
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಮಿಂಚಿರುವ ಅಭಿಷೇಕ್ ಶರ್ಮಾ(Abhishek Sharma), ಸನ್‌ರೈಸರ್ಸ್ ಗೆಲುವಿನಲ್ಲಿ ಮಿಂಚಿದರು. ದಾಖಲೆಯ ಮೊತ್ತವನ್ನು ಹೈದರಾಬಾದ್ ಸಲೀಸಾಗಿ ಚೇಸ್ ಮಾಡಿ ಗೆಲ್ಲುವಲ್ಲಿ ಅಭಿಷೇಕ್ ಶರ್ಮಾ ಅವರ ಪಾತ್ರ ಬಹಳ ಮುಖ್ಯ ಈ ಧಮಾಕೆದಾರ್ ಇನಿಂಗ್ಸ್ ಮೂಲಕ ಅಭಿಷೇಕ್ ಶರ್ಮಾ(Abhishek Sharma) ವಿಶ್ವ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸವನ್ನು ಬರೆದರು.

ಹಾಗಿದ್ದರೆ ಅವರು ಬರೆದ ದಾಖಲೆಗಳು ಏನು ಎಂಬ ವರದಿ ಇಲ್ಲಿದೆ ನೊಡಿ.
ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಾಯಕ ಶ್ರೇಯಸ್ ಅಯ್ಯರ್ ಅವರು ಬಾರಿಸಿದ 82 ರನ್‌ಗಳ ಸಹಾಯದಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 245 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಹೈದರಾಬಾದ್ 18.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 247 ರನ್ ಕಲೆ ಹಾಕಿ ಅಬ್ಬರಿಸಿತು. ಈ ಇನಿಂಗ್ಸ್‌ನಲ್ಲಿ ಅಭಿಷೇಕ್ ಶರ್ಮಾ ಅವರ ಅಬ್ಬರದ ಆಟ ಎಲ್ಲರ ಗಮನ ಸೆಳೆಯಿತು.ಪಂಜಾಬ್ ವಿರುದ್ಧ ಪಂದ್ಯದಲ್ಲಿ ಅಭಿಷೇಕ್ 55 ಎಸೆತಗಳಲ್ಲಿ 141 ರನ್ ಬಾರಿಸಿದರು. ಇವರ ಇನಿಂಗ್ಸ್‌ನಲ್ಲಿ 14 ಬೌಂಡರಿ, 10 ಸಿಕ್ಸರ್‌ಗಳು ಸೇರಿವೆ. ಈ ಮೂಲಕ ಅಭಿಷೇಕ್ ಹೊಸ ದಾಖಲೆ ಬರೆದರು. ಟಿ20 ಕ್ರಿಕೆಟ್ ಇತಿಹಾಸದಲ್ಲಿ 40 ಅಥವಾ ಅದಕ್ಕಿಂತ ಕಡಿಮೆ ಎಸೆತದಲ್ಲಿ ಶತಕವನ್ನು ಮೂರು ಬಾರಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡರು.
ವಿಶ್ವ ದಾಖಲೆ(Abhishek Sharma)
ದೇಶೀಯ ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದಾದ ಬಳಿಕ ಇದೇ ವರ್ಷ ಇಂಗ್ಲೆಂಡ್ ವಿರುದ್ಧ 37 ಎಸೆತಗಳಲ್ಲಿ ಶತಕ ಸಾಧನೆ ಮಾಡಿದ್ದರು. ಈಗ ಪಂಜಾಬ್ ವಿರುದ್ದ 40 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ 40 ಕ್ಕೂ ಕಡಿಮೆ ಎಸೆತದಲ್ಲಿ ಮೂರು ಬಾರಿ ಶತಕ ಸಿಡಿಸಿದ ಹಿರಿಮೆ ತಮ್ಮದಾಗಿಸಿಕೊಂಡರು. ಶ್ರೀಲಂಕಾದ ದಾಸುನ್ ಶನಕ ಮತ್ತು ಭಾರತದ ಉರ್ವಿಲ್ ಪಟೇಲ್ ಟಿ20 ಕ್ರಿಕೆಟ್‌ನಲ್ಲಿ 40 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ತಲಾ ಎರಡು ಶತಕಗಳನ್ನು ಗಳಿಸಿದ್ದಾರೆ.
ಅಭಿಷೇಕ್(Abhishek Sharma)ಹೇಳಿದ್ದೇನು?
