ದೀಪಾವಳಿ ಹಬ್ಬಕ್ಕೆ ರಿಲಯನ್ಸ್ ಜಿಯೋ ಈಗಾಗಲೇ ಹಲವಾರು ಆಫರ್ ಬಿಡುಗಡೆ ಮಾಡಿದೆ. ಇದೀಗ ಜಿಯೋ ತನ್ನ ಭಾರತ್ 4ಜಿ ಫೋನ್ ಬೆಲೆಯಲ್ಲಿ ಭಾರಿ ಕಡಿತ ಮಾಡಿದೆ ಎಂಬ ಸುದ್ದಿ ಇದೆ. ಇದರಿಂದಾಗಿ ಕೇವಲ 699 ರೂಪಾಯಿಗೆ ಜಿಯೋ ಭಾರತ್ 4ಜಿ ಫೋನ್ (jio phone)ಲಭ್ಯವಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಜಿಯೋ ಭಾರತ್ 4ಜಿ ಫೋನ್ ಬೆಲೆಗಳ ಮೇಲೆ ಶೇಕಡಾ 30 ರಷ್ಟು ಕಡಿತಮಾಡಲಾಗಿದೆ.
ಇದು ಲಿಮಿಟೆಡ್ ಅವಧಿಯ ಕೊಡುಗೆಯಾಗಿದೆ. ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಇದೀಗ ಗ್ರಾಹಕರಿಗೆ ಬಂಪರ್ ಕೊಡುಗೆ ಮೂಲಕ ವಹಿವಾಟು ನಡೆಸಲು ಮುಂದಾಗಿದೆ.
ಮತ್ತೊಂದು ವಿಶೇಷತೆ ಏನೆಂದರೆ ಜಿಯೋ ಭಾರತ್ ಫೋನ್ (jio phone)ರಿಚಾರ್ಜ್ ಬೆಲೆ ಕೇವಲ 123 ರೂಪಾಯಿ. ಮಾಸಿಕ್ ಟಾರಿಫ್ ಯೋಜನೆಯಲ್ಲಿ ಅನ್‌ಲಿಮಿಟೆಡ್ ಕಾಲ್, 14 ಜಿಬಿ ಉಚಿತ ಡೇಟಾ ಸಿಗಲಿದೆ. ಅತೀ ಕಡಿಮೆ ಬೆಲೆಯಲ್ಲಿ ತಿಂಗಳ ರೀಚಾರ್ಜ್ ಆಗಲಿದೆ. ಜಿಯೋದ ಮಾಸಿಕ 123 ರೂಪಾಯಿಗಳ ರೀಚಾರ್ಜ್ ಯೋಜನೆ ಇತರ ಆಪರೇಟರ್ ಗಳಿಗಿಂತ 40 ಪ್ರತಿಶತ ಕಡಿಮೆಯಾಗಿದೆ. ಏಕೆಂದರೆ ಇತರ ನೆಟ್‌ವರ್ಕ್‌ಗಳ ಫೀಚರ್ ಫೋನ್‌ಗಳ ಮಾಸಿಕ ರೀಚಾರ್ಜ್ ಕನಿಷ್ಠ 199 ರೂಪಾಯಿ ಇದೆ. ಇದು ಜಿಯೋಗಿಂತ 76 ರೂಪಾಯಿ ಹೆಚ್ಚು ದುಬಾರಿಯಾಗಿದೆ. ಅಂದರೆ, ಜಿಯೋ ಗ್ರಾಹಕರಿಗೆ ಪ್ರತಿ ರೀಚಾರ್ಜ್ ನಲ್ಲಿ ತಿಂಗಳಿಗೆ 76 ರೂಪಾಯಿ ಭರ್ಜರಿ ಉಳಿತಾಯ ಆಗಲಿದೆ.
