ಶ್ರೀ ಮುರಳಿ (srii murali)”ಬಘೀರ ” ಬಾಕ್ಸಾಫೀಸ್ ರಿಸಲ್ಟ್ ಏನು? ಫಸ್ಟ್ ಡೇ ಲೆಕ್ಕಾಚಾರ ಏನಿದೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರೋರಿಂಗ್ ಸ್ಟಾರ್ ಶ್ರೀಮುರಳಿ (srii murali )ಮತ್ತು ಪ್ರಶಾಂತ್ ನೀಲ್. ಇವರಿಬ್ಬರ ಕಾಂಬಿನೇಷನ್ ಸಿನಿಮಾ ನೋಡಬೇಕು ಅಂತಿದ್ದ ಸಿನಿ ಪ್ರಿಯರಿಗೆ ಸಮಾಧಾನ ಮಾಡುವುದಕ್ಕೆ ಬಂದ ಸಿನಿಮಾವೇ ‘ಬಘೀರ’. ಯಶ್ ನಟಿಸಿದ ‘ಲಕ್ಕಿ’ ನಿರ್ದೇಶಿಸಿ, ಪ್ರಶಾಂತ್ ನೀಲ್ ಜೊತೆ ‘ಕೆಜಿಎಫ್’ ಹಾಗೂ ‘ಸಲಾರ್’ ಸಿನಿಮಾಗಳಿಗೆ ರೈಟರ್ ಆಗಿ ಕೆಲಸ ಮಾಡಿದ್ದ ಡಾ.ಸೂರಿ ಆಕ್ಷನ್ ಕಟ್ ಹೇಳಿದ್ದಾರೆ.

ಇನ್ನು ಬ್ಲಾಕ್ ಬ್ಲಸ್ಟರ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಹಣ ಹೂಡಿಕೆ ಮಾಡಿದ್ದಾರೆ ಈ ಸಿನಿಮಾಕ್ಕೆ . ಈ ನಾಲ್ವರಿಂದ ‘ಬಘೀರ’ ಸಿನಿಮಾ ಕಳೆದ ಮೂರು ವರ್ಷಗಳಿಂದ ಬಹು ನಿರೀಕ್ಷೆಯನ್ನು ಹುಟ್ಟಾಕಿತ್ತು. ಕೊನೆಗೂ ಈ ಸಿನಿಮಾ ಇಂದು (ಅಕ್ಟೋಬರ್ 31) ಥಿಯೇಟರ್‌ಗೆ ಅದ್ಧೂರಿಯಾಗಿ ಲಗ್ಗೆ ಇಟ್ಟಿದೆ. ಚಿತ್ರಮಂದಿರಗಳು ಹಲವೆಡೆ ತುಂಬಿವೆ.

ಶ್ರೀಮುರಳಿ (srii murali )ಸಿನಿಮಾ ‘ಬಘೀರ’ ಕರ್ನಾಟಕದಲ್ಲಿ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು? ಅನ್ನೋ ಕುತೂಹಲ ಸಿನಿಮಾ ಮಂದಿಯಲ್ಲತ್ತು. ಅದಕ್ಕೆ ಟ್ರೇಡ್ ಎಕ್ಸ್‌ಪರ್ಟ್‌ಗಳು ಒಂದು ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಇಷ್ಟು ಕೋಟಿ ಕಲೆಕ್ಷನ್ ಮಾಡುತ್ತೆ ಅನ್ನೋ ಅಂದಾಜು ಲೆಕ್ಕ ಹಾಕಿದ್ದಾರೆ. ಹಾಗಿದ್ದರೆ, ಶ್ರೀಮುರಳಿ(srii murali) ರುಕ್ಮಿಣಿ ವಸಂತ್ ಜೋಡಿಯ ಈ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು? ಟ್ರೇಡ್ ಎಕ್ಸ್‌ಪರ್ಟ್‌ಗಳ ರಿಪೋರ್ಟ್ ಇಲ್ಲಿದೆ ನೋಡಿ .

