ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ(India), ಟೆಸ್ಟ್ ಚರಿತ್ರೆಯಲ್ಲಿ 5 ದಾಖಲೆ ಬರೆದಿದೆ. ಅತೀ ವೇಗದಲ್ಲಿ 50,100,150,200 ಹಾಗೂ 250 ರನ್ ಬಾರಿಸಿ ಗ್ರೀನ್ ಪಾರ್ಕ್ ಅಂಗಳದಲ್ಲಿ ಮೆರೆದಾಡಿದೆ .ಈ ಸಂದರ್ಭದಲ್ಲಿ ಭಾರತ(India) ಕೇವಲ 3 ಓವರ್ ಗಳಲ್ಲಿ 50 ರನ್ ಬಾರಿಸಿತು. ಇದೇ ವರ್ಷ ವೆಸ್ಟ್ ಇಂಡೀಸ್ ಎದುರಿನ ಟ್ರೆಂಟ್ ಬ್ರಿಜ್ ಟೆಸ್ಟ್ ನಲ್ಲಿ ಇಂಗ್ಲೆಂಡ್ 4.2 ಓವರ್ ಗಳಲ್ಲಿ 50 ರನ್ ಹೊಡೆದ ದಾಖಲೆ ಪತನಗೊಂಡಿತು.ಭಾರತ 50 ರನ್ ಪೂರೈಸುವಾಗ ಯಶಸ್ವಿ ಜೈಸ್ವಾಲ್ 13 ಎಸೆತಗಳಿಂದ 30 ರನ್ ಹಾಗೂ ರೋಹಿತ್ ಶರ್ಮ 6 ಎಸೆತಗಳಿಂದ 19 ರನ್ ಮಾಡಿದ್ದರು.
ತನ್ನದೇ ದಾಖಲೆ ತಿದ್ದಿ ಬರೆದ ಭಾರತ(India).
ಭಾರತದ(India) 100 ರನ್ 10.1 ಓವರ್ ಗಳಲ್ಲಿ ಒಟ್ಟುಗೂಡಿತು. ಈ ಸಂದರ್ಭದಲ್ಲಿ ಭಾರತ(India) ತನ್ನದೇ ದಾಖಲೆಯನ್ನು ತಿದ್ದಿ ಬರೆಯಿತು. ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್ ನಲ್ಲಿ ಆಡಲಾದ ಇಂಗ್ಲೆಂಡ್ ಟೆಸ್ಟ್ ನಲ್ಲಿ 12.2 ಓವರ್ ಗಳಿಂದ 100 ರನ್ ಬಾರಿಸಿದ್ದು ದಾಖಲೆ ಆಗಿತ್ತು. ಈ ದಾಖಲೆ ಪತನಗೊಳ್ಳುವಾಗ ಯಶಸ್ವಿ ಜೈಸ್ವಾಲ್ 40 ಎಸೆತಾಗಳಿಂದ 67 ರನ್ ಮಾಡಿದ್ದರು.
ಭಾರತದ(India) 150 ರನ್ 18.2 ಓವರ್ ಗಳಲ್ಲಿ ಬಂತು. ಮೇಲೆ ಉಲ್ಲೇಖಿಸಲಾದ ಪೋರ್ಟ್ ಆಫ್ ಸ್ಪೇನ್ ಟೆಸ್ಟ್ ನಲ್ಲಿ 21.1 ಓವರ್ ಗಳಿಂದ 150 ರನ್ ಬಾರಿಸಿದ ತನ್ನದೇ ದಾಖಲೆಯನ್ನು ಮೀರಿ ನಿಂತಿತು.
ಆಸೀಸ್ ದಾಖಲೆ ಪತನ
ಭಾರತದ(India) 200 ರನ್ 24.2 ಓವರ್ ಗಳಲ್ಲಿ ಹರಿದು ಬಂತು. ಈ ಸಂದರ್ಭದಲ್ಲಿ ಆಸ್ಟ್ರೇಲಿಯದ ದಾಖಲೆ ಬ್ರೇಕ್ ಆಯಿತು. ಅದು ಪಾಕಿಸ್ತಾನ ವಿರುದ್ಧದ 2017 ಸಿಡ್ನಿ ಟೆಸ್ಟ್ ನಲ್ಲಿ 28.1 ಓವರ್ ಗಳಲ್ಲಿ 200 ರನ್ ಗಳಿಸಿದ್ದರು.
ಟೀಮ್ ಇಂಡಿಯಾ(India) 30.1 ಓವರ್ ಗಳಲ್ಲಿ 250 ರನ್ ಗಡಿ ತಲುಪಿತು. ಪಾಕಿಸ್ತಾನ ವಿರುದ್ಧದ 2022ರ ರಾವಲ್ಪಿಂಡಿ ಪಂದ್ಯದಲ್ಲಿ ಆಸ್ಟ್ರೇಲಿಯ 33.6 ಓವರ್ ಗಳಲ್ಲಿ 250 ರನ್ ಗಳಿಸಿದ ದಾಖಲೆ ಪತನ ಗೊಂಡಿತು.