ದೇಶವಾಸಿಗಳ ಶ್ರಮವೇ ಯಶಸ್ಸಿಗೆ ಕಾರಣ: ಪ್ರಧಾನಿ ನರೇಂದ್ರ ಮೋದಿ(Narendra Modi)
ಮೇಕ್ ಇನ್ ಇಂಡಿಯಾಗೆ ಈಗ 10 ವರ್ಷ ಪೂರ್ಣ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾ
ಈಗ 10 ವರ್ಷ ಪೂರ್ಣಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ(Narendra Modi) ಜಾಲತಾಣದಲ್ಲಿ ಸಂತಸ ವ್ಯಕ್ತ ಪಡಿಸಿದ್ದಾರೆ. ನಾವು – ಕಂಡ ಮತ್ತು ಮಹಾ ಕನಸೊಂದು ಅಭಿಯಾನವಾಗಿ
ಪಸರಿಸಿದ ಕಾರಣ ಜಗತ್ತಿನ ಯಾರೂ ಭಾರತವನ್ನು ಕಟ್ಟಿಹಾಕಲು ಸಾಧ್ಯವಾಗದ ಉನ್ನತ ಸ್ಥಿತಿಗೆ ತಲುಪಿದ್ದೇವೆ ಎಂದು ಹೇಳಿದ್ದಾರೆ. ಜತೆಗೆ ಉತ್ಪಾದನೆ ನಾವೀನ್ಯತೆಯ ಕ್ಷೇತ್ರದಲ್ಲಿ ಭಾರತವನ್ನು ಬಲಪಡಿಸಲು ಶ್ರಮಿಸುತ್ತಿರುವ 140 ಕೋಟಿ ಭಾರತೀಯರ ಸಂಕಲ್ಪ ಶಕ್ತಿಯೇ ಈ ಯೋಜನೆಯ ಯಶಸ್ಸಿಗೆ ಕಾರಣ.ರಕ್ಷಣ ಕ್ಷೇತ್ರಕ್ಕೆ ಮೇಕ್ ಇನ್ ಇಂಡಿಯಾ ಕೊಡುಗೆ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.
2023-24ನೇ ಸಾಲಿ ನಲ್ಲಿ ಭಾರತದ ರಕ್ಷಣ ಉತ್ಪಾದನೆ ಸಾರ್ವಕಾಲಿಕ ಗರಿಷ್ಠ 1.27 ಲಕ್ಷ ಕೋಟಿ ರೂ. ತಲುಪಿದ್ದು, ಇದುವರೆಗೂ 90 ಮಿತ್ರ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರರಫ್ತು ಮಾಡಲಾಗಿದೆ ಎಂದಿದ್ದಾರೆ. ಉತ್ತೇಜಿಸಲು ಯೋಜನೆಯನ್ನು ಸರಕಾರ ಬದ್ಧವಾಗಿದ್ದು, ಗುಣಮಟ್ಟ ನಮ್ಮಬದ್ಧತೆ, ದೋಷರಹಿತ ಉತ್ಪಾದನೆ ನಮ್ಮ ಮಂತ್ರವಾಗಿರಬೇಕು ಎಂದು ವ್ಯಕ್ತಪಡಿಸಿದ್ದಾರೆ.