ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).
ಬ್ರಿಸ್ಟೇನ್: ಬಾರ್ಡರ್-ಗಾವಸ್ಕರ್ ಟ್ರೋಫಿಯ ಗಬ್ಬಾ ಟೆಸ್ಟ್ನ 4 ನೇ ದಿನದಂದು ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಫಾಲೋ-ಆನ್ ತಪ್ಪಿಸಿದ ಆಕಾಶ್ ದೀಪ್ ಮತ್ತು ಜಸ್ಪ್ರೀತ್ ಬುಮ್ರಾ ಆಟಕ್ಕೆ ತಂಡದ ಕೋಚ್ ಗೌತಮ್ ಗಂಭೀರ್ ಹಾಗೂ ಇತರ ಆಟಗಾರರು ಸಂಭ್ರಮ ಪಡುವ ಪಟ್ಟರು.
ಬುಮ್ರಾ ಮತ್ತು ಆಕಾಶ್ ಜೋಡಿ :(India vs australia)
ಬುಮ್ರಾ ಮತ್ತು ಆಕಾಶ್ ಜೋಡಿ 10 ನೇ ವಿಕೆಟ್ಗೆ ಅಜೇಯ 39 ರನ್ಗಳ ಜೊತೆಯಾಟದೊಂದಿಗೆ ಆಸ್ಟ್ರೇಲಿಯಾದ ವೇಗಿಗಳನ್ನು ನಿರಾಸೆಗೊಳಿಸಿದರು. ಬ್ರಿಸ್ಬೇನ್ನ ಗಬ್ಬಾದಲ್ಲಿ ನಡೆದ ಮೂರನೇ ಟೆಸ್ಟ್ನ 4 ನೇ ದಿನದಂದು ಭಾರತವು246 ರನ್ಗಳ ಫಾಲೋ-ಆನ್ ತಪ್ಪಿಸಿಕೊಳ್ಳಲು ಗಳಿಸಬೇಕಿತ್ತು. ಆದ್ರೆ ದಿನದಂತ್ಯಕ್ಕೆ ಟೀಂ ಇಂಡಿಯಾ 9 ವಿಕೆಟ್ ಕಳೆದುಕೊಂಡು 252 ರನ್ ಗಳಿಸಿ ದಿನದ ಅಂತ್ಯ ಮುಗಿಸಿತು.
ಹತ್ತನೇ ವಿಕೆಟ್ ಗೆ ಜೊತೆಯಾಟ ಬಾರದಿದ್ದರೆ:(india vs australia)
ಹತ್ತನೇ ವಿಕೆಟ್ ಗೆ ಜೊತೆಯಾಟ ಬಾರದಿದ್ದರೆ ಫಾಲೋ ಆನ್ ಗೆ ಒಳಗಾಗಿ ಮತ್ತೆ ಬ್ಯಾಟ್ ಮಾಡಬೇಕಾದ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಇತ್ತು. ಮಾತ್ರವಲ್ಲ, ಫಾಲೋ ಆನ್ ಗೆ ಒಳಗಾಗದ ಕಾರಣ ಟೀಂ ಇಂಡಿಯಾ ಡ್ರಾ ಮಾಡಿಕೊಳ್ಳಲು ಯತ್ನಿಸಲಿದೆ. ಬೆಳಕು ಮಂದ ಇದ್ದ ಕಾರಣ ದಿನದ ತಡವಾಗಿ ಆಟ ನಿಲ್ಲಿಸಲಾಯಿತು. ಬುಧವಾರದ ಹೆಚ್ಚು ಆರ್ದ್ರ ಹವಾಮಾನ ಮುನ್ಸೂಚನೆಯೊಂದಿಗೆ, ಪಂದ್ಯವು ಡ್ರಾನಲ್ಲಿ ಅಂತ್ಯಕಾಣುವ ನಿರೀಕ್ಷೆ ಇದೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 445 ರನ್ ಗಳಿಸಿತ್ತು. ಭಾರತವು ಆಸ್ಟ್ರೇಲಿಯಾಕ್ಕಿಂತ 193 ರನ್ಗಳ ಹಿನ್ನೆಡೆಯಲ್ಲಿದೆ(india vsaustralia).
ಡ್ರೆಸ್ಸಿಂಗ್ ರೂಂನಲ್ಲಿ ಸಂಭ್ರಮ!!:(india vs australia)
ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್ನಲ್ಲಿ ತಮ್ಮ ಕಾಲಿನ ಮೇಲೆದ್ದು, ಕೊನೆಯ ವಿಕೆಟ್ ಜೋಡಿ ಗಳಿಸಿದ ಪ್ರತಿ ರನ್ಗಳನ್ನು ಹುರಿದುಂಬಿಸಿದರು. ಆಕಾಶ್ ಭಾರತವನ್ನು ಫಾಲೋ-ಆನ್ ಮಾರ್ಕ್ ದಾಟಿಸಲು ಬೌಂಡರಿ ಬಾರಿಸಿದಾಗ, ಕೊಹ್ಲಿ ಮತ್ತು ಗೌತಮ್ ಗಂಭೀರ್ ರೋಹಿತ್ ಶರ್ಮಾ ರೋಮಾಂಚನಗೊಂಡರು. ಟಿವಿ ಕ್ಯಾಮೆರಾಗಳು ಭಾರತೀಯ ಡ್ರೆಸ್ಸಿಂಗ್ ನತ್ತ ದೃಷ್ಟಿ ಹಾಕಿದವು.ಆಕಾಶ್ ದೀಪ್ ಮತ್ತು ಜಸ್ಪ್ರೀತ್ ಬುಮ್ರಾ ಅವರು ಡ್ರೆಸ್ಸಿಂಗ್ ರೂಮ್ಗೆ ಹಿಂತಿರುಗುತ್ತಿದ್ದಂತೆ ವಿರಾಟ್ ಕೊಹ್ಲಿ ಸಹ ಸೆಲ್ಯೂಟ್ ಮಾಡಿದರು. ದಿನದಾಟದ ಅಂತ್ಯದಲ್ಲಿ ಅಜೇಯರಾಗಿ ಉಳಿದ ಇಬ್ಬರು ಬ್ಯಾಟರ್ಗಳನ್ನು ಸ್ವಾಗತಿಸಲು ಕೆಎಲ್ ರಾಹುಲ್ ಸೇರಿದಂತೆ ಕೆಲವು ಆಟಗಾರರು ಬೌಂಡರಿ ಲೈನ್ ಬಳಿ ನಿಂತಿದ್ದರು.(inda vs australia)
ತಂಡದ ನೆರವಿಗೆ ಬಂದ ಕನ್ನಡಿಗ ಕೆಎಲ್ ರಾಹುಲ್: (india vs australia)
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಕರ್ನಾಟಕದ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದರು. ಈ ವೇಳೆ ಅವರು ಬ್ಯಾಟ್ನಿಂದ ರನ್ಗಳು ಹರಿದು ಬಂದವು. ಒಂದು ಬದಿಯಲ್ಲಿ ವಿಕೆಟ್ಗಳು ಬೀಳುತ್ತಾ ಇದ್ದರೂ, ಇನ್ನೊಂದು ತುದಿಯನ್ನು ಕಾಪಾಡಿಕೊಂಡು ಬ್ಯಾಟ್ ಮಾಡಿದ ರಾಹುಲ್ ತಂಡಕ್ಕೆ ಭರವಸಯಾದರು.
ಬ್ರಿಸ್ಬೇನ್ನಲ್ಲಿ ಟೀಮ್ ಇಂಡಿಯಾದ ಮಾನವನ್ನು ಕಾಪಡಿದ ಬ್ಯಾಟರ್ಗಳನ್ನು ನೋಡಿದಾಗ ಅದರಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ಕೆಎಲ್ ರಾಹುಲ್. ಗಬ್ಬಾದಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ಕೆಎಲ್ ಎದುರಾಳಿ ಬೌಲರ್ಗಳನ್ನು ಕಾಡಿದರು. ಮೊದಲ ಇನಿಂಗ್ಸ್ನಲ್ಲಿ ರಾಹುಲ್ 139 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 84 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಬ್ರಿಸ್ಬೇನ್ನಲ್ಲಿ ರಾಹುಲ್ ಆಡಿದ ರೀತಿಯ ಬಗ್ಗೆ ಮಂಗಳವಾರ ಮಾತನಾಡಿದ್ದಾರೆ.
