ದೀಪಾವಳಿ ಹಬ್ಬಕ್ಕೆ ದಕ್ಷಿಣ ಭಾರತದ ಹಾಗೂ ಉತ್ತರ ಭಾರತದಲ್ಲಿ ಸಿನಿಮಾಗಳ ಹಬ್ಬವೇ ನಡೆದಿತ್ತು. ಕನ್ನಡದಲ್ಲಿ ಶ್ರೀಮುರಳಿ ನಟಿಸಿದ ”ಬಘೀರ”(bagheera )ರಿಲೀಸ್ ಆಗಿದ್ದರೆ, ಬಾಲಿವುಡ್ನಿಂದ ಎರಡು ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆಯಾಗಿವೆ. ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಸಿಂಗಂ ಅಗೇನ್’, ಕಾರ್ತಿಕ್ ಆರ್ಯನ್ ನಟನೆಯ ‘ಭೂಲ್ ಭುಲಯ್ಯ 3’ ಕೂಡ ರಿಲೀಸ್ ಆಗಿವೆ.
ಇನ್ನು ತಮಿಳಿನಲ್ಲಿ ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ಅಭಿನಯದ ‘ಅಮರನ್’ ಸಿನಿಮಾ ಬಿಡುಗಡೆಯಾಗಿದೆ. ವಿಶೇಷ ಅಂದರೆ, ತಮಿಳುನಾಡಿನಲ್ಲಿ ‘ಅಮರನ್’ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ಬಾಲಿವುಡ್ನಲ್ಲಿ ‘ಸಿಂಗಂ ಅಗೇನ್’, ಭೂಲ್ ಭುಲಯ್ಯ 3′ ಎರಡು ಬಿಗ್ ಬಜೆಟ್ ಸಿನಿಮಾಗಳಿಗೂ ಕಿಕ್ ಸ್ಟಾರ್ಟ್ ದೊರೆತಿದೆ.
ಇತ್ತ ಕನ್ನಡದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ, ರುಕ್ಮಿಣಿ ವಸಂತ್ ಸಿನಿಮಾ ಬಾಕ್ಸಾಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಆದರೆ, ಬಾಲಿವುಡ್ನ ‘ಸಿಂಗಂ ಅಗೇನ್’, ‘ಭೂಲ್ ಭುಲಯ್ಯ 3’, ತಮಿಳಿನ ಅಮರನ್ ಕರ್ನಾಟಕದಲ್ಲಿಯೂ ಕೂಡ ರಿಲೀಸ್ ಆಗಿದೆ. ಆದರೆ, ಕನ್ನಡದ ಸಿನಿಮಾ ಮುಂದೆ ಕಲೆಕ್ಷನ್ ವಿಚಾರದಲ್ಲಿ ಈ ಮೂರು ಸಿನಿಮಾಗಳು ಕೆಳಗೆ ಬಿದ್ದಿದೆ. ಅಷ್ಟಕ್ಕೂ ಇವುಗಳ ಕಲೆಕ್ಷನ್ ಎಷ್ಟು?
ಕರ್ನಾಟಕದಲ್ಲಿ ‘ಸಿಂಗಂ ಅಗೇನ್’ ಗಳಿಕೆ ಎಷ್ಟು?
‘ಸಿಂಗಂ ಅಗೇನ್’ ಬಾಲಿವುಡ್ನ ಮಲ್ಟಿಸ್ಟಾರರ್ ಚಲನಚಿತ್ರ. ಅಜಯ್ ದೇವಗನ್, ಅಜಯ್ ಕುಮಾರ್, ರಣ್ವೀರ್ ಸಿಂಗ್, ಟೈಗರ್ ಶ್ರಾಫ್, ಕರೀಷ್ಮಾ ಕಪೂರ್, ದೀಪಿಕಾ ಪಡುಕೋಣೆ ನಟಿಸಿರುವ ಈ ಸಿನಿಮಾ ದೀಪಾವಳಿ ಹಬ್ಬಕ್ಕೆ ತೆರೆಗೆ ಬಂದಿತು. ನವೆಂಬರ್ 1 ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಕರ್ನಾಟಕದಲ್ಲಿ ಸುಮಾರ್ 107 ಸ್ಕ್ರೀನ್ಗಳಲ್ಲಿ ರಿಲೀಸ್ ಆಗಿತ್ತು. ಮೊದಲ 95 ಲಕ್ಷ, ಎರಡನೇ ದಿನ 80 ಲಕ್ಷ, ಮೂರನೇ ದಿನ 1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, 2. 75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನುವ ಮಾಹಿತಿ ಇದೆ.
