ಸುಮಾರು 12 ಸಾವಿರ ಸ್ಕ್ರೀನ್ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ !!(pushpa 2)
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2′(pushpa 2) ಸಿನಿಮಾ ಡಿಸೆಂಬರ್ 5 ಕ್ಕೆ ತೆರೆಗೆ ಬರಲಿದ್ದು, ವಿಶ್ವದಾದ್ಯಂತ 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಈ ಸಿನಿಮಾ ತೆರೆಗೆ ಕಾಲಿಡಲಿದೆ.ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2′(pushpa 2)ಸಿನಿಮಾ ಇನ್ನೊಂದು ವಾರದಲ್ಲಿ ಬಿಡುಗಡೆ ಗೊಳ್ಳಲಿದೆ .
ಭಾರತದಲ್ಲಿ ಅತಿ ಹೆಚ್ಚು ನಿರೀಕ್ಷೆ ಇರುವ ಸಿನಿಮಾ ಇದಾಗಿದೆ . ಬಿಡುಗಡೆಗೆ ಮುಂಚೆಯೇ ಹಲವು ದಾಖಲೆಗಳನ್ನು ಈ ಸಿನಿಮಾ ಮುರಿದಿದೆ. ಬಿಡುಗಡೆ ಆದ ಬಳಿಕ ದಾಖಲೆಗಳು ನಿರ್ಮಿಸೋದು ಪಕ್ಕಾ ಎನ್ನಲಾಗುತ್ತಿದೆ. ಈ ಹಿಂದಿನ ಯಾವುದೇ ದೊಡ್ಡ ಬಜೆಟ್ ಸಿನಿಮಾಗಳನ್ನೂ ಸಹ ಬಿಡುಗಡೆ ಮಾಡದ ರೀತಿ ಭಾರಿ ಅದ್ಧೂರಿಯಾಗಿ ‘ಪುಷ್ಪ 2′(pushpa 2)ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಸಂಪೂರ್ಣ ಸಜ್ಜಾಗಿದೆ.
ಮುಂಬೈನಲ್ಲಿ ಸಿನಿಮಾದ ಪತ್ರಿಕಾಗೋಷ್ಠಿ ನಡೆದಿದ್ದು, ಕಾರ್ಯಕ್ರಮದಲ್ಲಿ ಮಾತನಾಡಿದ ಸಿನಿಮಾದ ನಿರ್ಮಾಪಕರು, ‘ಪುಷ್ಪ 2′(pushpa 2) ಸಿನಿಮಾವನ್ನು ವಿಶ್ವದಾದ್ಯಂತ ಏಕಕಾಲಕ್ಕೆ ಬರೋಬ್ಬರಿ 12 ಸಾವಿರ ಸ್ಕ್ರೀನ್ಗಳಲ್ಲಿ ಒಂದೇ ದಿನ ಬಿಡುಗಡೆ ಮಾಡಲಿರುವ ಕುರಿತು ಹೇಳಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಸ್ಕ್ರೀನ್ಗಳಲ್ಲಿ ಬಿಡುಗಡೆ ಆದ ಭಾರತದ ಇನ್ನೊಂದು ಸಿನಿಮಾ ಇಲ್ಲ. ಬಾಲಿವುಡ್ ಖಾನ್ ಸಿನಿಮಾಗಳಿಗೂ ಕೂಡ ಇಷ್ಟು ದೊಡ್ಡ ಸಂಖ್ಯೆಯ ಸ್ಕ್ರೀನ್ ಸಿಕ್ಕಿರಲಿಲ್ಲ ಎನ್ನಲಾಗುತ್ತಿದೆ.
ಭಾರತದಲ್ಲಿ ಮಾತ್ರವೇ ಸುಮಾರು 8 ಸಾವಿರ ಸ್ಕ್ರೀನ್ಗಳಲ್ಲಿ ಈ ಸಿನಿಮಾ ಡಿಸೆಂಬರ್ 05 ರಂದು ಬಿಡುಗಡೆ ಆಗಲಿದೆ. ವಿದೇಶಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಬಿಡುಗಡೆ ಕಾಣುತ್ತಿದೆ. ಐಮ್ಯಾಕ್ಸ್ನಲ್ಲಿ ಈ ವರೆಗೆ ಇನ್ಯಾವುದೇ ಸಿನಿಮಾಕ್ಕೂ ಸಿಗದಷ್ಟು ಸ್ಕ್ರೀನ್ಗಳು ‘ಪುಷ್ಪ 2’ (pushpa 2) ಸಿನಿಮಾಕ್ಕೆ ಸಿಕ್ಕಿವೆ ಎಂದು ಮುಂಬೈ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರು ಮಾಹಿತಿ ಹಂಚಿಕೊಂಡಿದ್ದಾರೆ.
‘ಪುಷ್ಪ 2′(pushpa 2)ಸಿನಿಮಾ ಡಿಸೆಂಬರ್ 05 ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೊತೆಗೆ ಕನ್ನಡಿಗರಾದ ಡಾಲಿ ಧನಂಜಯ್, ತಾರಕ್ ಪೊನ್ನಪ್ಪ ಸಹ ನಟಿಸಿದ್ದಾರೆ. ವಿಶೇಷ ಹಾಡಿನಲ್ಲಿ ಕನ್ನಡತಿ ಶ್ರೀಲೀಲಾ ಸಹ ಇದ್ದಾರೆ. ಇವರ ಜೊತೆಗೆ ಸ್ಟಾರ್ ನಟ ಫಹಾದ್ ಫಾಸಿಲ್, ಜಗಪತಿ ಬಾಬು, ಸುನಿಲ್ ಇನ್ನೂ ಕೆಲವು ಹಿರಿಯ ನಟರು ಈ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ.