IPL Auction RCB: 10.75 ಕೋಟಿ ರೂ.ಗೆ ಭುವನೇಶ್ವರ್ ಕುಮಾರ್ RCB ಪಾಲು!!!
ಟೀಂ ಇಂಡಿಯಾದ ಪರ ಮೂರು ಫಾರ್ಮೆಟ್ಗಳಲ್ಲಿ ಆಡಿ ಸೈ ಎನಿಸಿಕೊಂಡ ಆಟಗಾರ ಭುವನೇಶ್ವರ್ ಕುಮಾರ್. ಇವರು ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಲು ಶ್ರಮಿಸುತ್ತಿದ್ದಾರೆ. ಆದರೆ ಇವರ ಆಸೆ ಕೈ ಗೂಡುತ್ತಿಲ್ಲ. 35 ವರ್ಷದ ಭರವಸೆಯ ಬೌಲರ್ ಡೆತ್ ಓವರ್ ಹಾಗೂ ಪವರ್ ಪ್ಲೇನಲ್ಲಿ ಬಿಗುವಿನ ದಾಳಿ ನಡೆಸಬಲ್ಲ ಆಟಗಾರ ಭುವನೇಶ್ವರ್ ಕುಮಾರ್.ಇವರು ಐಪಿಎಲ್ನ ಸ್ಟಾರ್ ಬೌಲರ್ಗಳಲ್ಲಿ ಒಬ್ಬರೆನಿಸಿದ್ದಾರೆ. ಇವರನ್ನು ಕೊಳ್ಳಲು ಸಹ ಮಾಲೀಕರು ಹಣವನ್ನು ಖರ್ಚು ಮಾಡಿದರು. ಫೈನಲ್ ಆಗಿ ಇವರಿಗೆ ಆರ್ಸಿಬಿ 10.75 ಕೋಟಿ ತಂಡಕ್ಕೆ ಖರೀದಿ ಮಾಡಿಕೊಂಡಿತು.
ಭುವನೇಶ್ವರ್ ಅವರನ್ನು ಕೊಳ್ಳಲು ಮಾಲೀಕರು ಹಣವನ್ನು ಖರ್ಚು ಮಾಡಲು ಮುಂದಾದವು. ಇವರು ಈಗಾಗಲೇ ಭಾರತದ ಪರ 21 ಟೆಸ್ಟ್, 121 ಏಕದಿನ ಪಂದ್ಯ, 87 ಟಿ20 ಪಂದ್ಯಗಳನ್ನು ಆಡಿ ಅಬ್ಬರಿಸಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 290ಕ್ಕೂ ಹೆಚ್ಚು ವಿಕೆಟ್ ಕಬಳಿಸಿದ್ದಾರೆ. ಇವರನ್ನು ಬಹು ವರ್ಷಗಳ ಕಾಲ ಸನ್ರೈಸರ್ಸ್ ಹೈದರಾಬಾದ್ ತಂಡ ಬ್ಯಾಕ್ ಮಾಡಿತ್ತು. ಆದರೆ ಐಪಿಎಲ್ 2025ರಲ್ಲಿ ಇವರನ್ನು ಸನ್ ತಂಡ ಕೈ ಬಿಟ್ಟಿತು. ಹೀಗಾಗಿ ಇವರು ಹರಾಜು ಅಂಗಳ ಪ್ರವೇಶಿಸಿದರು. ಇವರನ್ನು ಕೊಳ್ಳಲು ಹಲವು ಮಾಲೀಕರು ಮುಂದಾದರು.
ಭುವನೇಶ್ವರ್ ಕುಮಾರ್ : ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್, ಸ್ವಿಂಗ್ ಕಿಂಗ್ ಖ್ಯಾತಿಯ ಭುವನೇಶ್ವರ್ ಕುಮಾರ್ ಐಪಿಎಲ್ನಲ್ಲಿ ಅದ್ಭುತ ಅಂಕಿ-ಅಂಶಗಳನ್ನು ಹೊಂದಿದ್ದಾರೆ. 2011 ರಿಂದ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ ಭುವನೇಶ್ವರ್ ಅನುಭವಿ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿವರೆಗೆ ಭುವಿ ಐಪಿಎಲ್ನಲ್ಲಿ 176 ಪಂದ್ಯಗಳಲ್ಲಿ 7.56 ರ ಎಕಾನಮಿಯಲ್ಲಿ 181 ವಿಕೆಟ್ ಪಡೆದಿದ್ದಾರೆ. ಐಪಿಎಲ್ನಲ್ಲಿ ಎರಡು ಬಾರಿ 5 ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದು, 19 ರನ್ಗಳಿಗೆ 5 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. (RCB)
(RCB)