ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಗೆ ಶುಕ್ರವಾರ ಅದ್ದೂರಿ ಚಾಲನೆ ದೊರೆತಿದೆ. ಆರಂಭಿಕ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಬೆಂಗಳೂರು ಬುಲ್ಸ್ (Bengaluru Bulls)37- 29 ಅಂಕಗಳಿಂದ ಪರಾಭವ ಗೊಂಡಿದೆ.ಟಾಸ್ ಗೆದ್ದು ಕೋರ್ಟ್ ಆಯ್ದುಕೊಂಡ ಬೆಂಗಳೂರು ಬುಲ್ಸ್‌ಗೆ ತಮ್ಮದೇ ತಂಡದ ಹಳೇ ಆಟಗಾರ ಪವನ್ ಸೆಹ್ರಾವತ್ ಮೊದಲ ರೈಡ್‌ನಿಂದಲೇ ನೈಜ ಆಟ ಆರಂಭಿಸಿದರು.ಮೊದಲ ರೈಡ್‌ನಲ್ಲೇ 2 ಅಂಕ ಗಳಿಸಿಕೊಂಡ ಪವನ್ ಕೊನೆಯವರೆಗೂ ಬೆಂಗಳೂರು ತಂಡದ ಸಿಂಹಸ್ವಪ್ನ ಆಗಿ ಟೈಟನ್ಸ್‌ಗೆ 37-29 ಅಂಕಗಳ ಗೆಲುವು ತಂದುಕೊಟ್ಟರು.
ರೈಡಿಂಗ್ ವಿಭಾಗದಲ್ಲಿ ಬುಲ್ಸ್ ವೈಫಲ್ಯ
ಕಳೆದ ಬಾರಿ ಪ್ಲೇ ಆಫ್ಗೇರಲು ವಿಫಲವಾಗಿದ್ದ ಬೆಂಗಳೂರು ಬುಲ್ಸ್(Bengaluru Bulls)ಈ ಬಾರಿ ರೈಡಿಂಗ್‌ನಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಂಡಿತ್ತು. ಪ್ರೋ ಕಬಡ್ಡಿ ಇತಿಹಾಸದಲ್ಲೇ ಗರಿಷ್ಠ ರೈಡಿಂಗ್ ಅಂಕ ಹೊಂದಿರುವ ಪರ್ದೀಪ್ ನರ್ವಾಲ್‌ರನ್ನು ತಂಡಕ್ಕೆ ಸೇರಿಸಿಕೊಂಡಿದ್ದರೂ ಸಹ ರೈಡರ್‌ಗಳು ನಿರೀಕ್ಷಿತ ಪ್ರದರ್ಶನ ತೋರದ ಕಾರಣ ಹಿನ್ನಡೆಯುಂಟಾಯಿತು. ಬೆಂಗಳೂರು ರೈಡರ್‌ಗಳು ರೈಡಿಂಗ್‌ನಲ್ಲಿ 10 ಅಂಕಗಳನ್ನಷ್ಟೇ ತರಲು ಶಕ್ತವಾದರು.
ಪವನ್ ಬಿರುಸಿನ ಆಟ
ಸ್ಟಾರ್ ರೈಡರ್ ಪವನ್ ಸೆಹ್ರಾವತ್ ಆರಂಭದಿಂದಲೇ ಅಂಕ ಗಳಿಸಲು ಆರಂಭಿಸಿದರು. 11 ಯಶಸ್ವಿ ರೈಡ್ ಮಾಡಿದ ಪವನ್ 12 ಅಂಕ ಸಂಪಾದಿಸಿದರು. ಮೊದಲಾರ್ಧದಲ್ಲಿ 6 ಅಂಕ ಗಳಿಸಿಕೊಳ್ಳುವ ಮೂಲಕ ತಂಡಕ್ಕೆ 9 ಅಂಕಗಳ ಮುನ್ನಡೆ ತಂದುಕೊಟ್ಟರು.