ಮೊದಲ ದಿನ ‘ಬಘೀರ’ ಎಷ್ಟು ಗಳಿಸಬಹುದು?ರೋರಿಂಗ್ ಸ್ಟಾರ್ ಶ್ರೀಮುರಳಿ (srii murali ) ಸಿನಿಮಾ ಕಳೆದ ಮೂರು ವರ್ಷಗಳಿಂದ ರಿಲೀಸ್ ಆಗಿಲ್ಲ. ಅಲ್ಲದೆ, ಈಗಾಗಲೇ ರಿವೀಲ್ ಮಾಡಿರುವ ಟ್ರೈಲರ್, ಸಾಂಗ್‌ಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಈ ಕಾರಣಕ್ಕೆ ‘ಬಘೀರ’ ಮೊದಲ ದಿನದ ಕಲೆಕ್ಷನ್ ಉತ್ತಮವಾಗಿರುತ್ತೆ ಅನ್ನೋ ನಿರೀಕ್ಷೆಯಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳು ಈಗಾಗಲೇ ಲೆಕ್ಕ ಹಾಕಿರುವ ಪ್ರಕಾರ, ಈ ಸಿನಿಮಾ ಮೊದಲ ದಿನ ಕರ್ನಾಟಕದಲ್ಲಿ 3 ರಿಂದ 4 ಕೋಟಿ ರೂಪಾಯಿ ಗಳಿಕೆ ಆಗಬಹುದು ಎಂದು ಅಂದಾಜು ಹಾಕಿದ್ದರು. ಇನ್ನು ಇಂಡಸ್ಟ್ರಿ ಟ್ರ್ಯಾಕರ್ Sacnilk ಪ್ರಕಾರ ‘ಬಘೀರ’ ಮೊದಲ ದಿನ ಸಂಜೆ 6 ಗಂಟೆವರೆಗೆ 1.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ವಿತರಕರ ವಲಯದಲ್ಲಿ ಲೆಕ್ಕ?

ಹೊಂಬಾಳೆ ಫಿಲ್ಮ್ಸ್ ಮೇಲೆ ವಿತರಕರು ನಂಬಿಕೆ ಇಟ್ಟಿದ್ದು ಮೊದಲ ದಿನ ಸುಳ್ಳಾಗಿಲ್ಲ. ಇನ್ನು ಸಂಜೆ ವೇಳೆಗೆ ಸಿನಿಮಾದ ಕಲೆಕ್ಷನ್‌ನಲ್ಲಿ ಸಾಕಷ್ಟು ಏರಿಕೆ ಆಗುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಸೂಪರ್ ಹೀರೋ ಸಿನಿಮಾ ಆಗಿದ್ದರಿಂದ ಫ್ಯಾಮಿಲಿ ಸಮೇತ ಬಂದು ಸಿನಿಮಾ ನೋಡಬಹುದು ಅನ್ನೋ ಭರವಸೆಯಿದೆ. ಕರ್ನಾಟಕದ ವಿತರಕರ ವಲಯದಲ್ಲಿ ‘ಬಘೀರ’ ಸಿನಿಮಾ ಮೊದಲ ದಿನ 2.5 ಕೋಟಿ ರೂಪಾಯಿಯಿಂದ 3 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆ ಇದೆ.

srii murali

ದೀಪಾವಳಿ ಹಬ್ಬ ಆರಂಭ ಆಗಿದೆ. ಇನ್ನು ಹಬ್ಬದ ಸಂಭ್ರಮದಲ್ಲಿರುವ ಜನರು ಥಿಯೇಟರ್‌ ಕಡೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದೆ. (ನವೆಂಬರ್ 1) ಕನ್ನಡ ರಾಜ್ಯೋತ್ಸವ. ಡಬಲ್ ಖುಷಿಯಲ್ಲಿ ಬೆಳಗ್ಗೆಯಿಂದಲೇ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಬಹುದು. ಕಲೆಕ್ಷನ್ ಏರಿಕೆ ಆಗಬಹುದೆಂಬ ನಿರೀಕ್ಷೆಯಿದೆ.