‘ಭೂಲ್ ಭುಲಯ್ಯ 3’ ಕಲೆಕ್ಷನ್ ಎಷ್ಟು?
ಇನ್ನು ಬಾಲಿವುಡ್ನ ಮತ್ತೊಂದು ಮಲ್ಟಿಸ್ಟಾರರ್ ಸಿನಿಮಾ ‘ಭೂಲ್ ಭುಲಯ್ಯ 3’ ಕೂಡ ಕರ್ನಾಟಕದಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಕರ್ನಾಟಕದಲ್ಲಿ ‘ಸಿಂಗಂ ಅಗೇನ್’ಗಿಂತ ಹೆಚ್ಚು ಗಳಿಕೆ ಮಾಡಿದೆ. ಕಾರ್ತಿಕ್ ಆರ್ಯನ್, ಮಾಧುರಿ ದೀಕ್ಷಿತ್, ವಿದ್ಯಾ ಬಾಲನ್, ತೃಪ್ತಿ ದಿಮ್ರಿ ನಟನೆಯ ಈ ಸಿನಿಮಾ ಕರ್ನಾಟಕದಲ್ಲಿ 95 ಸ್ಕ್ರೀನ್ಗಳಲ್ಲಿ ರಿಲೀಸ್ ಆಗಿತ್ತು. ಮೊದಲ ದಿನ 1.10 ಕೋಟಿ, ಎರಡನೇ ದಿನ 70 ಲಕ್ಷ, ಮೂರನೇ ದಿನ 1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಮೂರು ದಿನಗಳಲ್ಲಿ ಒಟ್ಟು 2.80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿಕೊಂಡಿದೆ.
‘ಅಮರನ್’ ಕಲೆಕ್ಷನ್ ಎಷ್ಟು?
ಇನ್ನು ತಮಿಳಿನ ‘ಅಮರನ್’ ಸಿನಿಮಾ ಕೂಡ ಕರ್ನಾಟಕದಲ್ಲಿ ಬಿಡುಗಡೆಯಾಗಿತ್ತು. 107 ಸ್ಕ್ರೀನ್ಗಳಲ್ಲಿ ತೆರೆಕಂಡಿದ್ದ ಸಿನಿಮಾ ”ಬಘೀರ” (bagheera) ರಿಲೀಸ್ ಆದ ದಿನವೇ ತೆರೆಕಂಡಿದೆ. ಮೊದಲ ದಿನ 89 ಲಕ್ಷ, ಎರಡನೇ ದಿನ 65 ಲಕ್ಷ, ಮೂರನೇ ದಿನ 90 ಲಕ್ಷ ಹಾಗೂ ನಾಲ್ಕನೇ ದಿನ 1.2 ಕೋಟಿ ರೂಪಾಯಿ ಕಲೆ ಹಾಕಿದೆ. ನಾಲ್ಕು ದಿನಕ್ಕೆ ಒಟ್ಟು 3.46 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಕನ್ನಡ ಸಿನಿಮಾ ”ಬಘೀರ’‘ನ (bagheera) ಅರ್ಭಟ
ಕರ್ನಾಟಕದಲ್ಲಿ ಪರಭಾಷೆಯ ಸಿನಿಮಾಗಳ ಮುಂದೆ ಕನ್ನಡ ಸಿನಿಮಾ ಕಲೆಕ್ಷನ್ ಹೆಚ್ಚಾಗಿದೆ. ಮಲ್ಟಿಸ್ಟಾರರ್ ಸಿನಿಮಾಗಳ ಮುಂದೆ ”ಬಘೀರ” (bagheera )ಗೆದ್ದಿದೆ. ‘ಸಿಂಗಂ ಅಗೇನ್’ , ‘ಭೂಲ್ ಭುಲಯ್ಯ’, ‘ಅಮರನ್’ಗೆ ಸೆಡ್ಡು ಹೊಡೆದು ”ಬಘೀರ” (bagheera )ಭರ್ಜರಿ ಕಲೆಕ್ಷನ್ ಮಾಡಿದೆ. ಈಗಾಗಲೇ 13 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ.