Pushap 2: ಆಫೀಸ್ನಲ್ಲಿ ಮಹಾಪ್ರಳಯ; ಬಾಲಿವುಡ್ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!
‘ಪುಷ್ಪ 2’ (Pushpa 2)ಸಿನಿಮಾದ ಅಬ್ಬರ ಸದ್ಯಕ್ಕಂತೂ ನಿಲ್ಲುವ ರೀತಿ ಕಾಣುತ್ತಿಲ್ಲ. ಬಹುತೇಕ ಎಲ್ಲ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ನೀಡುತ್ತಿದೆ. ಅಲ್ಲು ಅರ್ಜುನ್ ಅಭಿಮಾನಿಗಳು ಸಿನಿಮಾ ನೋಡುಲು ಮುಗಿಬೀಳುತ್ತಿದ್ದಾರೆ ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಉತ್ತಮವಾದ ರೀತಿ ಪ್ರದರ್ಶನ ಆಗುತ್ತಿದೆ.
ಎಲ್ಲಾ ಚಿತ್ರರಂಗದಲ್ಲೂ ಪುಷ್ಪ 2- ದಿ ರೂಲ್ (Pushpa The Rule) ಸಿನಿಮಾದ್ದೇ ಹವಾ.
ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಪುಷ್ಪ 2 ಸಿನಿಮಾ ಭಾರತೀಯ ಚಿತ್ರರಂಗವನ್ನು ಬೇರೆ ಲೆವೆಲ್‌ಗೆ ಕೊಂಡೊಯ್ದಿದೆ.ಹಳೇ ದಾಖಲೆಗಳೆಲ್ಲ ಉಡೀಸ್ ಪುಷ್ಪ ಮೊದಲ ಭಾಗ ಕೂಡ ಸದ್ದು ಮಾಡಿತ್ತು.ಈಗ ಅದೇ ರೀತಿ ಹವಾ ಮಾಡ್ತಿದೆ ಪುಷ್ಪ 2. ಬಿಡುಗಡೆಯಾದ ದಿನದಿಂದಲೂ ಥಿಯೇಟರ್‌ಗಳು ಹೌಸ್‌ಫುಲ್ ಆಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಯ ಕಲೆಕ್ಷನ್ ಮಾಡ್ತಿದೆ. ಈಗಾಗ್ಲೇ ಸುಮಾರ್ ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲ ನೆಲಸಮ ಮಾಡಿದೆ ಈ ಸಿನಿಮಾ.
ಇತ್ತೀಚೆಗೆ ಹಿಂದಿ ಚಿತ್ರಗಳೇ ಬಾಲಿವುಡ್ನಲ್ಲಿ(Bollywood)ಸದ್ದು ಮಾಡುತ್ತಿಲ್ಲ.
ಹೀಗಿರುವಾಗ ತೆಲುಗು ಸಿನಿಮಾ ಒಂದು ಬಾಲಿವುಡ್ನಲ್ಲಿ ಅಧಿಪತ್ಯ ಸಾಧಿಸಿದೆ. ಶಾರುಖ್ ಖಾನ್ ನಟನೆಯ ‘ಜವಾನ್’ ಹಾಗೂ ‘ಪಠಾಣ್’ ಚಿತ್ರದ ದಾಖಲೆಗಳನ್ನು ಈ ಸಿನಿಮಾ ದೂಳಿಪಟ ಮಾಡಿದೆ.
‘ಪುಷ್ಪ 2’ (Pushap 2)ಚಿತ್ರ ಭಾರತ ಹಾಗೂ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಕೂಡ ಅಬ್ಬರಿಸುತ್ತಿದೆ.