ತಂಡವನ್ನು ಅಪಾಯದಿಂದ ಪಾರು ಮಾಡಿದ ರವೀಂದ್ರ ಜಡೇಜಾ:(india vs australia)
ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿಕೊಂಡಿದ್ದ ಬಳಿಕ ಕ್ರೀಸ್ಗೆ ಬಂದಿದ್ದ ರವೀಂದ್ರ ಜಡೇಜಾ ಅತ್ಯಂತ ಜವಾಬ್ದಾರಿಯುತವಾಗಿ ಬ್ಯಾಟ್ ಮಾಡಿದ್ದರು. ಅವರು ಎದುರಿಸಿದ್ದ 123 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಏಳು ಬೌಂಡರಿಗಳೊಂದಿಗೆ 77 ರನ್ಗಳನ್ನು ಗಳಿಸಿದ್ದರು. ಆ ಮೂಲಕ ಭಾರತ ತಂಡದ ಮೊತ್ತವನ್ನು 200ರ ಗಡಿ ದಾಟುವಲ್ಲಿ ನೆರವು ನೀಡಿದ್ದರು.
ಕಠಿಣ ಹಂತದಲ್ಲಿ ತಂಡಕ್ಕಾಗಿ ರನ್ಗಳನ್ನು ಕಲೆ ಹಾಕಲು ಏನು ಮಾಡಬೇಕು? ಹೇಗೆ ಆಡಬೇಕೆಂಬುದನ್ನು ರವೀಂದ್ರ ಜಡೇಜಾ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಜಡೇಜಾ ಅವರ ಬೌಲಿಂಗ್ ಬಗ್ಗೆ ಮಾತ್ರ ಮಾತನಾಡಲಾಗುತ್ತದೆ. ಆದರೆ, ಅವರು ಬ್ಯಾಟಿಂಗ್ನಲ್ಲಿಯೂ ಅತ್ಯಂತ ಶ್ರೇಷ್ಠ ಪ್ರದರ್ಶನವನ್ನು ತೋರುತ್ತಾರೆ. ಅವರು ನಿಜಕ್ಕೂ ಅತ್ಯುತ್ತಮ ಬ್ಯಾಟಿಂಗ್ ತಂತ್ರವನ್ನು ಹೊಂದಿದ್ದಾರೆ ಹಾಗೂ ಅವರ ಜತೆಗಿನ ಬ್ಯಾಟಿಂಗ್ ಅನ್ನು ಆನಂದಿಸಿದ್ದೇನೆ. ಅವರು ಬ್ಯಾಟ್ ಮಾಡುವುದನ್ನು, ತರಬೇತಿ ಮತ್ತು ಅಭ್ಯಾಸವನ್ನು ನೋಡುವುದನ್ನು ನಾನು ಆನಂದಿಸುತ್ತೇನೆ,” ಎಂದು ಕೆಎಲ್ ರಾಹುಲ್ ಶ್ಲಾಘಿಸಿದ್ದಾರೆ.
ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಆಕರ್ಷಕ ಅರ್ಧಶತಕಗಳ ಮೂಲಕ ಭಾರತಕ್ಕೆ ಭದ್ರ ಬುನಾದಿ ಹಾಕಿದರು.
ರವೀಂದ್ರ ಜಡೇಜಾಗೆ ರಾಹುಲ್ ಮೆಚ್ಚುಗೆ:(india vs australia).
ರವೀಂದ್ರ ಜಡೇಜಾ ವಿಕೆಟ್ ಒಪ್ಪಿಸುವುದಕ್ಕೂ ಮುನ್ನ ಕೆಎಲ್ ರಾಹುಲ್ ಕೂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು ಹಾಗೂ ಅವರು ಆಡಿದ್ದ 139 ಎಸೆತಗಳಲ್ಲಿ 84 ರನ್ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಭಾರತ ತಂಡ ಫಾಲೋ ಆನ್ ತಪ್ಪಿಸಿಕೊಳ್ಳುವಲ್ಲಿ ಮಹತ್ತರ ಪಾತ್ರವಹಿಸಿದ್ದರು. ಅಂದ ಹಾಗೆ ನಾಲ್ಕನೇ ದಿನದಾಟದ ಬಳಿಕ ಮಾತನಾಡಿದ ಕೆಎಲ್ ರಾಹುಲ್, ತಮ್ಮ ಸಹ ಆಟಗಾರ ರವೀಂದ್ರ ಜಡೇಜಾ ಅವರ ಇನಿಂಗ್ಸ್ ಅನ್ನು ಮುಕ್ತಕಂಠದಿಂದ ಗುಣಗಾನ ಮಾಡಿದರು.
