Pro Kabaddi League: ತೆಲುಗು ಟೈಟಾನ್ಸ್‌ ಅಬ್ಬರಕ್ಕೆ ಮಣಿದ ಬೆಂಗಳೂರು ಬುಲ್ಸ್‌(Bengaluru Bulls)

ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಗೆ ಶುಕ್ರವಾರ ಅದ್ದೂರಿ ಚಾಲನೆ ದೊರೆತಿದೆ. ಆರಂಭಿಕ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ ಬೆಂಗಳೂರು ಬುಲ್ಸ್‌ (Bengaluru Bulls)37- 29 ಅಂಕಗಳಿಂದ ಪರಾಭವ ಗೊಂಡಿದೆ.ಟಾಸ್‌ ಗೆದ್ದು ಕೋರ್ಟ್‌ ಆಯ್ದುಕೊಂಡ ಬೆಂಗಳೂರು ಬುಲ್ಸ್‌ಗೆ ತಮ್ಮದೇ ತಂಡದ ಹಳೇ ಆಟಗಾರ ಪವನ್‌ ಸೆಹ್ರಾವತ್‌ ಮೊದಲ ರೈಡ್‌ನಿಂದಲೇ ನೈಜ ಆಟ ಆರಂಭಿಸಿದರು.ಮೊದಲ ರೈಡ್‌ನ‌ಲ್ಲೇ 2 ಅಂಕ ಗಳಿಸಿಕೊಂಡ ಪವನ್‌ ಕೊನೆಯವರೆಗೂ ಬೆಂಗಳೂರು ತಂಡದ ಸಿಂಹಸ್ವಪ್ನ ಆಗಿ ಟೈಟನ್ಸ್‌ಗೆ 37-29 ಅಂಕಗಳ ಗೆಲುವು ತಂದುಕೊಟ್ಟರು.

ರೈಡಿಂಗ್‌ ವಿಭಾಗದಲ್ಲಿ ಬುಲ್ಸ್‌ ವೈಫಲ್ಯ
ಕಳೆದ ಬಾರಿ ಪ್ಲೇ ಆಫ್ಗೇರಲು ವಿಫ‌ಲವಾಗಿದ್ದ ಬೆಂಗಳೂರು ಬುಲ್ಸ್‌(Bengaluru Bulls)ಈ ಬಾರಿ ರೈಡಿಂಗ್‌ನಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಂಡಿತ್ತು. ಪ್ರೋ ಕಬಡ್ಡಿ ಇತಿಹಾಸದಲ್ಲೇ ಗರಿಷ್ಠ ರೈಡಿಂಗ್‌ ಅಂಕ ಹೊಂದಿರುವ ಪರ್ದೀಪ್‌ ನರ್ವಾಲ್‌ರನ್ನು ತಂಡಕ್ಕೆ ಸೇರಿಸಿಕೊಂಡಿದ್ದರೂ ಸಹ ರೈಡರ್‌ಗಳು ನಿರೀಕ್ಷಿತ ಪ್ರದರ್ಶನ ತೋರದ ಕಾರಣ ಹಿನ್ನಡೆಯುಂಟಾಯಿತು. ಬೆಂಗಳೂರು ರೈಡರ್‌ಗಳು ರೈಡಿಂಗ್‌ನಲ್ಲಿ 10 ಅಂಕಗಳನ್ನಷ್ಟೇ ತರಲು ಶಕ್ತವಾದರು.

ಪವನ್‌ ಬಿರುಸಿನ ಆಟ
ಸ್ಟಾರ್‌ ರೈಡರ್‌ ಪವನ್‌ ಸೆಹ್ರಾವತ್‌ ಆರಂಭದಿಂದಲೇ ಅಂಕ ಗಳಿಸಲು ಆರಂಭಿಸಿದರು. 11 ಯಶಸ್ವಿ ರೈಡ್‌ ಮಾಡಿದ ಪವನ್‌ 12 ಅಂಕ ಸಂಪಾದಿಸಿದರು. ಮೊದಲಾರ್ಧದಲ್ಲಿ 6 ಅಂಕ ಗಳಿಸಿಕೊಳ್ಳುವ ಮೂಲಕ ತಂಡಕ್ಕೆ 9 ಅಂಕಗಳ ಮುನ್ನಡೆ ತಂದುಕೊಟ್ಟರು.

Related Posts

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia). ಬ್ರಿಸ್ಟೇನ್: ಬಾರ್ಡರ್-ಗಾವಸ್ಕರ್ ಟ್ರೋಫಿಯ ಗಬ್ಬಾ ಟೆಸ್ಟ್‌ನ 4 ನೇ ದಿನದಂದು ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಫಾಲೋ-ಆನ್ ತಪ್ಪಿಸಿದ ಆಕಾಶ್ ದೀಪ್ ಮತ್ತು ಜಸ್ಪ್ರೀತ್ ಬುಮ್ರಾ ಆಟಕ್ಕೆ ತಂಡದ ಕೋಚ್…

Continue reading
Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh!!

Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh ಸಿಂಗಾಪುರದ ಆತಿಥ್ಯದಲ್ಲಿ ನಡೆದ ವಿಶ್ ಚೆಸ್ ಚಾಂಪಿನ್ ಶಿಪ್(World Chess Championship) : ಸಿಂಗಾಪುರದ ಆತಿಥ್ಯದಲ್ಲಿ ನಡೆದ ವಿಶ್ ಚೆಸ್​ ಚಾಂಪಿಯನ್​​ಶಿಪ್​ನಲ್ಲಿ (World Chess Championship)…

Continue reading

Leave a Reply

Your email address will not be published. Required fields are marked *

You Missed

ಸುದೀಪ್ ‘max’ ಅಬ್ಬರ : ಫ್ಯಾನ್ಸ್ ಫುಲ್ ಖುಷಿ..!

ಸುದೀಪ್ ‘max’ ಅಬ್ಬರ : ಫ್ಯಾನ್ಸ್ ಫುಲ್ ಖುಷಿ..!

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?