ಭಾರತಕ್ಕೆ (Team India)ಬೃಹತ್ ಗೆಲುವು; ಭಾರತ ಪರ ದಾಖಲೆಯ ಬೃಹತ್ ಮೊತ್ತ!!

ಭಾರತ 6ಕ್ಕೆ 297 ಭಾರತಕ್ಕೆ ಬೃಹತ್ ಗೆಲುವು ಸಂಜು ಸ್ಯಾಮನ್ ಅವರ ಸ್ಫೋಟಕ ಶತಕ
ಮತ್ತು ಟಿ20ಯಲ್ಲಿ ಭಾರತದ(Team India) ಗರಿಷ್ಠ ಮೊತ್ತದ ಸಾಧನೆಯಿಂದ ಭಾರತ ತಂಡವು ಶನಿವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಬಾಂಗ್ಲಾ ಪಡೆಯನ್ನು 133 ರನ್ನುಗಳಿಂದ ಸೋಲಿಸಿದೆ .
ಈ ಗೆಲುವಿನಿಂದ ಭಾರತ (Team India)ಮೂರು ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಡಿದೆ. ಟಿ20ಯಲ್ಲಿ ಇದು ಭಾರತಕ್ಕೆ(Team India)ಒಲಿದ ಸತತ 16ನೇ ಸರಣಿ ಗೆಲುವು ಆಗಿದೆ.
ಸಂಜು ಸ್ಯಾಮ್ರನ್ ಅವರ ಸ್ಫೋಟಕ ಶತಕ ಹಾಗೂ ಸೂರ್ಯ ಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ
ಅವರ ಭರ್ಜರಿ ಆಟದಿಂದಾಗಿ ಭಾರತ ಆರು ವಿಕೆಟಿಗೆ 297 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಇದು ಭಾರತದ (Team India)ಗರಿಷ್ಠ ಮತ್ತು ಸಾರ್ವಕಾಲಿಕವಾಗಿ ಎರಡನೇ ಗರಿಷ್ಠ ಮೊತ್ತವಾಗಿದೆ. 2023ರಲ್ಲಿ ಮಂಗೋಲಿಯ ವಿರುದ್ಧ ನೇಪಾಲ 3 ವಿಕೆಟಿಗೆ 314 ರನ್ ಸಿಡಿಸಿರುವುದು ಟಿ20 ಕೂಟದ ಗರಿಷ್ಠ ಮೊತ್ತವಾಗಿದೆ. ಗೆಲ್ಲಲು 298 ರನ್ ಗಳಿಸುವ ಕಠಿನ ಗುರಿ ಪಡೆದ ಬಾಂಗ್ಲಾದೇಶವು ಭಾರತದ ಬೌಲರ್ ಗಳ ದಾಳಿಗೆ ತತ್ತರಿಸಿ 7 ವಿಕೆಟಿಗೆ 164 ರನ್ ಗಳಿಸ ಶರಣಾಯಿತು. ಕೇವಲ ಲಿಟನ್ ದಾಸ್ ಮತ್ತು ತೌಹಿದ್ ಹೃದಯ್‌ ಭಾರತದ ದಾಳಿಯನ್ನು ಸ್ವಲ್ಪ ಮಟ್ಟಿಗೆ ಎದುರಿಸಲು ಶಕ್ತರಾದರು. ದಾಸ್ 42 ಮತ್ತು ಹೃದಯ್ 63 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ಬಾಂಗ್ಲಾ ಟಿ20 ಸರಣಿ ಕ್ಲೀನ್‌ ಸ್ವೀಪ್‌ ಸೋಲು ಅನುಭವಿಸಿತು ದಾಳಿ ಸಂಘಟಿಸಿದ ರವಿ ಬಿಷ್ಟೊಯಿ 30 ರನ್ನಿಗೆ 3 ವಿಕೆಟ್ ಕಿತ್ತರು.

