ಕುಮಾರ ಪರ್ವತ (kumara parvatha)ಚಾರಣ ಆರಂಭ ಈ ಬಾರಿ ಗಿರಿಗದ್ದೆಯಲ್ಲಿ ತಂಗಲು ಅವಕಾಶ ಇಲ್ಲ! ಪುಷ್ಪಗಿರಿ ಚಾರಣ ಎಂದೂ ಕರೆಯಲ್ಪಡುವ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಪುಷ್ಪಗಿರಿ ವಣ್ಯಧಾಮ ವ್ಯಾಪ್ತಿಯ ಕುಮಾರ ಪರ್ವತ(kumara parvatha). .. ಚಾರಣ ಅ.6ರಿಂದ ಆರಂಭ. ಆನ್ಲೈನ್ ಮೂಲಕ ನೋಂದಾಯಿಸಿದವರಿಗೆ ಮಾತ್ರ ಚಾರಣಕ್ಕೆ ಅವಕಾಶ.ಕುಮಾರ ಪರ್ವತಕ್ಕೆ ಚಾರಣಕ್ಕೆ ಕುಕ್ಕೆ ಸಮೀಪದ ದೇವರಗದ್ದೆಯಿಂದ ಅಥವಾ ಸೋಮವಾರ ಪೇಟೆ ಬಳಿಯಿಂದ ತೆರಳಬಹುದು. ಕಳೆದ ವರ್ಷ ಕುಮಾರಪರ್ವತ(kumara parvatha) ಚಾರಣಕ್ಕೆಭಾರೀ ಸಂಖ್ಯೆಯ – ಚಾರಣಿಗರು ಆಗಮಿಸಿದ್ದರಿಂದ ಸಮಸ್ಯೆ ಉಂಟಾದ ಕಾರಣ ನಿರ್ದಿಷ್ಟ ಸೀಮಿತ ಚಾರಣಿಗರ ಭೇಟಿಗೆ ಅವಕಾಶ ಕಲ್ಪಿಸಲಾಗಿತ್ತು.ಬಳಿಕ ಮತ್ತೆ ಮಳೆ ಆರಂಭ,ಬೇಸಗೆಯಿಂದ ಚಾರಣ ನಿರ್ಬಂಧಿಸಿ ಹೊಸ ಈ ವರ್ಷದಿಂದ ಆನ್ ಲೈನ್ ಬುಕ್ಕಿಂಗ್,ಮಾರ್ಗಸೂಚಿಯೊಂದಿಗೆ ಪರಿಸರ ಸ್ನೇಹಿ ಚಾರಣಕ್ಕೆ ಅವಕಾಶ ನೀಡುವ ಬಗ್ಗೆ ಕಳೆದ ಬೇಸಗೆಯಲ್ಲಿ ಸುಬ್ರಹ್ಮಣ್ಯದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದರು.
ಆನ್ಲೈನ್ನಲ್ಲಿ ಬುಕ್ಕಿಂಗ್
ಈ ವರ್ಷದಿಂದ ಅರಣ್ಯ ಇಲಾಖೆಯ ಅರಣ್ಯ ವಿಹಾರ ಎಂಬ ವೆಬ್ಸೈಟ್ನಲ್ಲಿ ನೋಂದಾಯಿಸಿ.
ಚಾರಣ ಕೈಗೊಳ್ಳಬಹುದು.ದಿನವೊಂದಕ್ಕೆ ಕೇವಲ 335 ಚಾರಣಿಗರಿಗೆಮಾತ್ರ ಅವಕಾಶ ಇರಲಿದೆ.
ಕುಕ್ಕೆ ಸುಬ್ರಹ್ಮಣ್ಯಕುಮಾರಪರ್ವತ, ಕೊಡಗಿನಬೀದಹಳ್ಳಿ – ಕುಮಾರ ಪರ್ವತ ಬೀದಹಳ್ಳಿ, ಬೀದಹಳ್ಳಿ- ಕುಮಾರ ಪರ್ವತ ಸುಬ್ರಹ್ಮಣ್ಯ ಎಂಬ ಮೂರು ಆಯ್ಕೆಗಳನ್ನು ಪ್ರವೇಶ ಚಾರಣ ಮಾರ್ಗ ಆಯ್ಕೆ ಆನ್ಲೈನ್
ಬುಕ್ಕಿಂಗ್ನಲ್ಲಿ ತಿಳಿಸಲಾಗಿದೆ.
ಗಿರಿಗದ್ದೆಯಲ್ಲಿ ತಂಗಲು ನಿರ್ಬಂಧ ವಿಧಿಸಲಾಗಿದೆ ಈ ಹಿಂದೆ ಕುಮಾರ ಪರ್ವತ(kumara parvatha) ಚಾರಣ ಹೊರಟವರು ಗಿರಿಗದ್ದೆಯಲ್ಲಿ ವಾಸ್ತವ್ಯ ಮಾಡಿ ಮರುದಿನ ಬೆಳಗ್ಗೆ ಪರ್ವತದ ಮೇಲಿನ ಸ್ಥಳಕ್ಕೆ ತೆರಳುತ್ತಿದ್ದರು. ಆದರೆ ಈ ಬಾರಿ ಅದಕ್ಕೆ ನಿರ್ಬಂಧಿಸಲಾಗಿದೆ. ಸುಬ್ರಹ್ಮಣ್ಯದ ದೇವರಗದ್ದೆಯ ಕುಮಾರಪರ್ವತ ಚಾರಣ ಪ್ರವೇಶಕ್ಕೆ ಬೆಳಗ್ಗೆ ಗಂಟೆ 6ರಿಂದ 9ರ ಅವಧಿಯಲ್ಲಿ ಪ್ರವೇಶಿಸಬೇಕು. ಬೆಳಗ್ಗೆ 11 ಗಂಟೆಗೆ ಗಿರಿಗದ್ದೆಯಿಂದ ಮೇಲಿನ ಪ್ರದೇಶಕ್ಕೆ ತೆರಳಬೇಕು. ಸಂಜೆ 6 ಗಂಟೆ ಮೊದಲು ಚಾರಣದಿಂದ ಕಡ್ಡಾಯವಾಗಿ ನಿರ್ಗಮಿಸಬೇಕು. ಚಾರಣದ ಮಧ್ಯೆ ಎಲ್ಲೂ ತಂಗಲು ಅವಕಾಶ ಇರುವುದಿಲ್ಲ. ಒಂದೇ ದಿನದಲ್ಲಿ ಮರಳಬೇಕು ಸಹಿತ ಹಲವು ಷರತ್ತುಗಳನ್ನು ಅರಣ್ಯ ಇಲಾಖೆವಿಧಿಸಿದೆ.ಗಿರಿಗದ್ದೆಯಲ್ಲಿ ತಂಗಲು ಅವಕಾಶ ಇಲ್ಲವಾದ್ದರಿಂದ ಸುಬ್ರಹ್ಮಣ್ಯದಿಂದ ಸುಮಾರು 12 ಕಿ.ಮೀ. ದೂರದ ಕಠಿನ ಹಾದಿಯ ಪರ್ವತವನ್ನು ಗರಿಷ್ಠ12 ಗಂಟೆಯೊಳಗೆ (ಬೆಳಗ್ಗೆ 6ರಿಂದಸಂಜೆ 6 ಗಂಟೆ) ವೀಕ್ಷಿಸಿ ಮರಳುವುದುಈ ಹಿಂದೆ ಕುಮಾರ ಪರ್ವತ ಅನಿವಾರ್ಯವಾಗಿದೆ.