ಭೈರತಿ ರಣಗಲ್(bhairathi ranagal) ಕಲೆಕ್ಷನ್ ಎಷ್ಟು ಗೊತ್ತೆ? ಶಿವರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾ

ಯಾವುದೇ ಸಿನಿಮಾ ಇರಲಿ, ರಿಲೀಸ್ ಆದ ಬಳಿಕೆ ಅದರ ಗಳಿಕೆ ಕುರಿತು ಅ ಸಿನಿಮಾದ ಲೆಕ್ಕಾಚಾರ ಶುರುವಾಗುತ್ತೆ. ಅಷ್ಟಾಯ್ತು, ಇಷ್ಟಾಯ್ತು ಎಂಬ ಅಂಕಿ ಅಂಶಗಳು ಚಾಲ್ತಿಯಲ್ಲಿ ಇರುತ್ತೆ. ಹಾಗಂತ ಎಲ್ಲಾ ಸಿನಿಮಾಗಳ ಕಲೆಕ್ಷನ್ ಬಗ್ಗೆ ಮಾತಾಡಲ್ಲ. ಸ್ಟಾರ್ ಸಿನಿಮಾಗಳ ಬಗ್ಗೆಯಂತೂ ಲೆಕ್ಕಾಚಾರ ಹಾಕೋದು ಯಾವುದೇ ಕಾರಣಕ್ಕೂ ಬಿಡಲ್ಲ.

ಕೆಲವು ಸಿನಿಮಾಗಳ ಸಕ್ಸಸ್ ಅನ್ನು ಹೇಗೆ ನಿರ್ಧರಿಸ್ತಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಈಗಲೂ ಉತ್ತರವಿಲ್ಲ. ಈ ವಾರ ರಿಲೀಸ್ ಆದ ಭೈರತಿ ರಣಗಲ್(bhairathi ranagal) ವಿಷಯದಲ್ಲೂ ಈಗ ಗಳಿಕೆಯ ಲೆಕ್ಕಾಚಾರ ಆರಂಭವಾಗಿದೆ. ಭೈರತಿ ರಣಗಲ್ ,(bhairathi ranagal)ನಿಜವಾಗಲೂ ಸಕ್ಸಸ್ ಆಯ್ತಾ? ಆ ಕುರಿತು ಒಂದಷ್ಟು ಅಂಕಿ ಅಂಶಗಳ ಲೆಕ್ಕಾಚಾರ ಇಲ್ಲಿದೆ ನೋಡಿ.

ಭೈರತಿ ರಣಗಲ್ ರಿಲಿಸ್ ಬಳಿಕ ಶಿವರಾಜಕುಮಾರ್ ಅವರ ಮ್ಯಾನರಿಸಂ ಬಗ್ಗೆ ಎಲ್ಲರೂ ಮಾತಾಡುವಂತಾಗಿದೆ. ಅಷ್ಟೇ ಅಲ್ಲ, ಸಿನಿಮಾ ನೋಡಿದವರೆಲ್ಲರೂ ಇಷ್ಟಪಟ್ಟಿದ್ದಾರೆ . ಶಿವಣ್ಣನ ಲುಕ್, ಸ್ಟೈಲ್ , ಅವರ ಡೈಲಾಗ್ ಡಿಲವರಿ, ಲಾಂಗ್ ಹಿಡಿದು ಎದುರಾಳಿಗಳನ್ನು ಕತ್ತರಿಸೋ ಶೈಲಿ ಎಲ್ಲವೂ ನೋಡುಗರಿಗೆ ಸಖತ್ ಕಿಕ್ ಕೊಟ್ಟಿದೆ. ಹಾಗಾದರೆ, ಸಿನಿಮಾ ಸಕ್ಸಸ್ ಆಯ್ತಾ? ಹೌಸ್ ಫುಲ್ ಆದ ಮಾತ್ರಕ್ಕೆ ಸಿನಿಮಾ ಸಕ್ಸಸ್ ಅನ್ನುವುದನ್ನು ಒಪ್ಪಬೇಕಾ ಈ ರೀತಿಯ ಪ್ರಶ್ನೆಗಳು ಮೊದಲಿನಿಂದಲೂ ಇವೆ. ನಿಜ, ಆದರೂ, ಮೊದಲ ದಿನ ‘ಭೈರತಿ ರಣಗಲ್(bhairathi ranagal) ಸಿನಿಮಾಗೆ ಸಿಕ್ಕಿದ ರೆಸ್ಪಾನ್ಸ್ ಮಾತ್ರ ಬೆಂಕಿ. ಇಷ್ಟಕ್ಕೂ ಮೊದಲ ದಿನ ಯಾವ್ಯಾವ ಏರಿಯಾದಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಯ್ತು? ವೀಕೆಂಡ್‌ನಲ್ಲಿ ಎಷ್ಟು ಕಲೆಕ್ಷನ್ ಆಗಿರಬಹುದು ಎಂಬ ಲೆಕ್ಕಾಚಾರ ಇದೀಗ ಶುರುವಾಗಿದೆ.

