ಪ್ಯಾನ್ ಇಂಡಿಯಾ ಸಿನಿಮಾಗಳ ಆರ್ಭಟವೇ ಈಗ ಹೆಚ್ಚಾಗಿದೆ. ಚಿತ್ರರಂಗದಲ್ಲಿ ಮಾತೆತ್ತಿದ್ದರೆ 1000 ಕೋಟಿ ರೂ. ಲೆಕ್ಕಾಚಾರ ಶುರುವಾಗುತ್ತದೆ. ಸ್ಟಾರ್ ನಟರ ಸಿನಿಮಾಗಳ ಕಲೆಕ್ಷನ್, ಬ್ಯುಸಿನೆಸ್ ಟಾರ್ಗೆಟ್ 500 ಕೋಟಿ ರೂ. ಹೆಚ್ಚು ಎನ್ನುವಂತಾಗಿದೆ. ಇದೀಗ ‘ಪುಷ್ಪ-2’ (Pushpa 2)ಸಿನಿಮಾ ಏನೆಲ್ಲಾ ದಾಖಲೆಗಳನ್ನು ಬರೆಯಬಹುದು ಎನ್ನುವ ಚರ್ಚೆ ಆರಂಭವಾಗಿದೆ.
3 ವರ್ಷಗಳ ಹಿಂದೆ ಸುಕುಮಾರ್ ನಿರ್ದೇಶನದ ‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸಿ . ಪುಷ್ಪರಾಜ್ ಆಗಿ ಪ್ರೇಕ್ಷಕರನ್ನು ರಂಜಿಸಿದ್ದರು. ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಿತ್ತು. 350 ಕೋಟಿ ರೂ. ಗಳಿಕೆ ಕಂಡು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಆಡಿಯೋ, ಡಿಜಿಟಲ್, ಸ್ಯಾಟಲೈಟ್ ರೈಟ್ಸ್ ಸಹ ಭರ್ಜರಿ ಬೆಲೆಗೆ ಮಾರಾಟವಾಗಿತ್ತು.
ಪುಷ್ಪರಾಜ್ ಕಥೆ ಮುಂದುವರೆಯಲಿದೆ. ‘ಪುಷ್ಪ-2’ (Pushpa 2)ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 6ಕ್ಕೆ ಆಕ್ಷನ್ ಎಂಟರ್ಟೈನರ್ ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ ಚಿತ್ರದ 2 ಹಾಡು, ಟೀಸರ್ ಬಿಡುಗಡೆ ಆಗಿ ಸಿನಿರಸಿಕರ ಗಮನ ಸೆಳೆದಿದೆ. ಸದ್ಯ ಚಿತ್ರದ ಪ್ರೀ-ರಿಲೀಸ್ ಬ್ಯುಸಿನೆಸ್ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಸಿನಿಮಾ ಈಗಾಗಲೇ 1000 ಕೋಟಿ ರೂ.ಗೂ ಅಧಿಕ ಬ್ಯುಸಿನೆಸ್ ಮಾಡಿ ಎಲ್ಲರ ಹುಬ್ಬೇರಿಸಿದೆ.
ಕ್ರೇಜ್ ಇರುವ ಸಿನಿಮಾಗಳ ರೈಟ್ಸ್ ಕೊಂಡುಕೊಳ್ಳಲು ವಿತರಕರು ಮುಗಿಬೀಳುತ್ತಾರೆ. ಗೆದ್ದರೆ ಜಾಕ್ಪಾಟ್ ಹೊಡೆಯಬಹುದು ಎನ್ನುವ ಲೆಕ್ಕಾಚಾರ ಇದರ ಹಿಂದೆ ಇರುತ್ತದೆ. ಡಿಮ್ಯಾಂಡ್ಗೆ ತಕ್ಕಂತೆ ಹಣ ತೆತ್ತು ರೈಟ್ಸ್ ಕೊಂಡುಕೊಳ್ಳುತ್ತಾರೆ. ಈಗಾಗಲೇ ‘ಪುಷ್ಪ-2’ ಚಿತ್ರದ ವಿತರಣೆಯ ಹಕ್ಕುಗಳು ಭಾರೀ ಮೊತ್ತಕ್ಕೆ ಬಿಕರಿಯಾಗಿದೆ. ಓಟಿಟಿ, ಟಿವಿ ರೈಟ್ಸ್ ಸಹ ಭರ್ಜರಿ ಬೆಲೆಗೆ ಮಾರಾಟವಾಗಿದೆ.
