ಭಾರತದ ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ (Neeraj Chopra)ಕೇವಲ ಒಂದೇ ಒಂದು ಸೆಂಟಿಮೀಟರ್ ಅಂತರದಿಂದ ಡೈಮಂಡ್ ಲೀಗ್ ಫೈನಲ್ಸ್ ನಲ್ಲಿ ಬಂಗಾರದ ಪದಕ ವಂಚಿತರಾದರು.
ಬ್ರಸೆಲ್ಸ್ ಡೈಮಂಡ್ ಲೀಗ್ ಫೈನಲ್ಸ್ ನಲ್ಲಿ ಅವರು 87.86 ಮೀಟರ್ ಎಸೆದ ಸಾಧನೆಯೊಂದಿಗೆ ದ್ವಿತೀಯ ಸ್ಥಾನಿಯಾದರು.
87.87 ಮೀ ದೂರದ ಸಾಧನೆಗೈದ ಗ್ರೆನೆಡಾದ ಆಮ್ಯಾಡಸರ್ಸ್ ಪೀಟರ್ಸ್ ಚಾಂಪಿಯನ್ ಪಟ್ಟ ಧರಿಸಿದರು. ಡೈಮಂಡ್ ಲೀಗ್ ಟ್ರೋಪಿಯೊಂದಿಗೆ 30 ಸಾವಿರ ಡಾಲರ್ ಬಹುಮಾನವನ್ನು ತಮ್ಮದಾಗಿಸಿಕೊಂಡರು. ನೀರಜ್ ಗೆ 12 ಸಾವಿರ ಡಾಲರ್ ಲಭಿಸಿತು.
ಬೆರಳಿನ ಗಾಯದೊಂದಿಗೆ ಸ್ಪರ್ಧೆ:
ಡೈಮಂಡ್ ಲೀಗ್ ಫೈನಲ್ಸ್ ನಲ್ಲಿ ತಾನು ಕೈ ಬೆರಳಿನ ಗಾಯದೊಂದಿಗೆ ಸ್ಪರ್ಧಿಸಿದ್ದಾಗಿ ನೀರಜ್ ಚೋಪ್ರಾ (Neeraj Chopra)ಹೇಳಿಕೆ ನೀಡಿದ್ದಾರೆ.’ ಸ್ಪರ್ಧೆಯ ಅಭ್ಯಾಸದ ವೇಳೆ ನಾನು ಗಾಯ ಮಾಡಿಕೊಂಡೆ. ಎಕ್ಸ್ ರೇ ಪರೀಕ್ಷೆ ವೇಳೆ ಎಡಗೈ ಉಂಗುರ ಬೆರಳಿನ ಮೂಳೆ ಮುರಿತಕೊಳಗಾಗಿರುವುದು ಕಂಡು ಬಂತು. ಹೀಗಾಗಿ ಸ್ಪರ್ಧೆಯ ವೇಳೆ ಇದು ನನಗೆ ಮತ್ತೊಂದು ಸವಾಲಾಗಿತ್ತು ‘ ಎಂದು ಹೇಳಿದರು.
ಸತತ ಎರಡನೇ ಬಾರಿ :
26 ವರ್ಷದ ನೀರಜ್ ಚೋಪ್ರಾ(Neeraj Chopra)2022ರಲ್ಲಿ ಮೊದಲ ಸಲ ಡೈಮಂಡ್ ಲೀಗ್ ಫೈನಲ್ಸ್ ಜಾವಲಿನ್ ಚಾಂಪಿಯನ್ ಆಗಿದ್ದರು. 2023ರಲ್ಲಿ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು. ಈ ಸಲವೂ ಎರಡನೇ ಸ್ಥಾನದಲ್ಲಿ ಉಳಿದರು.