ಶಿವರಾಜಕುಮಾರ್ ಅವರ ಸಿನಿಮಾಗೆ ಮೊದಲ ವಾರ ಭರ್ಜರಿ ಓಪನಿಂಗ್ ಸಿಕ್ಕೇ ಸಿಗುತ್ತೆ. ಇದು ಎಲ್ಲರಿಗೂ ಗೊತ್ತು. ಅದರಲ್ಲೂ ಕಾಂಬಿನೇಷನ್ ಸಿನಿಮಾ ಅಂದಾಗ ಒಂದಷ್ಟು ನಿರೀಕ್ಷೆ, ಕುತೂಹಲ ಇದ್ದೇ ಇರುತ್ತೆ. ಹಾಗಾಗಿ, ಅಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬೇರೆಯದ್ದೇ ಇತಿಹಾಸ ರಚಿಸುತ್ತದೆ. ಈ ಕಾರಣಕ್ಕೆ ಇದೀಗ ‘ಭೈರತಿ ರಣಗಲ್'(bhairathi ranagal) ಸಿನಿಮಾದ ಮೊದಲ ದಿನದ ಕಲೆಕ್ಷನ್ ಬಗ್ಗೆ ತುಂಬಾ ಕುತೂಹಲವಿದೆ. ವಿತರಕರ ವಲಯದಿಂದ ಸಿಕ್ಕಿರುವ ಲೆಕ್ಕದ ಪ್ರಕಾರ, ಈ ಸಿನಿಮಾ ಮೊದಲ ದಿನ 2.20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆಯಂತೆ. ಅದೇ ಇಂಡಸ್ಟ್ರಿ ಟ್ರೇಡ್ ಟ್ರ್ಯಾಕರ್ ಪ್ರಕಾರ ಈ ಸಿನಿಮಾ 2 ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ. ನಿಜಕ್ಕೂ ಮೊದಲ ದಿನ ಇಷ್ಟು ಗಳಿಕೆ ಆಗಿರೋದನ್ನು ಗೆಲುವೆನ್ನದಿರಲು ಸಾಧ್ಯವೇ?

ಹಿಂದೆ ಇದೇ ಶಿವಣ್ಣ, ನಿರ್ದೇಶಕ ನರ್ತನ್ ಅವರ ಕಾಂಬಿನೇಷನ್ ನಲ್ಲಿ ಬಂದ ಮಫ್ತಿ’ ಎಲ್ಲಾ ಏರಿಯಾಗಳಲ್ಲೂ ಉತ್ತಮ ಕಲೆಕ್ಷನ್ ಮಾಡಿತ್ತು. ಶಿವಣ್ಣ ಅವರ ಪಾತ್ರವನ್ನು ಕರುನಾಡು ಮೆಚ್ಚಿಕೊಂಡಿತ್ತು. ಈ ಕಾರಣಕ್ಕೆ ‘ಭೈರತಿ ರಣಗಲ್'( bhairathi ranagal) ಎಲ್ಲಾ ಕಡೆಯಿಂದಲೂ ಉತ್ತಮ ರೆಸ್ಪಾನ್ಸ್ ಸಿಗುತ್ತೆ ಅಂತ ಲೆಕ್ಕ ಹಾಕಲಾಗಿತ್ತು. ಅದು ನಿಜವಾಗಿದೆ .ಮೊದಲ ದಿನ ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ ಅನ್ನೋ ಅಂಕಿ ಅಂಶಗಳ ಬಗ್ಗೆ ಹೇಳೋದಾದರೆ, ಬೆಂಗಳೂರು, ಕೋಲಾರ, ತುಮಕೂರು – 1.2 ಕೋಟಿ ರೂಪಾಯಿ, ಮೈಸೂರು, ಮಂಡ್ಯ, ಕೂರ್ಗ್, ಹಾಸನ್ – 40 ಲಕ್ಷ ರೂಪಾಯಿ, ಶಿವಮೊಗ್ಗ, ದಕ್ಷಿಣ ಕನ್ನಡ – 20 ಲಕ್ಷ ರೂಪಾಯಿ, ಚಿತ್ರದುರ್ಗ, ದಾವಣಗೆರೆ – 20 ಲಕ್ಷ ರೂಪಾಯಿ, ಹೈದರಾಬಾದ್ ಕರ್ನಾಟಕ – 10 ಲಕ್ಷ ರೂಪಾಯಿ, ಹುಬ್ಬಳ್ಳಿ – 10 ಲಕ್ಷ ರೂಪಾಯಿ ಒಟ್ಟು – 2.20 ಕೋಟಿ ರೂಪಾಯಿ ಎಂದು ಊಹೆ ಮಾಡಲಾಗಿದೆ.

