ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಮೆಗಾ ಹರಾಜಿಗೆ ಇನ್ನು ಮೂರು ದಿನ ಮಾತ್ರ ಬಾಕಿ ಉಳಿದಿದೆ. ನವೆಂಬರ್ 24, 25 ರಂದು ಜೆಡ್ಡಾದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಯಾವ ಆಟಗಾರರು ಯಾವ ತಂಡ ಸೇರುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB) ಮೆಗಾ ಹರಾಜಿಗೆ ಮುನ್ನ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡು ಎಲ್ಲಾ ಆಟಗಾರರನ್ನು ಬಿಡುಗಡೆ ಮಾಡಿದ್ದು, ಬಲಿಷ್ಠ ತಂಡವನ್ನು ಕಟ್ಟಲು ಯೋಜನೆ ರೂಪಸಿದೆ ಎಂದು ಅಂದಾಜು ಮಡಲಾಗಿದೆ.
ಮೆಗಾ ಹರಾಜಿಗೆ ಮುನ್ನವೇ ಆರ್ ಸಿಬಿ(RCB) ಆಟಗಾರನಿಗೆ ನಾಯಕತ್ವ ಸಿಕ್ಕಿದೆ.ಆರ್ಸಿಬಿ ತಂಡದ ಭರವಸೆಯ ಬ್ಯಾಟರ್ ರಜತ್ ಪಟಿದಾರ್ (rajat patidar)ರನ್ನು ತಂಡವನ್ನು ಬರೋಬ್ಬರಿ 11 ಕೋಟಿ ರೂಪಾಯಿ ನೀಡುವ ಮೂಲಕ ತಂಡದಲ್ಲೇ ಇರಿಸಿಕೊಂಡಿದ್ದಾರೆ. ಸ್ಪಿನ್, ವೇಗದ ಬೌಲಿಂಗ್ಗೆ ಸ್ಪೋಟಕ ಬ್ಯಾಟಿಂಗ್ ಮಾಡುವ ಪಟಿದಾರ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಐಪಿಎಲ್ 2025ರ ಆವೃತ್ತಿಗೆ ಮುನ್ನ ಅವರಿಗೆ ನಾಯಕತ್ವದ ಜವಾಬ್ದಾರಿ ಸಿಕ್ಕಿದೆ ಎಂಬುದು ಸಂತೋಷದ ಸುದ್ದಿ.
ದೇಶೀಯ ಕ್ರಿಕೆಟ್ನಲ್ಲಿ ರಜತ್ ಪಟಿದಾರ್ (rajat patidar)ಮಧ್ಯಪ್ರದೇಶ ತಂಡಕ್ಕಾಗಿ ಆಡುತ್ತಾರೆ. ನಾಳೆಯಿಂದ (ನವೆಂಬರ್ 22) ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ರಜತ್ ಪಟಿದಾರ್ (rajat patidar)ಮಧ್ಯಪ್ರದೇಶ ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಪಂದ್ಯಾವಳಿಯಲ್ಲಿ ಅವರು ಉತ್ತಮವಾಗಿ ನಾಯಕತ್ವದ ಜವಾಬ್ದಾರಿ ನಿಭಾಯಿಸಿದರೆ, ಐಪಿಎಲ್ನಲ್ಲಿ ಕೂಡ ಅವರನ್ನು ನಾಯಕತ್ವಕ್ಕೆ ಪರಿಗಣಿಸುವ ಸಾಧ್ಯತೆ ಕೂಡ ಇದೆ.
ಶುಭಾಶಯ ತಿಳಿಸಿದ ಆರ್ಸಿಬಿರಜತ್ ಪಟಿದಾರ್(rajat patidar)
ಮಧ್ಯಪ್ರದೇಶ ಟಿ20 ತಂಡದ ನಾಯಕನಾಗಿ ಆಯ್ಕೆಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಧಿಕೃತ ಎಕ್ಸ್ ಖಾತೆಯಲ್ಲಿ ಶುಭಾಶಯ ಕೋರಿದೆ. ಇದು ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆಗಳನ್ನು ಪ್ರಾರಂಭ ಮಡಿದೆ 2025ರ ಐಪಿಎಲ್ನಲ್ಲಿ ಆರ್ ಸಿಬಿ (RCB) ಹೊಸ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದೆ. ಫಾಫ್ ಡುಪ್ಲೆಸಿಸ್ರನ್ನು ರಿಟೈನ್ ಮಾಡಿಕೊಳ್ಳದೆ ಬಿಡುಗಡೆ ಮಾಡಿದ್ದು, ಭವಿಷ್ಯದ ದೃಷ್ಟಿಯಿಂದ ಯುವ ಆಟಗಾರನನ್ನು ಹುಡುಕುತ್ತಿದೆ. ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ಅಥವಾ ರಿಷಬ್ ಪಂತ್ರನ್ನು ಖರೀದಿ ಮಾಡಿ ನಾಯಕರನ್ನಾಗಿ ಮಾಡಿ ಎಂದು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.