ಈ ಚಿತ್ರವನ್ನು ಜನರು ಮುಗಿಬಿದ್ದು ವೀಕ್ಷಣೆ ನಡೆಸುತ್ತಿದ್ದಾರೆ. ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದವರಿಗೆ ಸಿನಿಮಾ ತುಂಬಾ ಇಷ್ಟ ಆಗುತ್ತಿದೆ. ಹೀಗಾಗಿ, ಇಲ್ಲಿಗಿಂತ ಅಲ್ಲಿಯೇ ಹೆಚ್ಚು ಗಳಿಕೆ ಆಗುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಮಹಾ ಪ್ರಳಯವೇ ನಡೆದು ಹೋಗುತ್ತಿದೆ. ಗಳಿಕೆ ನೋಡಿ ಬಾಲಿವುಡ್(Bollywood) ಮಂದಿಯೂ ಬೆರಗಾಗಿದ್ದಾರೆ.ಹಿಂದಿ ಚಿತ್ರಗಳೇ ಬಾಲಿವುಡ್ನಲ್ಲಿ ಶಬ್ದ ಮಾಡುತ್ತಿಲ್ಲ. . ಶಾರುಖ್ ಖಾನ್ ನಟನೆಯ ‘ಜವಾನ್’ ಹಾಗೂ ‘ಪಠಾಣ್’ ಚಿತ್ರದ ದಾಖಲೆಗಳನ್ನು ಈ ಸಿನಿಮಾ ದೂಳಿಪಟ ಮಾಡಿದೆ. ಇದು, ‘ಪುಷ್ಪರಾಜ್’ನ ಗೆಲುವನ್ನು ಕಾಣಬಹುದು. ಈ ಸಿನಿಮಾದ ಗಳಿಕೆ ನಿತ್ಯ ನೂರು ಕೋಟಿ ರೂಪಾಯಿ ಮೇಲೆಯೇ ಇದೆ.
Pushpa 2 ದಾಖಲೆಯ ಗಳಿಕೆ!!
ಗುರುವಾರ (ಡಿಸೆಂಬರ್ 5) ಈ ಚಿತ್ರ175 ಕೋಟಿ ರೂಪಾಯಿ ಗಳಿಸಿತು. ಶುಕ್ರವಾರ (ಡಿಸೆಂಬರ್ 6) 93.8 ಕೋಟಿ ರೂಪಾಯಿ, ಶನಿವಾರ (ಡಿಸೆಂಬರ್ 7) 119 ಕೋಟಿ ರೂಪಾಯಿ ಗಳಿಸಿತ್ತು. ಭಾನುವಾರ ಈ ಚಿತ್ರ 141 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಲೆಕ್ಕಾಚಾರ ಕೇಳಿ ಅನೇಕರಿಗೆ ಶಾಕ್ ಆಗಿದೆ. ಅದರಲ್ಲೂ ಬಾಲಿವುಡ್( Bollywood)ನಲ್ಲಿ ಈ ಚಿತ್ರ ಎಲ್ಲಾ ದಾಖಲೆಗಳನ್ನು ನೆಲಸಮ ಮಾಡಿದೆ. ಈ ಮೂಲಕ ಮೊದಲ ವಾರವೇ ಈ ಚಿತ್ರ ಭಾರತದಲ್ಲಿ 529 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ವಿಶೇಷ ಎಂದರೆ ಮೊದಲ ಭಾನುವಾರ ‘ಪುಷ್ಪ 2’ (Pushpa 2)ಚಿತ್ರ ಹಿಂದಿಯಲ್ಲಿ ಸುಮಾರು 83 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಹಿಂದೆ ಜವಾನ್ ಸಿನಿಮಾ 80 ಕೋಟಿ ರೂಪಾಯಿ ಗಳಿಕೆ ಮಾಡಿ ಮೊದಲ ಭಾನುವಾರದ ಕಲೆಕ್ಷನ್ನಲ್ಲಿ ಅಗ್ರಸ್ಥಾನದಲ್ಲಿ ಇತ್ತು. ಆ ದಾಖಲೆಯನ್ನು ಚಿತ್ರ ಪುಡಿ ಮಾಡಿದೆ.ಇನ್ನು, ಹಿಂದಿ ಬೆಲ್ಟ್ನಲ್ಲಿ ಮೊದಲ ವಾರದ ಗಳಿಕೆ ವಿಚಾರದಲ್ಲೂ ‘ಪುಷ್ಪ 2′(Pushpa 2 )ಮೇಲುಗೈ ಸಾಧಿಸಿದೆ. ಈ ಚಿತ್ರ ಮೊದಲ ಭಾನುವಾರ 285 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ದಾಖಲೆ ಬರೆದಿದೆ.
Pushpa 2 ದಾಖಲೆ!!
