ಬೆಳೆ ಹೆಚ್ಚಳದಿಂದಾಗಿ ಬೆಳೆಗಾರರು ಸಂತೋಷಗೊಂಡಿದ್ದರೂ ಬಹುತೇಕರಲ್ಲಿ ಇಳುವರಿ ಕಡಿಮೆಯಿದೆ.15 ದಿನಗಳಲ್ಲಿ 20 ರೂ. ಏರಿಕೆ ಕಂಡಿದೆ.
15 ದಿನಗಳ ಹಿಂದೆ ಒಂದು ಕೆಜಿ ತೆಂಗಿನಕಾಯಿಗೆ 28-30 ರೂ. ಇತ್ತು. ಆದರೆ ಈಗ ಹಬ್ಬಗಳ ಋತು ಕೂಡ.
ಆರಂಭಗೊಂಡಿದ್ದು, ಎಣ್ಣೆಮಿಲ್‌ಗಳಿಂದಲೂ ಬೇಡಿಕೆ ಹೆಚ್ಚುರುವುದರಿಂದ 15 ದಿನಗಳಲ್ಲೇ 15-20 ರೂ.ಏರಿಕೆಯಾಗಿದೆ. 20 ವರ್ಷಗಳಿಂದ ತೆಂಗಿನಕಾಯಿ ಬೆಲೆ ಇಷ್ಟು ಏರಿದ್ದಿಲ್ಲ.
ಬೆಳೆಗಾರರ ಬಳಿಗೆ ದೌಡು
ತೆಂಗಿನಕಾಯಿಗೆ(Coconut) ಬೇಡಿಕೆ ಹೆಚ್ಚಾಗುತ್ತಿದ್ದಂತೆ ತೆಂಗಿನಕಾಯಿ ವ್ಯಾಪಾರಿಗಳು, ಎಣ್ಣೆಮಿಲ್ ಮಾಲಕರು ಈಗ ತೆಂಗುಬೆಳೆಗಾರರ ತೋಟಕ್ಕೆ ತೆರಳಿ ಮೊದಲೇ ಮಾಡಿಕೊಳ್ಳುವ ಪ್ರಕ್ರಿಯೆ ಹಲವೆಡೆ ಪ್ರಾರಂಭಗೊಂಡಿದೆ.
ಕರಾವಳಿ: 80 ಸಾವಿರ ಹೆಕ್ಟೇರ್ ಪ್ರದೇಶ
ಕರಾವಳಿ ಜಿಲ್ಲೆಗಳಲ್ಲಿ ಒಟ್ಟಾರೆ 80 ಸಾವಿರ ಹೆಕ್ಟೇರ್. ಪ್ರದೇಶದಲ್ಲಿ ತೆಂಗಿನ ಬೆಳೆಯಿದ್ದು, ಅಂದಾಜು ಒಂದೂವರೆ ಲಕ್ಷ (ಅರ್ಧ ಎಕರೆಗಿಂತ ಹೆಚ್ಚಿರುವವರು) ಬೆಳೆಗಾರರಿದ್ದಾರೆ.ಉಡುಪಿ ಜಿಲ್ಲೆಯಲ್ಲಿ ಅಂದಾಜು 60 ಸಾವಿರ ಹಾಗೂ ದ.ಕ.ಜಿಲ್ಲೆಯಲ್ಲಿ 80 ಸಾವಿರಕ್ಕೂ
4-5 ತಿಂಗಳಲ್ಲಿ ಇನ್ನಷ್ಟು ಹೆಚ್ಚಳ
ಬೇಡಿಕೆಯಷ್ಟು ಇಳುವರಿ ಇಲ್ಲ. ಇನ್ನು 4-5 ತಿಂಗಳಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗಬಹುದು. ಒಂದು ಕಾಯಿಗೆ 30-40 ರೂ. ಸಿಕ್ಕರಷ್ಟೇ ಲಾಭ ಎಂದು ತೆಂಗು ಬೆಳೆಗಾರಾರು ತಿಳಿಸಿದ್ದಾರೆ.
ಮಂಗ ಸಹಿತ ಕಾಡು ಪ್ರಾಣಿಗಳ ಉಪಟಳದಿಂದಾಗಿ ತೆಂಗಿನಕಾಯಿ(Coconut) ಉತ್ಪಾದನೆ ಆಗುತ್ತಿಲ್ಲ.
