ವಿಶ್ವಕಪ್: ಭಾರತಕ್ಕೆ(Team India) ಆಘಾತ
ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ(Team India) ಸೋಲಿನ ಆರಂಭ ಪಡೆದಿದೆ. ಶುಕ್ರವಾರದ ಮೊದಲ ಮುಖಾಮುಖಿಯಲ್ಲಿ ನ್ಯೂಜಿಲ್ಯಾಂಡ್ ಕೈಯಲ್ಲಿ 58 ರನ್ನುಗಳ ಆಘಾತಕ್ಕೆ ಸಿಲುಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ನ್ಯೂಜಿಲ್ಯಾಂಡ್ 4 ಕೆ 160 ರನ್ನುಗಳ ಸವಾಲಿನ ಮೊತ್ತ ಸೇರಿಸಿದರೆ,
ಭಾರತ (Team India)19 ಓವರ್ಗಳಲ್ಲಿ 102ಕೆ ಆಲೌಟ್ ಆಯಿತು,
ಚೇಸಿಂಗ್ ವೇಳೆ ಭಾರತ(Team India) ಉತ್ತಮ ಆರಂಭ ಪಡೆಯಲು ವಿಫಲವಾಯಿತು.
ಶಫಾಲಿ ವರ್ಮ ಕೇವಲ 2 ರನ್ ಮಾಡಿ ಮೊದಲಿಗರಾಗಿ ಪೆವಿಲಿಯನ್
ಸೇರಿಕೊಂಡರು. ಸ್ಮೃತಿ ಮಂಧನಾ (12),ನಾಯಕಿ ಹರ್ಮನ್ ಪ್ರೀತ್ ಕೌರ್
(ಸರ್ವಾಧಿಕ 15) ಕಿವೀಸ್ ದಾಳಿಯನ್ನು ತಡೆದು ನಿಲ್ಲಲು ವಿಫಲರಾದರು.ಪವರ್ ಪ್ಲೇ ಒಳಗಾಗಿ 42 ರನ್ಸಿಗೆ 3 ವಿಕೆಟ್ ಪತನ ವಾಗಿತ್ತು. ಜೆಮಿಮಾ (13), ರಿಜಾ ಘೋಷ್ (12) ಕೂಡ ನೆರವಿಗೆ ನಿಲ್ಲಲಿಲ್ಲ.ರೋಸ್ ಮೇರಿ ಮೈರ್ 4, ಲೀ ಟ ಹುಹು 3 ವಿಕೆಟ್ ಕಿತ್ತರು.
ನ್ಯೂಜಿಲ್ಯಾಂಡ್ ಉತ್ತಮ ಆರಂಭ ಪಡೆದ ಬಳಿಕ ನಾಯಕಿ ಸೋಫಿಡಿವೈನ್ ಬಾರಿಸಿದ ಅರ್ಧ ಶತಕ ನೂರೈವತ್ತರ ಗಡಿದಾಟಿತು.ಆರಂಭಿಕರಾದ ಸುಝೀ ಬೇಟ್ಸ್-ಜಾರ್ಜಿಯಾ ಪ್ಲಿಮ್ಮರ್ 7.4 ಓವರ್ಗಳಿಂದ 67 ರನ್ ಪೇರಿಸಿ ಉತ್ತಮ ಅಡಿಪಾಯ ನಿರ್ಮಿಸಿದರು.4ನೇ ಕ್ರಮಾಂಕದಲ್ಲಿ ಆಡಿದ ಸೋಫಿ 36 ಎಸೆತಗಳಿಂದ 57 ರನ್ ಬಾರಿಸಿ ಅಜೇಯರಾಗಿ ಉಳಿದರು (7ಬೌಂಡರಿ).ಅಮೇಲಿಯಾ ಕೆರ್ (13) ಮತ್ತು ಬೂಕ್ ಹಾಲಿಡೇ (16) ಬೇಗನೇ ಔಟಾದರು ಡಿವೈನ್ ಒಂದೆಡೆ ಕ್ರೀಸ್ ಕಾಯ್ದುಕೊಂಡ ಕಾರಣ ನ್ಯೂಜಿಲ್ಯಾಂಡ್ಇನ್ನಿಂಗ್ಸ್ ಬೆಳೆಯುತ್ತ ಹೋಯಿತು.ಭಾರತದ(Team India) ಪರ ರೇಣುಕಾ ಸಿಂಗ್ 2,ಅರುಂಧತಿ ರೆಡ್ಡಿ ಮತ್ತು ಆಶಾ ಶೋಭನಾ ತಲಾ ಒಂದು ವಿಕೆಟ್ ಕಬಳಿಸಿದರು.