200 ಕೋಟಿ ದಾಖಲೆ, 300 ಕೋಟಿ ದಾಖಲೆ, 400 ಕೋಟಿ ದಾಖಲೆ ಅಷ್ಟೇ ಯಾಕೆ 500 ಕೋಟಿಯನ್ನು ಅತಿವೇಗವಾಗಿ ತಲುಪಿದ ಸಿನಿಮಾ ಎಂಬ ಮಾತಿಗೆ ಪಾತ್ರವಾಗಿದೆ. ಹಾಗೆಯೇ ಡಿಸೆಂಬರ್ 5ಕ್ಕೆ ಬಿಡುಗಡೆಯಾದ ಸಿನಿಮಾ ನಾಲ್ಕೇ ದಿನಗಳಲ್ಲಿ ಭಾರತೀಯ ಚಿತ್ರರಂಗದ ಟಾಪ್ 10 ಹಿಟ್ ಚಿತ್ರಗಳ ಲಿಸ್ಟ್‌ಗೂ ಕೂಡ ಸೇರ್ಪಡೆಯಾಗಿದೆ.ಪುಷ್ಪ 2 ಸಿನಿಮಾ 4 ದಿನದಲ್ಲಿ ಇಲ್ಲಿಯವರೆಗೂ 529.45 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ. ಮೊದಲನೇ ದಿನ 164.25 ರೂ. ಕೋಟಿ, ಎರಡನೇ ದಿನ 93.8 ರೂ. ಕೋಟಿ, ಮೂರನೇ ದಿನ 119.25 ಕೋಟಿ ಮತ್ತು ಸ್ಯಾಕ್ನಿಕ್ ಪ್ರಕಾರ 4 ದಿನ ರೂ 141.5 ಕೋಟಿಯನ್ನು ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಹಿಟ್ ಸಿನಿಮಾಗಳ ದಾಖಲೆಗಳನ್ನು ಮುರಿಯುತ್ತಾ Pushpa 2 !!
ಹೀಗೆ ದಾಖಲೆ ಮೇಲೆ ದಾಖಲೆ ನಿರ್ಮಿಸಿದೆ ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಈ ಸೂಪರ್ ಹಿಟ್ ಚಿತ್ರ. ಈ ದಾಖಲೆಗಳನ್ನೆಲ್ಲಾ ನೋಡ್ತಾಯಿದ್ರೆ ಪುಷ್ಪ 2 ಭಾರತೀಯ ಚಿತ್ರರಂಗದಲ್ಲಿ ಭಾರಿ ಹೆಸರು ಮಾಡಿರುವ ಪಠಾಣ್, ಅನಿಮಲ್, ಸ್ತ್ರೀ 2, ಜವಾನ್, ಕಲ್ಕಿ 2898 AD, ಆರ್‌ಆರ್‌ಆರ್, ಕೆಜಿಎಫ್ 2 ಮತ್ತು ಬಾಹುಬಲಿ 2- ದಿ ಕನ್‌ಕ್ಲೂಷನ್‌ನ ಎಲ್ಲಾ ದಾಖಲೆಗಳನ್ನು ಮುರಿಯುವ ಸಾಧ್ಯತೆ ಸಂಭವ ಇದೆ.
ಈ ಹಿಂದೆ ಬಂದ ಸೂಪರ್ ಹಿಟ್ ಚಿತ್ರಗಳು ಗಳಿಸಿದೆಷ್ಟು?
ಕಲ್ಕಿ 2898 ಎಡಿ 414.85 ಕೋಟಿ ರೂ., ಆರ್‌ಆರ್‌ಆರ್ ರೂ. 477.5 ಕೋಟಿ, ಕೆಜಿಎಫ್ 2 ರೂ. 523.75 ಕೋಟಿಯನ್ನು ಗಳಿಸಿವೆ. ಪುಷ್ಪ 2 ಚಿತ್ರವು ಬಿಡುಗಡೆಯಾದ 4 ದಿನಗಳಲ್ಲಿ 529.45 ಕೋಟಿ ರೂಪಾಯಿಗಳನ್ನು ಕಲೆ ಹಾಕಿದ್ದು, 5 ನೇ ದಿನದಲ್ಲಿ, ಇದು 539 ಕೋಟಿ ರೂ ಕಲೆಕ್ಷನ್ ಮಾಡಿದ್ದ ಬಾಹುಬಲಿ 2 ರ ದಾಖಲೆಯನ್ನು
ಹಿಂದಿ ಬೆಲ್ಟ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ಸೌತ್ ಸಿನಿಮಾ?!
