ವಿಶ್ವವೇ ಮೆಚ್ಚಿದ್ದ ”ಸ್ಕ್ವಿಡ್ ಗೇಮ್ಸ್”(squid game) ಮತ್ತೇ ಬರುತ್ತಿದ್ದೆ ಆಟ ಅದೇ, ಆಟಗಾರರು ಮಾತ್ರ ಬದಲು

2021 ರಲ್ಲಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದ್ದ “ಸ್ಕ್ವಿಡ್ ಗೇಮ್ಸ್”(squid game) ದಾಖಲೆಗಳನ್ನು ಇತಿಹಾಸ ಬರೆದಿತ್ತು. ಅತೀ ಹೆಚ್ಚು ವೀಕ್ಷಿಸಲಾದ ವೆಬ್ ಸರಣಿಗಳಲ್ಲಿ ಒಂದತ್ತ ಈ ಶೋ. ಈಗ ಮತ್ತೆ ಸ್ಕ್ವಿಡ್ ಗೇಮ್ಸ್ ಸೀಸನ್ 2 ಬಿಡುಗಡೆ ಆಗುತ್ತಿದೆ. ಶೋನ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದೆ.

ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಂದಿ ನೋಡಿದ ಶೋ ಎನಿಸಿಕೊಂಡಿತ್ತು ಕೊರಿಯಾದ ”ಸ್ಕ್ವಿಡ್ ಗೇಮ್ಸ್”(squid game) ನೆಟ್ಫ್ಲಿಕ್ಸ್ನಲ್ಲಿ ಮೊದಲ ಬಾರಿ ಬಿಡುಗಡೆ ಆದಾಗ ವಿಶ್ವದಾಖಲೆಯನ್ನು ಬರೆದಿತ್ತು ಈ ಶೋ. ಬಹುತೇಕ ಎಲ್ಲರೂ ತಮ್ಮ ಸಣ್ಣ ವಯಸ್ಸಿನಲ್ಲಿ ಆಡಿರುವ ಆಟಗಳನ್ನೇ ಸ್ಪರ್ಧಿಗಳಿಗೆ ಆಡಿಸಿ ಅವರಿಗೆ ಭಾರಿ ದೊಡ್ಡ ಮೊತ್ತದ ಬಹುಮಾನದ ಮೊತ್ತವನ್ನು ನೀಡುವ ರಿಯಾಲಿಟಿ ಶೋ . ಆದರೆ ಇಲ್ಲಿ ಸೋತವನು ಮನೆಗೆ ಹೋಗುವುದಿಲ್ಲ ಬದಲಿಗೆ ಸತ್ತೇ ಹೋಗುತ್ತಾನೆ. ಎಲ್ಲ ಆಟ ಆಡಿ ಗೆದ್ದು ಕೊಲೆಯಲ್ಲಿ ಉಳಿಯುವ ಒಬ್ಬ ವ್ಯಕ್ತಿ ವಿಜೇತನಾಗುತ್ತಾನೆ ಅವನಿಗೆ ಕೋಟ್ಯಂತರ ರೂಪಾಯಿ ಬಹುಮಾನ ನೀಡಲಾಗುತ್ತದೆ.

”ಸ್ಕ್ವಿಡ್ ಗೇಮ್ಸ್”(squid game) ವೆಬ್ ಸರಣಿ 2021 ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಿದರು. ಆ ಸಮಯದಲ್ಲಿ ವಿಶ್ವದಾದ್ಯಂತ ಭಾರಿ ಸಂಖ್ಯೆಯ ಜನ ಈ ಶೋ ಅನ್ನು ನೋಡಿದ್ದರು. ವಿಶ್ವದಲ್ಲಿ ಅತಿ ಹೆಚ್ಚು ವೀಕ್ಷಿಸಲಾದ ವೆಬ್ ಸರಣಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತು ”ಸ್ಕ್ವಿಡ್ ಗೇಮ್ಸ್”(squid game) ಮಾತ್ರವಲ್ಲದೆ ನೆಟ್ಫ್ಲಿಕ್ಸ್ಗೆ ಭಾರಿ ಲಾಭ ಮಾಡಿಕೊಟ್ಟ ಶೋ ಎಂಬ ಖ್ಯಾತಿಯನ್ನೂ ಪಡೆದುಕೊಂಡಿತ್ತು. ಆ ಸಮಯದಲ್ಲಿಯೇ ಈ ವೆಬ್ ಸರಣಿಯ ಎರಡನೇ ಸೀಸನ್ ಘೋಷಿಸಲಾಗಿತ್ತು. ಈಗ ಮೂರು ವರ್ಷದ ಬಳಿಕ ಈ ವೆಬ್ ಸರಣಿಯ ಎರಡನೇ ಸೀಸನ್ ಬಿಡುಗಡೆ ಆಗಲಿದೆ.