ಬಿಡುಗಡೆಗೂ ಮೊದ್ಲೆ ‘ಪುಷ್ಪ’-2 (Pushpa 2)ಸಿನಿಮಾ ಬರೋಬ್ಬರಿ 1,065 ಕೋಟಿ ರೂ. ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ ಎಂದು ಹೇಳಲಾಗ್ತಿದೆ. 220 ಕೋಟಿ ರೂ.ಗೆ ಆಂಧ್ರ, ತೆಲಂಗಾಣ ವಿತರಣೆ ಹಕ್ಕು ಮಾರಾಟವಾಗಿದೆಯಂತೆ. ಇನ್ನುಳಿದಂತೆ ಉತ್ತರ ಭಾರತದ ವಿತರಣೆ ಹಕ್ಕು 200 ಕೋಟಿ ರೂ. ತಮಿಳುನಾಡು ವಿತರಣೆ ಹಕ್ಕು 50 ಕೋಟಿ ರೂ.ಗೆ ಬಿಕರಿಯಾಗಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ ವಿತರಣೆ ಹಕ್ಕು 30 ಕೋಟಿ ರೂ. ಕೇರಳ 20 ಕೋಟಿ ರೂ. ಓವರ್ಸೀಸ್(ವಿದೇಶ) 120 ಕೋಟಿ ರೂ.ಗೆ ಸೇಲಾಗಿದೆ. ಒಟ್ಟಾರೆ ಥ್ರಿಯೇಟ್ರಿಕಲ್ ರೈಟ್ಸ್ 640 ಕೋಟಿ ರೂ.ಗೆ ಮಾರಾಟವಾಗಿರುವ ಅಂದಾಜಿದೆ. ಇನ್ನುಳಿದಂತೆ ಆಡಿಯೋ ರೈಟ್ಸ್ 65 ಕೋಟಿ ರೂ. ಓಟಿಟಿ ರೈಟ್ಸ್(ನೆಟ್ಫ್ಲಿಕ್ಸ್) 275 ಕೋಟಿ ರೂ. ಹಾಗೂ ಸ್ಯಾಟಲೈಟ್(ಟಿವಿ) ರೈಟ್ಸ್ 85 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ಹೇಳಲಾಗ್ತಿದೆ.
ಒಟ್ಟಾರೆ ಮೈತ್ರಿ ಮೂವಿಮೇಕರ್ಸ್ ಸಂಸ್ಥೆ 1,065 ಕೋಟಿ ರೂ.ಗೆ ‘ಪುಷ್ಪ-2’ ಪ್ರೀ ರಿಲೀಸ್ ಬ್ಯುಸಿನೆಸ್ ಕುದುರಿಸಿರುವ ಅಂದಾಜಿದೆ. ಇದೀಗ ಮತ್ತೆ ‘ಪುಷ್ಪ-2’ vs ‘KGF’-2 ಎನ್ನುವ ಚರ್ಚೆ ಮುನ್ನಲೆಗೆ ಬಂದಿದೆ. ಮೊದಲಿನಿಂದಲೂ ಇಂತಾಗೊಂದು ಚರ್ಚೆ ನಡೀತಿದೆ. ಅದಕ್ಕೆ ಸಾಕಷ್ಟು ಕಾರಣಗಳು ಇವೆ. ‘ಪುಷ್ಪ’ ಸಿನಿಮಾ ಬಿಡುಗಡೆಗೂ ಮುನ್ನ ಸುಕುಮಾರ್ ಶಿಷ್ಯ ಬುಚ್ಚಿಬಾಬು ನೀಡಿದ್ದ ಅದೊಂದು ಹೇಳಿಕೆ ಭಾರೀ ಚರ್ಚೆ ಹುಟ್ಟಾಕಿತ್ತು.