ಸ್ಯಾಮ್ಸನ್ ಭರ್ಜರಿ ಶತಕ

ಸ್ಯಾಮ್ಸನ್ ಭರ್ಜರಿ ಶತಕ ಆಟ ಈ ಪಂದ್ಯದ ಆಕರ್ಷಣೆಯಾಗಿತ್ತು. ಬಾಂಗ್ಲಾ ದಾಳಿಯನ್ನು ದಂಡಿಸಿದ ಸ್ಯಾಮ್ಸನ್ ಟಿ20ಯಲ್ಲಿ ಚೊಚ್ಚಲ ಹಾಗೂ ಎರಡನೇ ಅತೀವೇಗದ ಶತಕ ಸಿಡಿಸಿದರು. ಅತೀ ವೇಗದ ಶತಕವನ್ನು ರೋಹಿತ್‌ ಶರ್ಮಾ 35 ಎಸೆತಗಳಲ್ಲಿ ಸಿಡಿಸಿದ್ದರು. ಕೇವಲ 40 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದ ಸ್ಯಾಮ್ಸನ್ ಒಟ್ಟಾರೆ 47 ಎಸೆತಗಳಿಂದ 11 ಬೌಂಡರಿ ಮತ್ತು 8 ಸಿಕ್ಸರ್ ನೆರವಿನಿಂದ 111 ರನ್ ಸಿಡಿಸಿದ್ದರು.
ಸ್ಯಾಮನ್ ಅವರಿಗೆ ಉಪಯುಕ್ತ ಬೆಂಬಲ ನೀಡಿದ ಸೂರ್ಯ ಕುಮಾರ್ ಯಾದವ್ 35 ಎಸೆತಗಳಿಂದ 75 ರನ್ ಹೊಡೆದರು. ಅವರಿಬ್ಬರು ದ್ವಿತೀಯ ವಿಕೆಟಿಗೆ 173 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾಗಿದ್ದರು. ಕೊನೆ ಹಂತದಲ್ಲಿ ರಿಯಾನ್ ಪರಾಗ್ ಮತ್ತು ಹಾರ್ದಿಕ್
ಪಾಂಡ್ಯ ಬಿರುಸಿನ ಆಟ ಆಡಿದ್ದರಿಂದ ಮೊತ್ತ 300ರ ಸನಿಹಕ್ಕೆ ತಲುಪಿತು. ಪಾಂಡ್ಯ 18 ಎಸೆತಗಳಿಂದ 47 ಮತ್ತು ಅವರು ಪರಾಗ್ ಕೇವಲ 13 ಎಸೆತಗಳಿಂದ 34 ರನ್ ಗಳಿಸಿದರು ಅವರಿಬ್ಬರು ನಾಲ್ಕನೇ
ವಿಕೆಟಿಗೆ 10 ರನ್ನುಗಳ ಜತೆಯಾಟದಲ್ಲಿಪಾಲ್ಗೊಂಡರು.

Related Posts

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia). ಬ್ರಿಸ್ಟೇನ್: ಬಾರ್ಡರ್-ಗಾವಸ್ಕರ್ ಟ್ರೋಫಿಯ ಗಬ್ಬಾ ಟೆಸ್ಟ್‌ನ 4 ನೇ ದಿನದಂದು ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಫಾಲೋ-ಆನ್ ತಪ್ಪಿಸಿದ ಆಕಾಶ್ ದೀಪ್ ಮತ್ತು ಜಸ್ಪ್ರೀತ್ ಬುಮ್ರಾ ಆಟಕ್ಕೆ ತಂಡದ ಕೋಚ್…

Continue reading
Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh!!

Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh ಸಿಂಗಾಪುರದ ಆತಿಥ್ಯದಲ್ಲಿ ನಡೆದ ವಿಶ್ ಚೆಸ್ ಚಾಂಪಿನ್ ಶಿಪ್(World Chess Championship) : ಸಿಂಗಾಪುರದ ಆತಿಥ್ಯದಲ್ಲಿ ನಡೆದ ವಿಶ್ ಚೆಸ್​ ಚಾಂಪಿಯನ್​​ಶಿಪ್​ನಲ್ಲಿ (World Chess Championship)…

Continue reading

Leave a Reply

Your email address will not be published. Required fields are marked *

You Missed

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).

Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh!!

Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh!!

Pushap 2: ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

Pushap 2:  ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

ಕೆಎಲ್ ರಾಹುಲ್​ಗೆ ತಮ್ಮ ಸ್ಥಾನ ತ್ಯಾಗ ಮಾಡಿದ ನಾಯಕ ರೋಹಿತ್ ಶರ್ಮಾ; ಪಿಂಕ್ ಬಾಲ್ ಟೆಸ್ಟ್ (india vs australia)

ಕೆಎಲ್ ರಾಹುಲ್​ಗೆ ತಮ್ಮ ಸ್ಥಾನ ತ್ಯಾಗ ಮಾಡಿದ     ನಾಯಕ ರೋಹಿತ್ ಶರ್ಮಾ; ಪಿಂಕ್ ಬಾಲ್ ಟೆಸ್ಟ್ (india vs australia)

ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ (pushpa 2)! !

ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ (pushpa 2)! !