ಎಲ್ಲಾ ಸರಿ, ಇದು ಮೊದಲ ದಿನದ ಲೆಕ್ಕವಾದರೆ, ವೀಕೆಂಡ್ ಕಲೆಕ್ಷನ್ ಹೇಗೆಲ್ಲಾ ಇರುತ್ತೆ ಎಂಬ ಲೆಕ್ಕಾಚಾರವೂ ಆರಂಭವಾಗಿದೆ. ‘ಭೈರತಿ ರಣಗಲ್'(bhairathi ranagal) ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಹ ಸಿಕ್ಕಿದೆ. ಹೀಗಾಗಿ ಮೊದಲ ಮೂರು ದಿನಗಳ ಕಲೆಕ್ಷನ್ ಜೋರಾಗಿರುತ್ತೆ ಎಂದು ನಿರೀಕ್ಷೆ ಮಾಡಬಹುದು. ಶನಿವಾರ ಹಾಗೂ ಭಾನುವಾರ ಎರಡೂ ದಿನವೂ ಬಾಕ್ಸಾಫೀಸ್‌ನಲ್ಲಿ ಸಿನಿಮಾದ ಕಲೆಕ್ಷನ್ ಉತ್ತಮವಾಗಿರುತ್ತೆ ಅನ್ನೋ ಭರವಸೆ. ಇದಕ್ಕೆ ಕಾರಣ, ನೋಡುಗರಿಂದ ಬರುತ್ತಿರುವ ಕಾಮೆಂಟ್ ಗಳು. ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಮಾತುಗಳು. ಸಿನಿಮಾ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರದ ಪ್ರಕಾರ, ಮೊದಲ ಮೂರು ದಿನ ಈ ಸಿನಿಮಾ ಅಂದಾಜು 8 ರಿಂದ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ಅಂದಾಜು ಮಾಡಲಾಗಿದೆ.

ಸಿನಿಮಾ ಮೆಚ್ಚುಗೆ ಪಡೆದುಕೊಂಡಿದೆ. ಹಾಗಾಗಿ ಇನ್ನೂ ಒಂದೆರಡು ವಾರ ‘ಭೈರತಿ ರಣಗಲ್'(bhairathi ranagal )ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತೆ ಎಂಬ ಲೆಕ್ಕಾಚಾರವಿದೆ. ಇದು ಸಿನಿಮಾ ಉದ್ಯಮಿಗಳ ಲೆಕ್ಕ. ಅದರಲ್ಲೂ ಅಂದಾಜಿನ ಲೆಕ್ಕಮಾತ್ರ. ಚಿತ್ರತಂಡ ಇನ್ನೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಹೆಚ್ಚು ಕಮ್ಮಿ ಇದೇ ಲೆಕ್ಕಾಚಾರವೂ ಇರಬಹುದು ಎಂದು ನಾವು ಅಂದಾಜು ಮಾಡಬಹುದು.

Related Posts

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ? ಸ್ಯಾಂಡಲ್‌ವುಡ್‌ನಲ್ಲೀಗ ‘ಯುಐ'(ui) ಸ್ಯಾಂಡಲ್‌ವುಡ್‌ನಲ್ಲೀಗ ‘ಯುಐ’ ಸಿನಿಮಾ ಫೀವರ್ ಜೋರಾಗಿದೆ. ಉಪೇಂದ್ರ ನಿರ್ದೇಶಿಸಿ ನಟಿಸಿರುವ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್‌ನಲ್ಲಿ ಕೂಡ ಕಲೆಕ್ಷನ್ ಜೋರಾಗಿದೆ. ಶುಕ್ರವಾರ ತೆರೆಕಂಡ ಚಿತ್ರಕ್ಕೆ ಮಿಶ್ರ…

Continue reading
Pushap 2: ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

Pushap 2: ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!! ‘ಪುಷ್ಪ 2’ (Pushpa 2)ಸಿನಿಮಾದ ಅಬ್ಬರ ಸದ್ಯಕ್ಕಂತೂ ನಿಲ್ಲುವ ರೀತಿ ಕಾಣುತ್ತಿಲ್ಲ. ಬಹುತೇಕ ಎಲ್ಲ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ನೀಡುತ್ತಿದೆ. ಅಲ್ಲು ಅರ್ಜುನ್ ಅಭಿಮಾನಿಗಳು ಸಿನಿಮಾ…

Continue reading

Leave a Reply

Your email address will not be published. Required fields are marked *

You Missed

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).

Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh!!

Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh!!

Pushap 2: ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

Pushap 2:  ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

ಕೆಎಲ್ ರಾಹುಲ್​ಗೆ ತಮ್ಮ ಸ್ಥಾನ ತ್ಯಾಗ ಮಾಡಿದ ನಾಯಕ ರೋಹಿತ್ ಶರ್ಮಾ; ಪಿಂಕ್ ಬಾಲ್ ಟೆಸ್ಟ್ (india vs australia)

ಕೆಎಲ್ ರಾಹುಲ್​ಗೆ ತಮ್ಮ ಸ್ಥಾನ ತ್ಯಾಗ ಮಾಡಿದ     ನಾಯಕ ರೋಹಿತ್ ಶರ್ಮಾ; ಪಿಂಕ್ ಬಾಲ್ ಟೆಸ್ಟ್ (india vs australia)

ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ (pushpa 2)! !

ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ (pushpa 2)! !