”ಸ್ಕ್ವಿಡ್ ಗೇಮ್ಸ್”(squid game) ಸೀಸನ್ 2ರ ಟ್ರೈಲರ್ ಇದೀಗ ಎಲ್ಲೆಡೆ ಬಿಡುಗಡೆ ಆಗಿದೆ. ಮೊದಲ ಸೀಸನ್​ನ ವಿಜೇತ ಸಾಂಗ್ ಜಿ ಹುನ್ ಈಗ ಎರಡನೇ ಸೀಸನ್​ನಲ್ಲಿ ಮತ್ತೆ ಆಟ ಆಡಲು ಹೋಗಿದ್ದಾನೆ. ಆದರೆ ಮೊದಲ ಬಾರಿ ಆತ ಆಡಿದ ಆಟಗಳೇ ಈ ಬಾರಿಯೂ ಇವೆ, ಹಾಗಾಗಿ ಯಾರೂ ಸಾಯದಂತೆ ಎಲ್ಲರೂ ಗೆಲ್ಲುವಂತೆ ಆಟ ಆಡಿಸಲು ತಾನೇ ನೇತೃತ್ವ ವಹಿಸಿದ್ದಾನೆ. ಆದರೆ ಆತನ ಮಾತು ಕೇಳದ ಕೆಲವರು ಆಟದಲ್ಲಿ ಸೋತು ಸಾವನ್ನಪ್ಪಿದ್ದಾರೆ. ಆಟ ಆಡಿಸುವಾತನ ಎಲ್ಲರನ್ನೂ ಕೊಲ್ಲುವ ಪ್ರಯತ್ನದಲ್ಲಿದ್ದಾ ಆಟ ಆಡುತ್ತಿರುವ ಸಾಂಗ್ ಜಿ ಹುನ್ ಎಲ್ಲರನ್ನೂ ಬದುಕಿಸುವ ಪ್ರಯತ್ನದಲ್ಲಿದ್ದಾನೆ. ಇಬ್ಬರಲ್ಲಿ ಯಾರಿಗೆ ಗೆಲುವಾಗುತ್ತದೆ ಎಂಬ ಈಗ ಬಿಡುಗಡೆ ಆಗಿರುವ ಟ್ರೈಲರ್ ಕುತೂಹಲ ಮೂಡಿಸಿದೆ.

ಇನ್ನು ಮೊದಲ ಸೀಸನ್ನಲ್ಲಿದ್ದ ಇದ್ದ ರೀತಿಯಲ್ಲಿಯೇ ಆಟಗಾರರ ಸಮವಸ್ತ್ರ, ಆಟ ಆಡಿಸುವವರ ಮುಖ ಕಾಣಿಸದ ಸಮವಸ್ತ್ರಗಳಿವೆ. ಈ ಬಾರಿ ಆಟ ಆಡಿಸುವ ಮುಖ್ಯ ವಿಲನ್ ಯಾರೆಂದು ಸಹ ತೋರಿಸಲಾಗಿದೆ. ಆದರೆ ಮೊದಲ ಸೀಸನ್ನಲ್ಲಿ ಇದನ್ನು ತೋರಿಸಿರಲಿಲ್ಲ. ”ಸ್ಕ್ವಿಡ್ ಗೇಮ್”(squid game) ಸೀಸನ್ 2 ಡಿಸೆಂಬರ್ 26ಕ್ಕೆ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದೆ. ಮೊದಲ ಸೀಸನ್ ನಿರ್ದೇಶನ ಮಾಡಿದ್ದ ಕೊರಿಯಾದ ಹ್ವಾಂಗ್ ಡಾಕ್ ಹ್ಯುಕ್ ಅವರೇ ಎರಡನೇ ಸೀಸನ್ ಕೂಡ ನಿರ್ದೇಶನ ಮಾಡಿದ್ದಾರೆ.