ಪಂದ್ಯದ ಬಳಿಕ ಮಾತನಾಡಿರುವ ಅಭಿಷೇಕ್ ಇದು ತುಂಬಾ ವಿಶೇಷವಾದ ದಿನ. ತಂಡದ ಗೆಲುವಿನಲ್ಲಿ ಕಾಣಿಕೆ ನೀಡಿದ್ದು ಖುಷಿ ನೀಡಿದೆ. ಇನ್ನು ಯುವರಾಜ್ ಸಿಂಗ್ ಅವರೊಂದಿಗೆ ಸತತ ಸಂಪರ್ಕದಲ್ಲಿದ್ದೆ. ಇನ್ನು ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಸೂರ್ಯಕುಮಾರ್ ಯಾದವ್ ಅವರಿಗೆ ಧನ್ಯವಾದ ಅರ್ಪಿಸಿದರು. ಸೂರ್ಯ, ಅಭಿಷೇಕ್ ಅವರಿಗೆ ಕೆಲವು ಸಲಹೆ ನೀಡಿದ್ದಾಗಿ ತಿಳಿಸಿದರು.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮ (Abhishek Sharma)ತಮ್ಮ ಬ್ಯಾಟಿಂಗ್ ಮೂಲಕ ಅಬ್ಬರಿಸಿ ಬೊಬ್ಬರಿದರು.
ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದರು. ಕೇವಲ 40 ಎಸೆತಗಳಲ್ಲಿ ಶತಕ ಗಳಿಸಿದ ಅಭಿಶೇಕ್, ಒಟ್ಟು 55 ಎಸೆತಗಳನ್ನು ಎದುರಿಸಿ 14 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಾಯದಿಂದ 141 ರನ್ ಗಳಿಸಿ ಐಪಿಎಲ್ನಲ್ಲಿ ತಮ್ಮ ಹೆಸರಿಗೆ ದಾಖಲೆಯೊಂದನ್ನು ಸೇರಿಸಿಕೊಂಡರು.

ಶತಕ ಗಳಿಸಿದ ನಂತರ, ಅಭಿಷೇಕ್ ಶರ್ಮ(Abhishek Sharma )ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಅಭಿಷೇಕ್ ಅವರು ತಮ್ಮ ಜೇಬಿನಿಂದ ಒಂದು ಕಾಗದವನ್ನು ತೆಗೆದು, ಅದನ್ನು ಎಲ್ಲರಿಗೂ ಪ್ರದರ್ಶಿಸಿದರು. ಕಾಗದದ ಮೇಲೆ ಇದು ಆರೆಂಜ್ ಆರ್ಮಿಗಾಗಿ ಎಂದು ಬರೆಯಲಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಷೇಕ್ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಎಸ್ಆರ್ಎಚ್ ತಂಡ ಸತತ ಪಂದ್ಯಗಳನ್ನು ಸೋತಿದ್ದರಿಂದ ಈ ಪಂದ್ಯಕ್ಕೂ ಮುನ್ನವೇ ಅಭಿಷೇಕ್ ಒಂದು ಟಿಪ್ಪಣಿ ಬರೆದಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ನಿಜವಾದ ಸತ್ಯವನ್ನು ಹೈದರಾಬಾದ್ ತಂಡದ ಮತ್ತೊಬ್ಬ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಬಹಿರಂಗಪಡಿಸಿದ್ದಾರೆ. ಕಳೆದ 6 ಪಂದ್ಯಗಳಿಂದಲೂ ಆ ಪತ್ರ ಅವರ ಜೇಬಿನಲ್ಲಿದೆ ಎಂದು ಹೆಡ್ ಹೇಳಿದರು. ದೇವರ ದಯೆಯಿಂದ, ಪಂಜಾಬ್ ವಿರುದ್ಧದ ಪಂದ್ಯದ ನಂತರ
ಅದೇನೆಂದರೆ, ಅಭಿಷೇಕ್ ಶರ್ಮ (Abhishek Sharma)ಐಪಿಎಲ್ ಆರಂಭಕ್ಕೂ ಮುನ್ನವೇ ಪತ್ರ ಬರೆದು ಜೇಬಿನಲ್ಲಿ ಇಟ್ಟುಕೊಂಡಿದ್ದರು. ಆದರೆ, ಕಳೆದ 5 ಪಂದ್ಯಗಳಲ್ಲಿ ಅವರು ಸರಿಯಾಗಿ ಪ್ರದರ್ಶನ ನೀಡಿಲ್ಲ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ ನಂತರ ಅವರು ಆ ಪತ್ರವನ್ನು ಹೊರತೆಗೆದಿದ್ದಾರೆ ಎಂದು ಹೇಳಲಾಗಿದೆ.
ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 245 ರನ್ ಗಳಿಸಿತು. ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ (82 ರನ್ 36 ಎಸೆತ, 6 ಬೌಂಡರಿ, 6 ಸಿಕ್ಸರ್), ಪ್ರಿಯಾಂಶ್ ಆರ್ಯ (36 ರನ್, 13 ಎಸೆತ, 2 ಬೌಂಡರಿ, 4 ಸಿಕ್ಸರ್) ಪ್ರಭ್ ಸಿಮ್ರಾನ್ ಸಿಂಗ್ (42 ರನ್ 23 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ಮಾರ್ಕ್ ಸ್ಟೊಯಿನಿಸ್ (ಔಟಾಗದೆ 34 ರನ್, 11 ಎಸೆತ, 1 ಬೌಂಡರಿ, 4 ಸಿಕ್ಸರ್) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ತಂಡವು ಬೃಹತ್ ಮೊತ್ತವನ್ನು ಕಲೆಹಾಕಿತು. ಎಸ್‌ಆರ್‌ಎಚ್ ಬೌಲರ್‌ಗಳಲ್ಲಿ ಹರ್ಷಲ್ ಪಟೇಲ್ ನಾಲ್ಕು ವಿಕೆಟ್ ಪಡೆದರೆ, ಇಶಾನ್ ಮಾಲಿಂಗ ಎರಡು ವಿಕೆಟ್ ಪಡೆದರು.
ಬಳಿಕ ಪಂಜಾಬ್ ನೀಡಿದ ಗುರಿ ಬೆನ್ನತ್ತಿದ ಎಸ್ಆರ್ಎಚ್ ಪರ ಅಭಿಷೇಕ್ ಶರ್ಮಾ (Abhishek Sharma)(141 ರನ್, 55 ಎಸೆತ, 14 ಬೌಂಡರಿ, 10 ಸಿಕ್ಸರ್) ವಿಧ್ವಂಸಕ ಶತಕ ಗಳಿಸಿದರು. ಟ್ರಾವಿಸ್ ಹೆಡ್ (66 ರನ್, 37 ಎಸೆತ, 9 ಬೌಂಡರಿ, 3 ಸಿಕ್ಸರ್) ನೆರವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ 18.3 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು. ಸತತ ಸೋಲುಗಳಿಂದ ಕಂಗೆಟ್ಟಿದ ಎಸ್ಆರ್ಎಚ್ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ.

ಪತ್ರದಲ್ಲಿ ಏನು ಬರೆದಿತ್ತು ಎಂದು ನೋಡುದಾದರೆ
ಅಭಿಷೇಕ್ ಅವರು ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್ ಮಾಡಿದರು. ಪಂಜಾಬ್ ಬೌಲರ್‌ಗಳ ಬೆವರಿಳಿಸಿದರು. ಬೌಲರ್ ಯಾರೇ ಆಗಿರಲಿ, ಯಾವುದೇ ರೀತಿಯ ಚೆಂಡನ್ನು ಎಸೆಯಲಿ, ಫಲಿತಾಂಶ ಮಾತ್ರ ಬೌಂಡರಿಯಾಗಿತ್ತು. ಅಭಿಷೇಕ್ ಕೇವಲ 40 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 10 ಸಿಕ್ಸರ್‌ಗಳು ಮತ್ತು 14 ಬೌಂಡರಿಗಳು ಬಂದವು. ಈ ಐಪಿಎಲ್‌ನಲ್ಲಿ ತಮ್ಮ ಮೊದಲ ಶತಕವನ್ನು ಗಳಿಸಿದ ನಂತರ, ಅಭಿಷೇಕ್ ಶರ್ಮ ಇಡೀ ಮೈದಾನಕ್ಕೆ ಒಂದು ಕಾಗದವನ್ನು ತೋರಿಸಿದರು. ಆ ಕಾಗದದಲ್ಲಿ, ‘ಇದು ಆರೆಂಜ್ ಆರ್ಮಿಗಾಗಿ’ ಎಂದು ಬರೆಯಲಾಗಿತ್ತು. ಇದು ಅಭಿಮಾನಿಗಳು ತುಂಬಾ ಖುಷಿ ಪಡುವ ವಿಚಾರ. ಶತಕ ವೀರ ಅಭಿಷೇಕ್ ಶರ್ಮಾ(Abhishek Sharma) ಅವರ ಭರ್ಜರಿ ಆಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ipl