ಈ ಕೊರೊನಾ ಅನಂತರ ಆರೋಗ್ಯ ವರ್ಧಕ ಎಣ್ಣೆಗಳ ಬಳಕೆಗೆ ಬೇಡಿಕೆ ಹೆಚ್ಚಿದ್ದು, ಅದರಲ್ಲೂ ತೆಂಗಿನ ಎಣ್ಣೆ ಉತ್ಪಾದನೆ ಹೆಚ್ಚಾಗುತ್ತಿದೆ. ಭಾರೀ ಬೇಡಿಕೆಯಿದೆ.
ಬೆಲೆ ಏರಿಕೆಗೆ ಮುಖ್ಯ ಕಾರಣಗಳೇನು?
ಈ ಬಾರಿ ಅತಿಯಾದ ಮಳೆಯಿಂದಾಗಿ ಎಲೆ
ಕಾಯಿಗಳು ಸಾಕಷ್ಟು ಉದುರಿ ಶೇ. 30ರಷ್ಟು ಇಳುವರಿ
ಕಡಿಮೆಯಾಗಿದೆ. ಇದು ಮುಂದಿನ 4-5 ತಿಂಗಳವರೆಗೆ
ಪರಿಣಾಮ ಬೀರಲಿದೆ. ಕರಾವಳಿ ಮಾತ್ರವಲ್ಲ
ಮಲೆನಾಡು, ಕೇರಳ, ಮಹಾರಾಷ್ಟ್ರಸೇರಿದಂತೆ ಇಡೀ
ಪಶ್ಚಿಮ ಕರಾವಳಿಯಾದ್ಯಂತ ಇಳುವರಿ ಕಡಿಮೆಯಾಗಿದೆ.
ಕಳೆದ ಬೇಸಗೆಯಲ್ಲಿ ಎಳನೀರಿಗೆ ಭಾರೀ ಬೇಡಿಕೆ
ಯದ್ದು 1ಕ್ಕೆ40-50 ರೂ. ವರೆಗೂ ಇದ್ದಿದ್ದರಿಂದ
ಬಹುತೇಕ ಬೆಳೆಗಾರರು ಸೀಯಾಳ ಮಾರಲು ಹೆಚ್ಚು ಆಸಕ್ತಿ
ತೋರಿಸಿದ್ದರಿಂದ ಶೇ. 30ರಷ್ಟುತೆಂಗಿನ ಕಾಯಿ ಉತ್ಪಾದನೆ
ಕಡಿಮೆಯಾಗಿದೆ. ಕೊರೊನಾ ಅನಂತರ ಬೇರೆ ತಂಪು
ಪಾನೀಯಗಳಿಗಿಂತ ಎಳನೀರಿಗೆ ಬೇಡಿಕೆ ಜಾಸ್ತಿಯಿದೆ
ಕೆಲವು ವರ್ಷಗಳಿಂದ ಹೊಸ ತೋಟ ಯಾರೂ
ಮಾಡಿಲ್ಲ. ಮರದಿಂದ ತೆಂಗಿನ ಕಾಯಿ ತೆಗೆಸುವುದು,
ಖರ್ಚುವೆಚ್ಚ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ.
ಕರಾವಳಿ, ಮಲೆನಾಡು ಭಾಗದಲ್ಲಿ ಈ ವರ್ಷ
ತರಹೇವಾರಿ ರೋಗ ಬಾಧೆಗಳು ಹೆಚ್ಚಾಗಿದ್ದು, ನುಸಿಬಾಧೆ
ಗರಿ ತಿನ್ನುವ ಹುಳ ಬಾಧೆ ಇತ್ಯಾದಿಯಿಂದಲೂ ಶೇ. 10ರಷ್ಟು
ಇಳುವರಿ ನಷ್ಟವಾಗಿದೆ.
ಕೊಬ್ಬರಿ ದರವೂ ಹೆಚ್ಚಳ
ಜುಲೈ – ಆಗಸ್ಟ್‌ನಲ್ಲಿ 90-100 ರೂ. ಇದ್ದ ಒಂದು ಕೆಜಿ ಕೊಬ್ಬರಿ ಬೆಲೆ ಈಗ ಏಕಾಏಕಿ 150-160 ರೂ.ಗೆಏರಿಕೆ ಕಂಡಿದೆ. ಕೊಬ್ಬರಿ ಬೆಂಬಲ ಬೆಲೆ ಕ್ವಿಂಟಾಲ್‌ಗೆ3-4 ಸಾವಿರ ರೂ. ಇದ್ದರೆ, ಈಗ ಅದಕ್ಕಿಂತ 15-16 ಸಾವಿರ ರೂ. ಮಾರುಕಟ್ಟೆದರವೇ ಇದೆ.