Related Posts

ಭಾರತದಲ್ಲಿ ಹೆಚ್ಚು ದಾನ ಮಾಡಿದವರ ಪಟ್ಟಿ ಬಿಡುಗಡೆ ಮಾಡಲಾಗಿದೆ ಮೊದಲ ಸ್ಥಾನದಲ್ಲಿ ಶಿವ್ ನಾಡರ್(shiv nadar)!!

ಭಾರತ ಇತಿಹಾಸ ಕಾಲದಿಂದಲೂ ದಾನ ಧರ್ಮಕ್ಕೆ ಪ್ರಸಿದ್ಧಿ. ಅಧುನಿಕ ಭಾರತದಲ್ಲೂ ಭಾರತದಲ್ಲಿ ದಾನ ಧರ್ಮಕ್ಕೆ ಪ್ರಥಮ ಸ್ಥಾನ. ಭಾರತದಲ್ಲಿ ಉದ್ಯಮಿಗಳು, ಶ್ರೀಮಂತರು, ಸೆಲೆಬ್ರೆಟಿಗಳು ಹೆಚ್ಚಿನ ಮೊತ್ತ ದಾನ ಮಾಡಿದ್ದಾರೆ. ದೇಶಕ್ಕೆ ತೊಂದರೆ ಎದುರಾದಾಗ ದೇಣಿಗೆ ನೀಡಿ ಬೆನ್ನೆಲುಬಾಗಿ ನಿಂತಿದ್ದಾರೆ. ಹುರನ್ ಇಂಡಿಯಾ…

Continue reading
ನವೀಕರಿಸಬಹುದಾದ ಇಂಧನ ಯೋಜನೆ ಸ್ಥಗಿತ; ಟ್ರಂಪ್‌ (donald trump)ಘೋಷಣೆ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ತಲ್ಲಣ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ(US Presidential Election 2024)ಯಲ್ಲಿ ಪ್ರಚಂಡ ಗೆಲುವು ಸಾಧಿಸಿ ಎರಡನೇ ಬಾರಿ ಅಧ್ಯಕ್ಷ ಪಟ್ಟಕೇರಿರುವ ಬೆನ್ನಲ್ಲೇ ಡೊನಾಲ್ಡ್‌ ಟ್ರಂಪ್‌(Donald Trump) ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ನಿಲ್ಲಿಸುವ ಪ್ರತಿಜ್ಞೆಯು ಉದ್ಯಮಿಗಳಿಗೆ ದೊಡ್ಡ ಶಾಕ್‌ ಕೊಟ್ಟಿದೆ.ಇದು ನವೀಕರಿಸಬಹುದಾದ ಇಂಧನ ಷೇರುಗಳು…

Continue reading

Leave a Reply

Your email address will not be published. Required fields are marked *

You Missed

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).

Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh!!

Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh!!

Pushap 2: ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

Pushap 2:  ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

ಕೆಎಲ್ ರಾಹುಲ್​ಗೆ ತಮ್ಮ ಸ್ಥಾನ ತ್ಯಾಗ ಮಾಡಿದ ನಾಯಕ ರೋಹಿತ್ ಶರ್ಮಾ; ಪಿಂಕ್ ಬಾಲ್ ಟೆಸ್ಟ್ (india vs australia)

ಕೆಎಲ್ ರಾಹುಲ್​ಗೆ ತಮ್ಮ ಸ್ಥಾನ ತ್ಯಾಗ ಮಾಡಿದ     ನಾಯಕ ರೋಹಿತ್ ಶರ್ಮಾ; ಪಿಂಕ್ ಬಾಲ್ ಟೆಸ್ಟ್ (india vs australia)

ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ (pushpa 2)! !

ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ (pushpa 2)! !