ಶಬರಿಮಲೆ ಅಯ್ಯಪ್ಪ ಸ್ವಾಮಿ (ayyappa swamy ದರ್ಶನಕ್ಕೆ ಇನ್ನು ಆನ್‌ಲೈನ್ ಮುಲಕ ನೋಂದಣಿ ಕಡ್ಡಾಯ : 80,000 ಸ್ಲಾಟ್
ಈ ಬಾರಿ ಶಬರಿಮಲೆಗೆ ಅಯ್ಯಪ್ಪನ ದರ್ಶನಕ್ಕೆ ಬರುವ ಯಾತ್ರಾರ್ಥಿಗಳು ಆನ್ ಲೈನ್ ಮೂಲಕವೇ ಬುಕ್ಕಿಂಗ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಪ್ರತೀ ದಿನ 80,000 ಭಕ್ತರಿಗೆ ಮಾತ್ರವೇ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡಲಾಗುತ್ತದೆ. ಭಕ್ತರು ಶಬರಿಮಲೆ ದೇಗುಲದ ವೆಬ್ಸೈ ಟ್‌ನಲ್ಲಿ ವರ್ಚುವಲ್ ಬುಕಿಂಗ್ ಮಾಡಬೇಕಾಗುತ್ತದೆ. ಈ ವೇಳೆ ಯಾತ್ರಾರ್ಥಿಗಳು ಸಾಗುವ ಮಾರ್ಗವನ್ನೂ ಆಯ್ಕೆ ಮಾಡಿ ಕೊಳ್ಳಬಹುದಾಗಿದೆ. ಕಡಿಮೆ ಜನಸಂದಣಿ ಇರುವ ಮಾರ್ಗಗಳೂ ಕೂಡ ಲಭ್ಯವಿದೆ. ಕಾಡಿನ ಮಾರ್ಗದಲ್ಲಿ
ಸಂಚರಿಸಲಿರುವ ಯಾತ್ರಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸುವುದಾಗಿಯೂ ಸರಕಾರ ತಿಳಿಸಿದೆ.
ayyappa swamy