ಮೊದಲ 4 ದಿನ ಕಲೆಕ್ಷನ್ ಲೆಕ್ಕಾಚಾರವೇನು?ಶ್ರೀಮುರಳಿ ಸೂಪರ್ ಹೀರೋ ಅವತಾರವೆತ್ತಿರುವ ‘ಬಘೀರ’ ಸಿನಿಮಾ ಮೊದಲ ನಾಲ್ಕು ದಿನದ ಕಲೆಕ್ಷನ್ 10 ಕೋಟಿ ರೂಪಾಯಿ ದಾಟಬಹುದು ಎಂಬುದು ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ. ಶುಕ್ರವಾರ, ಶನಿವಾರ, ಭಾನುವಾರ ಈ ಮೂರು ದಿನಗಳ ಕಲೆಕ್ಷನ್ ಭರ್ಜರಿಯಾಗಿ ಆದರೆ, 12 ರಿಂದ 15 ಕೋಟಿ ರೂಪಾಯಿವರೆಗೂ ನಿರೀಕ್ಷೆ ಮಾಡಬಹುದು ಎನ್ನುತ್ತಾರೆ ಅವರು.ಸೂಚನೆ; ಈ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಬೇರೆ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಗಿದೆ. ಇದು ಟ್ರೇಡ್ ಎಕ್ಸ್‌ಪರ್ಟ್‌ಗಳು ಹಾಕಿರುವ ಅಂದಾಜು ಬಾಕ್ಸಾಫೀಸ್ ಲೆಕ್ಕಾಚಾರ. ಸಿನಿಮಾ ತಂಡ ಆಗಲಿ, ನಿರ್ಮಾಪಕರಾಗಲಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

srii murali

Related Posts

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ? ಸ್ಯಾಂಡಲ್‌ವುಡ್‌ನಲ್ಲೀಗ ‘ಯುಐ'(ui) ಸ್ಯಾಂಡಲ್‌ವುಡ್‌ನಲ್ಲೀಗ ‘ಯುಐ’ ಸಿನಿಮಾ ಫೀವರ್ ಜೋರಾಗಿದೆ. ಉಪೇಂದ್ರ ನಿರ್ದೇಶಿಸಿ ನಟಿಸಿರುವ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್‌ನಲ್ಲಿ ಕೂಡ ಕಲೆಕ್ಷನ್ ಜೋರಾಗಿದೆ. ಶುಕ್ರವಾರ ತೆರೆಕಂಡ ಚಿತ್ರಕ್ಕೆ ಮಿಶ್ರ…

Continue reading
Pushap 2: ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

Pushap 2: ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!! ‘ಪುಷ್ಪ 2’ (Pushpa 2)ಸಿನಿಮಾದ ಅಬ್ಬರ ಸದ್ಯಕ್ಕಂತೂ ನಿಲ್ಲುವ ರೀತಿ ಕಾಣುತ್ತಿಲ್ಲ. ಬಹುತೇಕ ಎಲ್ಲ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ನೀಡುತ್ತಿದೆ. ಅಲ್ಲು ಅರ್ಜುನ್ ಅಭಿಮಾನಿಗಳು ಸಿನಿಮಾ…

Continue reading

Leave a Reply

Your email address will not be published. Required fields are marked *

You Missed

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).

Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh!!

Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh!!

Pushap 2: ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

Pushap 2:  ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

ಕೆಎಲ್ ರಾಹುಲ್​ಗೆ ತಮ್ಮ ಸ್ಥಾನ ತ್ಯಾಗ ಮಾಡಿದ ನಾಯಕ ರೋಹಿತ್ ಶರ್ಮಾ; ಪಿಂಕ್ ಬಾಲ್ ಟೆಸ್ಟ್ (india vs australia)

ಕೆಎಲ್ ರಾಹುಲ್​ಗೆ ತಮ್ಮ ಸ್ಥಾನ ತ್ಯಾಗ ಮಾಡಿದ     ನಾಯಕ ರೋಹಿತ್ ಶರ್ಮಾ; ಪಿಂಕ್ ಬಾಲ್ ಟೆಸ್ಟ್ (india vs australia)

ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ (pushpa 2)! !

ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ (pushpa 2)! !