ತಿಂಗಳಿಗೆ 76 ರೂಪಾಯಂತೆ ಉಳಿತಾಯ ಮಾಡಿದರೆ 9 ತಿಂಗಳಲ್ಲಿ ಉಳಿತಾಯ ಆಗುವ ಮೊತ್ತ ಜಿಯೋ ಫೋನ್ (jio phone)ಬೆಲೆಗೆ ಸರಿಹೊಂದಲಿದೆ. ಹೀಗಾಗಿ ಗ್ರಾಹಕರು ರೀಚಾರ್ಜ್‌ಗೆ ಹೆಚ್ಚಿನ ಹಣ ರೀಚಾರ್ಜ್ ಮಾಡುವ ತಲೆನೋವಿನಿಂದ ದೂರವಾಗಬಹುದು. ಇನ್ನು 2ಜಿ ಯಿಂದ 4ಜಿ ಗೆ ಅಪ್‌ಗ್ರೇಡ್ ಆಗುವ ಸುವರ್ಣ ಅವಕಾಶವನ್ನು ಜಿಯೋ ನೀಡುತ್ತಿದೆ. 455 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, ಚಲನಚಿತ್ರ ಪ್ರೀಮಿಯರ್‌ಗಳು ಮತ್ತು ಹೊಸ ಚಲನಚಿತ್ರಗಳು, ವೀಡಿಯೊ ಶೋಗಳು, ಲೈವ್ ಸ್ಪೋರ್ಟ್ಸ್ ಕಾರ್ಯಕ್ರಮಗಳು, ಜಿಯೋ ಸಿನೆಮಾ ಮುಖ್ಯಾಂಶಗಳು, ಡಿಜಿಟಲ್ ಪಾವತಿಗಳು, ಕ್ಯೂಆರ್ ಕೋಡ್ ಸ್ಕ್ಯಾನ್‌ಗಳು ಜಿಯೋಭಾರತ್ 4 ಜಿ ಫೋನ್‌ನಲ್ಲಿ ಲಭ್ಯವಿದೆ. ಜಿಯೋಪೇ ಮತ್ತು ಜಿಯೋಚಾಟ್ ನಂತಹ ಪ್ರಿಲೋಡೆಡ್ ಅಪ್ಲಿಕೇಶನ್ ಗಳು ಸಹ ಈ ಫೋನ್‌ನಲ್ಲಿ ಲಭ್ಯವಿರುತ್ತವೆ. ಹತ್ತಿರದ ಅಂಗಡಿಗಳ ಹೊರತಾಗಿ, ಫೋನ್ ಅನ್ನು ಜಿಯೋಮಾರ್ಟ್ ಅಥವಾ ಅಮೆಜಾನ್‌ನಿಂದ ಸಹ ಇದನ್ನು ಖರೀದಿಮಾಡಬಹುದು.
ಜಿಯೋ ಭಾರತ್ ಫೋನ್ (jio phone)ಹೊಸ ಕೊಡುಗೆ ಮೂಲಕ ಗ್ರಾಹಕರ ಹತ್ತಿರ ಬಂದಿದೆ. ಅತೀ ಕಡಿಮೆ ಬೆಲೆಯಲ್ಲಿ ಫೋನ್, ಕಡಿಮೆ ರೀಚಾರ್ಜ್, ಉಚಿತ ಸೌಲಭ್ಯಗಳು ಸಿಗಲಿದೆ. ಈಗಾಗಲೇ ಜಿಯೋ ಭಾರತ್ ಫೋನ್‌ಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಇದೀಗ ಜಿಯೋ ಭಾರತ್ ಆಫರ್‌ನಿಂದ ಮಾರಾಟದಲ್ಲೂ ಗಣನೀಯ ಏರಿಕೆ ಕಾಣುವ ಸಾಧ್ಯತೆ ಕಾಣಬಹುದು.
ಇತ್ತೀಚೆಗೆ ಜಿಯೋ ಭಾರತ್ ಫೀಚರ್ ಫೋನ್ (jio phone )ಬಿಡುಗಡೆ ಮಾಡಿತ್ತು. ಜಿಯೋ ಭಾರತ್ V3 ಹಾಗೂ ಜಿಯೋ ಭಾರತ್ V4 ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಹೆಚ್ಚಿನ ಬ್ಯಾಟರಿ ಬಾಳಿಕೆ ಹಾಗೂ ಉಪಯೋಗಕ್ಕಾಗಿ 1000 mAh ಬ್ಯಾಟರಿ ಪ್ಯಾಕ್ ಇದರಲ್ಲಿ ಬಳಸಲಾಗಿದೆ. 128 ಜಿಬಿ ಸ್ಟೋರೇಜ್ ವಿಸ್ತರಿಸಬಹುದಾದ ಸಾಮರ್ಥ್ಯ ಹೊಂದಿದೆ. ವಿಶೇಷ ಅಂದರೆ 12 ಭಾಷೆಗಳಿಗೆ ಈ ಜಿಯೋ ಬಾರತ್ V3, V4 ಫೋನ್ ಸಪೋರ್ಟ್ ಮಾಡಲಿದೆ. ಈ ಫೋನ್ ಕೂಡ 123 ರೂಪಾಯಿ ಬೆಲೆಯಲ್ಲಿ ರೀಚಾರ್ಜ್ ಮಾಡಬಹುದು.
Nice
Thanks