದಾ ದರ್ 28,
ಮುನೀಬಾ 17, ಅರೂಬ್ ಔಟಾಗದೆ
14, ಅರುಂಧತಿ 19ಕ್ಕೆ 3, ಶ್ರೇಯಾಂಕಾ
12ಕ್ಕೆ 2). ಭಾರತ-18.5 ಓವರ್ಗಳಲ್ಲಿ
4 ವಿಕೆಟಿಗೆ 108 (ಶಫಾಲಿ 32, ಕೌ
29, ಜೆಮಿಮಾ 23, ಸನಾ 23ಕ್ಕೆ 2).
ಪಂದ್ಯಶ್ರೇಷ್ಠ ಅರುಂಧತಿ ರೆಡ್ಡಿ