ಭಾರತದಲ್ಲಿ ಈವರೆಗೆ ಎಂದೂ ಯಾವುದೇ ಸ್ಕೂಟರ್ ಹಾಗೂ ಬೈಕ್ ಪಡೆಯದ ಜನಪ್ರಿಯತೆಯನ್ನು ಟಿವಿಎಸ್ ಎಕ್ಸ್‌ಎಲ್ 100 ಹೆವಿ ಡ್ಯೂಟಿ ಮೊಪೆಡ್ (TVS XL100 Heavy Duty) ಪಡೆದುಕೊಂಡಿದೆ. ದೇಶದ ಪ್ರತಿಯೊಬ್ಬ ಯುವಕ ಒಮ್ಮೆಯಾದ್ರೂ ಈ ಮೊಪೆಡ್ ಅನ್ನು ಓಡಿಸಿರುತ್ತಾರೆ, ಕೋಟಿ ಬೆಲೆಯ ವಾಹನಗಳು ಇದ್ದವರಿಗು ಕೂಡ ಟಿವಿಎಸ್ ಎಕ್ಸ್‌ಎಲ್ ಓಡಿಸುವ ಉತ್ಸಾಹ ಇರುತ್ತದೆ.
ಭಾರತದಲ್ಲಿ ಈ ಮಟ್ಟದ ಕ್ರೇಜ್ ಹೊಂದಿರುವ ಟಿವಿಎಸ್ ಎಕ್ಸ್‌ಎಲ್ 100(TVS XL 100)ಹೆವಿ ಡ್ಯೂಟಿ ಮೊಪೆಡ್ ಕುರಿತ ಬೆಲೆ, ಮೈಲೇಜ್, ಎಂಜಿನ್ ವಿಶೇಷತೆಗಳನ್ನು ಬಗ್ಗೆ ಇಲ್ಲಿ ತಿಳಿಯೋಣ.
ಟಿವಿಎಸ್ ಎಕ್ಸ್‌ಎಲ್ 100(TVS XL 100)ಹೆವಿ ಡ್ಯೂಟಿ ಮೊಪೆಡ್ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ. 44,999 ಗಳಾಗಿದೆ. ಈ ಮೊಪೆಡ್ ವಾಹನವು ಪ್ರತಿ ಲೀಟರ್ ಪೆಟ್ರೋಲ್‌ಗೆ 80 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ವಾಹನವು ಬ್ಲಾಕ್, ಬ್ಲೂ, ಗ್ರೀನ್ ಎಂಬ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ಟಿವಿಎಸ್ ಎಕ್ಸ್‌ಎಲ್ 100 (TVS XL 100)ಹೆವಿ ಡ್ಯೂಟಿ ಎಂಜಿನ್ ಬಗ್ಗೆ ಹೇಳುವುದಾದ್ರೆ, 99.7 ಸಿಸಿ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 4.35 ಬಿಹೆಚ್ ಪವರ್ ಹಾಗೂ 6.5 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿ ಕಿಕ್ ಸ್ಟಾರ್ಟ್ ಮಾತ್ರ ನೀಡಲಾಗಿದೆ. ಸದ್ಯ ಈ ವಾಹನವು ಸಣ್ಣ ವ್ಯಾಪಾರಿಗಳಿಗೆ ನೆಚ್ಚಿನ ಮೊಪೆಡ್ ಆಗಿದ್ದು, ನಿತ್ಯ ಜೀವನದ ಬಲವಾದ ಆಧಾರವಾಗಿದೆ.
ವೈಶಿಷ್ಟ್ಯಗಳು: ಅನಲಾಗ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್, ಬೇರ್ಪಡಿಸಬಹುದಾದ ಸೀಟುಗಳು, ದೊಡ್ಡ ಫ್ಲೋರ್ ಬೋರ್ಡ್ ಸ್ಥಳ, ಆನ್ ಬೋರ್ಡ್ ಡಯಾಗ್ನೋಸ್ಟಿಕ್ಸ್ ಇಂಡಿಕೇಟರ್‌ಗಳು, ಪೆಟ್ರೋಲ್ ರಿಸರ್ವ್ ಇಂಡಿಕೇಟರ್, ಪಾಸ್ ಸ್ವಿಚ್, ಎಂಜಿನ್ ಕಿಲ್ ಸ್ವಿಚ್, ಹ್ಯಾಲೋಜೆನ್ ಹೆಡ್‌ಲೈಟ್, DRL ಗಳು, ಕಡಿಮೆ ಇಂಧನ ಸೂಚಕದಂತಹ ಆಧುನಿಕ ಫೀಚರ್‌ಗಳನ್ನು ಹೊಸ ಟಿವಿಎಸ್ ಎಕ್ಸ್‌ಎಲ್ 100 ಹೆವಿ ಡ್ಯೂಟಿನಲ್ಲಿ ನೀಡಲಾಗುತ್ತಿದೆ.
ಮುಂಭಾಗ ಟೆಲಿಸ್ಕೋಪಿಕ್ ಹೈಡ್ರಾಲಿಕ್ ಸ್ಪ್ರಿಂಗ್ ಹಾಗೂ ಹಿಂಭಾಗದಲ್ಲಿ ಹೈಡ್ರಾಲಿಕ್ ಸ್ವಿಂಗ್ ಸಸ್ಪೆನ್ಷನ್ ಹೊಂದಿರುವ ಈ ಮೊಪೆಡ್, ಎರಡೂ ಕಡೆ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಹಾಗೆಯೇ ತನ್ನ ವಿನ್ಯಾಸಕ್ಕೆ ಅನುಗುಣವಾಗಿ 88 ಕೆ.ಜಿ ತೂಕವಿದ್ದು, ಬರೋಬ್ಬರಿ 130 ಕೆ.ಜಿ ಲೋಡ್ ಹೊತ್ತೊಯ್ಯುವ ಸಾಮರ್ಥ್ಯವನ್ನು ಟಿವಿಎಸ್ ಎಕ್ಸ್‌ಎಲ್ 100 (TVS XL 100)ಹೆವಿ ಡ್ಯೂಟಿ ಹೊಂದಿದೆ.
ಇನ್ನು ವಾಹನದ ಉದ್ದಳೆತಗಳ ಬಗ್ಗೆ ಮಾತನಾಡುವುದಾದ್ರೆ 670 ಮಿ.ಮೀ ಅಗಲ, 1895 ಮಿ.ಮೀ ಉದ್ದ, 1077 ಮಿ.ಮೀ ಎತ್ತರವಿದೆ. ಹಾಗೆಯೇ 158 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1228 ಮಿ.ಮೀ ವ್ಹೀಲ್ ಬೇಸ್ ಹೊಂದಿದೆ. ಇದರ ಇಂಧನ ಸಾಮರ್ಥ್ಯದ ಬಗ್ಗೆ ಹೇಳುವುದಾದ್ರೆ, 4 L ಇಂಧನವನ್ನು ಒಮ್ಮೆಗೆ ಸಂಪೂರ್ಣವಾಗಿ ತುಂಬಿಸಬಹುದು. ಲೀಟರ್‌ಗೆ 80 ಕಿ.ಮೀ ಮೈಲೇಜ್ ನೀಡುತ್ತದೆ.
ಭಾರತದಾದ್ಯಂತ ಸದ್ಯ ಹಬ್ಬದ ಸೀಸನ್ ನಡೆಯುತ್ತಿರುವುದರಿಂದ ದೀಪಾವಳಿ ಮುಗಿಯುವವರೆಗೆ ಭರ್ಜರಿ ಆಫರ್ ಗಳು ಇವೆ. ಆಯಾ ಸ್ಥಳಗಳು ಹಾಗೂ ಡೀಲರ್‌ಶಿಪ್‌ಗಳನ್ನು ಆಧರಿಸಿ ಆಫರ್ ಹಾಗೂ ರಿಯಾಯಿಗಳಲ್ಲಿ ಬದಲಾವಣೆಗಳು ಇರಲಿವೆ. ಹೊಸ ಟಿವಿಎಸ್ ಎಕ್ಸ್‌ಎಲ್ 100 (TVS XL ಹೆವಿ ಡ್ಯೂಟಿ ಖರೀದಿಸಲು ಆಸಕ್ತಿಯಿರುವವರು ಹತ್ತಿರದ ಡೀಲರ್‌ಗಳನ್ನು ನೀವು ಸಂಪರ್ಕಿಸಬಹುದು.
ಇದು ಬಡವರಿಗೆ ಉತ್ತಮ ಸಹಕಾರ ನೀಡುವ ಒಂದು ವಾಹನ ಎಂದರೆ ತಪ್ಪಾಗಲಾರದು. ರೈತರಿಗೆ ಮತ್ತು ಕೂಲಿ ಕಾರ್ಮಿಕರು ಇದನ್ನು ಹೆಚ್ಚಾಗಿ ಉಪಯೋಗ ಮಾಡುತ್ತಾರೆ. ಉತ್ತಮ ಮೈಲೇಜ್ ನೀಡುವ ಒಂದು ವಾಹನ ವಾಗಿದೆ TVS XL 100.