ಅಲ್ಲು ಅರ್ಜುನ್ ಅಭಿನಯದ ಈ ಚಿತ್ರವು ಮತ್ತೊಂದು ಹೆಗ್ಗಳಿಕೆಗೂ ಪಾತ್ರವಾಗಿದೆ. ಈವೆರಗೂ ಯಾವ ಸೌತ್ ಸಿನಿಮಾವೂ ಹಿಂದಿಯಲ್ಲಿ ಒಂದು ವಾರದಲ್ಲಿ ಅತಿಹೆಚ್ಚು ಗಳಿಕೆ ಮಾಡಿರಲಿಲ್ಲ. ಆದರೆ ಈ ಸಿನಿಮಾ ಹಿಂದಿಯಲ್ಲಿ ಒಂದೇ ವಾರದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ದಕ್ಷಿಣ ಚಲನಚಿತ್ರವಾಗಿದೆ.ಹಿಂದಿ ಬೆಲ್ಟ್‌ನಲ್ಲಿ ಹಿಂದಿಯಲ್ಲಿ ಒಂದೇ ವಾರದಲ್ಲಿ 285 ಕೋಟಿ ಬಾಚಿಕೊಳ್ಳುವ ಮೂಲಕ ಅತಿ ಹೆಚ್ಚು ಗಳಿಕೆ ಮಾಡಿದ ದಕ್ಷಿಣ ಚಲನಚಿತ್ರವಾಗಿದೆ. ಇನ್ನು ಈ ಹಿಂದೆ ಬಂದ ಬಾಹುಬಲಿ 2 ಹಿಂದಿಯಲ್ಲಿ ರೂ 247 ಕೋಟಿ ಮತ್ತು ಕೆಜಿಎಫ್ 2 ರೂ 268.63 ಕೋಟಿಯನ್ನು ಗಳಿಸಿದ್ದವು.
ಅಭಿಮಾನಿಗಳಿಗೆ ಸಂತೋಷದ ಸುದ್ದಿ !
ಇದೇ ತಿಂಗಳು 5 ರಂದು ವಿಶ್ವದಾದ್ಯಂತ ಬಿಡುಗಡೆಯಾದ Pushpa 2 ಚಿತ್ರ ನಾಲ್ಕೇ ದಿನದಲ್ಲಿ 750 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೇ ಸಂತಸಕ್ಕೆ ನಿರ್ಮಾಪಕರು ಚಿತ್ರದ ಟಿಕೆಟ್ ದರವನ್ನು ಕಡಿಮೆ ಮಾಡಲಾಗುತ್ತಿದ್ದೆ ಎಂದು ಹೇಳಿದ್ದಾರೆ
ಬಿಡುಗಡೆಯಾದ ಒಂದು ವಾರದವರೆಗೆ ಟಿಕೆಟ್ ದರವನ್ನು ಹೆಚ್ಚಿಸಲು ಸರ್ಕಾರ ಅನುಮತಿ ನೀಡಿದೆ. ಅಂದರೆ ಡಿ.9 ರಿಂದ 16 ರವರೆಗೆ ಸಿಂಗಲ್ ಸ್ಕ್ರೀನ್‌ಗಳಲ್ಲಿ ₹ 105, ಮಲ್ಟಿಪ್ಲೆಕ್ಸ್ ₹ 150 ಟಿಕೆಟ್ ದರ ಹೆಚ್ಚಿಸಿ ಬಿಡುಗಡೆ ಮಾಡಲಾಗಿತ್ತು.
ಆದರೆ ಇದೀಗ ಟಿಕೆಟ್ ದರ ಇಳಿಕೆ ಮಾಡಿರುವುದು ಅಭಿಮಾನಿಗಳಿಗೆ ಮಾತ್ರವಲ್ಲ ನಿರ್ಮಾಪಕರ ಆದಾಯವನ್ನೂ ಹೆಚ್ಚಿಸುವ ಉದ್ದೇಶದಿಂದ ಎಂಬ ಮಾತು ಕೇಳಿ ಬರುತ್ತಿದೆ.
Pushpa 2
****ಇತರ ಸುದ್ದಿಗಳು****
https://visioninglob.com/pushpa-2-3/: Pushap 2: ಆಫೀಸ್ನಲ್ಲಿ ಮಹಾಪ್ರಳಯ; ಬಾಲಿವುಡ್ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!! ಹುಡುಗರ ಕನಸಿನ ಯಮಹಾ RX 100ಮಾರುಕಟ್ಟೆಗೆ ಬರೋ ದಿನಾಂಕ ಫಿಕ್ಸ್
ಬೆಲೆ ಎಷ್ಟು ಗೊತ್ತಾ?: Pushap 2: ಆಫೀಸ್ನಲ್ಲಿ ಮಹಾಪ್ರಳಯ; ಬಾಲಿವುಡ್ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!
https://www.facebook.com/share/p/3t8hFLkKZhi6T1HU/?mibextid=oFDknk