“ರವೀಂದ್ರ ಜಡೇಜಾ ಅವರ ಪಾಲಿಗೆ ಇಂದು (ಮಂಗಳವಾರ) ಅದ್ಭುತವಾಗಿತ್ತು. ಅವರು ನಮಗೆ ಕಳೆದ ಹಲವು ವರ್ಷಗಳಿಂದ ಕೆಳ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ. ನಾವು ಇದನ್ನೇ ನಿರೀಕ್ಷೆ ಮಾಡುತ್ತೇವೆ. ಹಲವು ವರ್ಷಗಳಿಂದ ಅವರು ಇದನ್ನು ಸಾಬೀತುಪಡಿಸಿದ್ದಾರೆ.
ವಾತಾವರಣದ ಮೇಲೆ ಫಲಿತಾಂಶ ಅವಲಂಬಿತ:(india vs australia)
ಮೂರನೇ ಟೆಸ್ಟ್ ರೋಚಕತೆ ಹುಟ್ಟಿಸಿದೆ. ಭಾರತ ಫಾಲೋ ಆನ್ ಬಚಾವ್ ಮಾಡಿಕೊಂಡಿದ್ದು, ಆಸ್ಟ್ರೇಲಿಯಾಕ್ಕೆ ಎರಡನೇ ಇನಿಂಗ್ಸ್ನಲ್ಲಿ ಮತ್ತೊಮ್ಮೆ ಬ್ಯಾಟಿಂಗ್ ಮಾಡುವ ಅನಿವಾರ್ಯತೆ ಸೃಷ್ಟಿಸಿದೆ. ಇನ್ನು ಬುಧವಾರದ ಆಟಕ್ಕೂ ಮಳೆ ಕಾಟ ನೀಡುವ ಸಾಧ್ಯತೆ ಇದೆ. ಪಂದ್ಯ ಡ್ರಾ ಆಗುವ ಸಾಧ್ಯತೆ ಇದ್ದ ಹಾಗೆ ತೋರುತ್ತಿದ್ದರೂ, ಕ್ರಿಕೆಟ್ ಆಟದಲ್ಲಿ ಏನು ಬೇಕಾದ್ರೂ ಆಗಬಹುದು. ಭಾರತದ ಕೊನೆಯ ಜೋಡಿ ಅಂದರೆ ಆಕಾಶ್ ದೀಪ್ ಮತ್ತು ಜಸ್ಪ್ರೀತ್ ಬುಮ್ರಾ ಎಷ್ಟು ಸಮಯದವರೆಗೆ ಬ್ಯಾಟ್ ಮಾಡುತ್ತದೆ ಎಂಬುದು ಕುತೂಹಲ ಹೆಚ್ಚಿಸಿದೆ. ಇನ್ನು ಆಸೀಸ್ ಎರಡನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಪ್ರದರ್ಶನ ಹೇಗೆ ನೀಡಲಿದೆ ಎಂಬುದರ ಮೇಲೆ ಪಂದ್ಯದ ಫಲಿತಾಂಶ ಅವಲಂಬಿತವಾಗಿರಲಿದೆ.
ಮೂರನೇ ಟೆಸ್ಟ್ ಪಂದ್ಯವೂ ಸಹ ಆಸ್ಟ್ರೇಲಿಯಾ ಹಿಡಿತದಲ್ಲೇ ಇತ್ತು. ಆದರೆ ಈಗ ಅದರ ಹಿಡಿತ ಸಡಿಲಗೊಂಡಿದೆ. ಆಸ್ಟ್ರಲಿಯಾ ಎರಡನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಬಾರದು ಎಂದು ಲೆಕ್ಕಾಚಾರ ಹಾಕಿಕೊಂಡಿತ್ತು. ಆದರೆ ಟೀಮ್ ಇಂಡಿಯಾ ಲಾಸ್ಟ್ ವಿಕೆಟ್ಗೆ ಬ್ಯಾಟರ್ಗಳು ತೋರಿದ ಕೆಚ್ಚೆದೆಯ ಆಟದ ಪರಿಣಾಮ, ಆಸೀಸ್ ಆಸೆಗೆ
Reed More
Read more: ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).https://www.facebook.com/share/p/PQv8K1WS3esM2Bvv
Read more: ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).