‘ಪುಷ್ಪ’ ಸಿನಿಮಾ ಹತ್ತು ‘ಕೆಜಿಎಫ್’ಗೆ ಸಮ ಎಂದು ಬುಚ್ಚಿಬಾಬು ಹೇಳಿದ್ದರು. ಹಾಗಾಗಿ ಎರಡೂ ಚಿತ್ರಗಳನ್ನು ಹೋಲಿಸಿ ನೋಡುವವರ ಸಂಖ್ಯೆ ಹೆಚ್ಚಾಯಿತು. ಸಿನಿಮಾ ಎರಡೂ ಕೂಡ ಮಾಸ್ ಸಿನಿಮಾಗಳು. ನಾಯಕನೋರ್ವನ ಏಳುಬೀಳಿನ ಕಥೆ. ರಾಕಿಭಾಯ್ ಹಾಗೂ ಪುಷ್ಪರಾಜ್ ಪಾತ್ರಗಳ ಕೂಡ ಬಹಳ ವಿಭಿನ್ನವಾಗಿ ಡಿಸೈನ್ ಮಾಡಲಾಗಿತ್ತು. ಎರಡೂ ಚಿತ್ರಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸಿದ್ದವು.2018ರಲ್ಲಿ ಬಂದಿದ್ದ ‘KGF’ ಚಾಪ್ಟರ್-1 ಬಾಕ್ಸಾಫೀಸ್ನಲ್ಲಿ 250 ಕೋಟಿ ರೂ. ಕೊಳ್ಳೆ ಹೊಡೆದಿತ್ತು. ಇದೇ ಕ್ರೇಜ್ನಲ್ಲಿ ಬಹಳ ದೊಡ್ಡಮಟ್ಟದಲ್ಲಿ ಸೀಕ್ವೆಲ್ ತೆರೆಗೆ ತರಲಾಗಿತ್ತು. ‘KGF’-2 ಬರೋಬ್ಬರಿ 1200 ಕೋಟಿ ರೂ. ಗಳಿಕೆ ಕಂಡಿತ್ತು. 2021ರಲ್ಲಿ ಬಂದಿದ್ದ ‘ಪುಷ್ಪ’ ಚಿತ್ರ 350 ಕೋಟಿ ರೂ. ಬಾಚಿತ್ತು. ‘KGF’ ಸೀಕ್ವೆಲ್ ರೀತಿಯಲ್ಲೇ ‘ಪುಷ್ಪ’ 2ನೇ ಭಾಗವನ್ನು ಬಹಳ ದೊಡ್ಡಮಟ್ಟದಲ್ಲಿ ತೆರೆಗೆ ತರುವ ಸಾಹಸ ನಡೀತಿದೆ.
ಸದ್ಯ ಬಿಡುಗಡೆ ಆಗಿರುವ ‘ಪುಷ್ಪ’-2 ಟೀಸರ್ಗಳು ಅಷ್ಟಾಗಿ ಸದ್ದು ಮಾಡಿಲ್ಲ. ‘KGF’-2 ಟೀಸರ್ ಮೀರಿಸುವಂತಹ ಸಿನಿಮಾ ಝಲಕ್ ಇನ್ನು ಬಂದಿಲ್ಲ. ಇನ್ನು 1,065 ಕೋಟಿ ರೂ. ಪ್ರೀ-ರಿಲೀಸ್ ಬ್ಯುಸಿನೆಸ್ ಆಗಿದೆ ಸರಿ. ಸಿನಿಮಾ ಗೆಲ್ಲದಿದ್ದರೆ ವಿತರಕರು ಭಾರೀ ನಷ್ಟ ಅನುಭವಿಸುವ ಭಯವಿದೆ. ಟೀಸರ್ ಸದ್ದ ಮಾಡದೇ ಇರುವುದು ಅಲ್ಲು ಅರ್ಜುನ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ನಿಜಕ್ಕೂ ‘ಪುಷ್ಪ’-2 ಕನ್ನಡದ ‘KGF’-2 ದಾಖಲೆ ಮುರಿಯುತ್ತಾ? ಎನ್ನುವುದನ್ನು ಕಾದು ನೋಡಬೇಕಿದೆ.