ಶ್ರೀ ಮುರಳಿ (srii murali)ಅವರು ಆಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿರುವ ‘ಬಘೀರ’ ಸಿನಿಮಾ ಬಿಡುಗಡೆ ಆಗಿದೆ. ಇಂದು (ಅ.31) ದೀಪಾವಳಿ ಹಬ್ಬದ ಪ್ರಯುಕ್ತ ತೆರೆಕಂಡ ಈ ಸಿನಿಮಾಗೆ ಡಾ. ಸೂರಿ ನಿರ್ದೇಶನ ಮಾಡಿದ್ದು, ‘ಹೊಂಬಾಳೆ ಫಿಲ್ಮ್ಸ್’ ಮೂಲಕ ವಿಜಯ್ ಕಿರಗಂದೂರು ಅವರು ಬಂಡವಾಳ ಹೂಡಿಕೆ ಮಾಡಿದ್ದಾರೆ.
ಸಿನಿಮಾದ ಫಸ್ಟ್ ಹಾಫ್ ಬಗ್ಗೆ ಇಲ್ಲಿದೆ ಮಾಹಿತಿ..ಟ್ರೇಲರ್ ಮೂಲಕ ‘ಬಘೀರ’ ಸಿನಿಮಾ ತನ್ನತ್ತ ಗಮನ ಸೆಳೆದಿದೆ. ಹಾಗಾಗಿ ಈ ಸಿನಿಮಾ ಮೇಲೆ ಶ್ರೀಮುರಳಿ ಅವರ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ನಾಯಕಿಯಾಗಿ ರುಕ್ಮಿಣಿ ವಸಂತ್ ಅವರು ನಟನೆ ಮಾಡಿದ್ದಾರೆ.
ಅದ್ದೂರಿಯಾಗಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಶ್ರೀಮುರಳಿ ಅವರು ಆಯಕ್ಷನ್ ಅವತಾರ ತಾಳಿದ್ದಾರೆ. ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಗರುಡ ರಾಮ್ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಈ ಸಿನಿಮಾಗೆ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ ಎಂಬುದು ವಿಶೇಷ. ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ.
ಬಘೀರ’ ಸಿನಿಮಾದ ಫಸ್ಟ್ ಹಾಫ್ ಬಗ್ಗೆ ಮಾಹಿತಿ.
2001ರ ಪ್ಲ್ಯಾಶ್ಬ್ಯಾಕ್ ಮೂಲಕ ತೆರೆದುಕೊಳ್ಳುತ್ತದೆ ಬಘೀರ ಸಿನಿಮಾ. ಸೂಪರ್ ಹೀರೋ ಆಗಬೇಕು ಎಂಬ ಆಸೆ ಇಟ್ಟುಕೊಂಡ ಒಬ್ಬ ಬಾಲಕನ ಕಥೆ.
ಹೀರೋಗಿಂತ ಮೊದಲು ಅಬ್ಬರಿಸುತ್ತ ಎಂಟ್ರಿ ನೀಡುವ ವಿಲನ್ ಗರುಡ ರಾಮ್. ತುಂಬ ಕ್ರೂರವಾದ ಪಾತ್ರವನ್ನು ಅವರಿಗೆ ಈ ಸಿನಿಮಾದಲ್ಲಿ ನೀಡಿದ್ದಾರೆ.
ಐಪಿಎಸ್ ಅಧಿಕಾರಿ ವೇದಾಂತ ಎಂಬ ಪಾತ್ರ ಮಾಡಿರುವ ಶ್ರೀಮುರಳಿ(,srii murali). ಸೂಪರ್ ಕಾಪ್ ಆಗಿ ಬಂದರೂ ಕೂಡ ಆರಂಭದಲ್ಲೇ ಆಯಕ್ಷನ್ ಅಬ್ಬರ ಇಲ್ಲ.ಆದರೆ ಸಿನಿಮಾ ಶುರುವಾಗಿ ಅರ್ಧ ಗಂಟೆ ಬಳಿಕ ಖಾಕಿ ಖದರ್ ತೋರಿಸಲು ಶುರು ಮಾಡುವ ಶ್ರೀಮುರಳಿ.
ಅಷ್ಟರಲ್ಲೇ ಕಥೆಗೆ ಸಿಗುತ್ತದೆ ಒಂದು ಟ್ವಿಸ್ಟ್.ಖಾಕಿ ಕಳಚಿಟ್ಟು ರಿಯಲ್ ಆಯಕ್ಷನ್ ತೋರಿಸುತ್ತಾರೆ ಶ್ರೀಮುರಳಿ (srii murali). ಸೂಪರ್ ಕಾಪ್ ಆಗಿ ಮಾಡಲು ಸಾಧ್ಯವಾಗದೇ ಇರೋದನ್ನು ಮಾಡಿ ತೋರಿಸುವ ಸೂಪರ್ ಹೀರೋ ಬಘೀರ.ಫಸ್ಟ್ ಹಾಫ್ನಲ್ಲಿ ನಟಿ ರುಕ್ಮಿಣಿ ವಸಂತ್ ಅವರಿಗೆ ಇರುವುದು ಕೆಲವೇ ದೃಶ್ಯಗಳು ಮಾತ್ರ. ಅಷ್ಟರಲ್ಲೇ ಮನ ಮುಟ್ಟುವ ರೀತಿ ನಟನೆ ಮಾಡಿದ್ದಾರೆ.
ಇಂಟರ್ವಲ್ ವೇಳೆಗೆ ಪುನಃ ಗರುಡ ರಾಮ್ ಅಬ್ಬರ ಜಾಸ್ತಿ ಆಗುತ್ತದೆ. ಪ್ರಕಾಶ್ ರಾಜ್ ಮತ್ತು ಅವಿನಾಶ್ ಪಾತ್ರ ಬರುವುದು ಕೂಡ ಇಂಟರ್ವಲ್ನಲ್ಲಿ.ಅಂಗಾಂಗ ಕಳ್ಳ ಸಾಗಣೆಯ ದಂಧೆ ಬಗ್ಗೆ ‘ಬಘೀರ’ ಸಿನಿಮಾದಲ್ಲಿ ತೋರಿಸಲಾಗಿದೆ.ಬ್ಯಾಟ್ಮ್ಯಾನ್ ರೀತಿಯ ಪಾತ್ರದಲ್ಲಿ ಶ್ರೀಮುರಳಿ (srii murali )ಮನರಂಜನೆ ನೀಡುತ್ತಾರೆ.ಮಂಗಳೂರಿನಲ್ಲಿ ಇಡೀ ಸಿನಿಮಾದ ಕಥೆ ನಡೆಯುತ್ತೆ.
ಶ್ರೀಮುರಳಿ (srii murali)ಅವರ ವೃತ್ತಿ ಜೀವನಕ್ಕೆ ಒಂದು ಡಿಫರೆಂಟ್ ಸಿನಿಮಾವಾಗಿ ಬಘೀರ ಮೂಡಿಬಂದಿದೆ.ಸಿನಿಮಾದ ಫಸ್ಟ್ ಹಾಫ್ನಲ್ಲಿ ಲವ್ ಸ್ಟೋರಿಗೆ ಹೆಚ್ಚಿನ ಜಾಗ ಇಲ್ಲ. ಒಂದು ಹಾಡಿನಲ್ಲಿ ಮಾತ್ರ ಶ್ರೀಮುರಳಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಫ್ ಆಯಂಡ್ ಟಫ್.