ವಿವಿಧ ಖಾಸಗಿ ಟೆಲಿಕಾಂ ಸಂಸ್ಥೆಗಳ ಮಧ್ಯೆ ಗ್ರಾಹಕಸ್ನೇಹಿ ಯೋಜನೆ, ರಿಚಾರ್ಜ್ ಪ್ಯಾಕೇಜ್ ಘೋಷಿಸುತ್ತಾ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ( BSNL) ಮುನ್ನುಗ್ಗುತ್ತಿದೆ. ಜಿಯೋ, ಏರ್ಟೆಲ್, ವೋಡಾಫೋನ್ ಇಂಟರ್ನೆಟ್ ಸೇವೆ ಮಧ್ಯೆ ತೀವ್ರ ಪೈಪೋಟಿ ನೀಡಲು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ರೆಡಿಯಾಗಿದೆ.
ಇದೀಗ ತನ್ನ ವೇಗದ 5G ಇಂಟರ್ನೆಟ್ ಸೇವೆ ಒದಗಿಸುವ ಯೋಜನೆಗೆ ಬೇಕಾದ ಎಲ್ಲ ಅಗತ್ಯ ಸಿದ್ಧತೆಗಳನ್ನು ಕಂಪನಿ ಪೂರ್ಣಗೊಳಿಸಿದೆ.ಬಿಎಸ್ಎನ್ಎಲ್ ಗ್ರಾಹಕರು ಪರಿಪೂರ್ಣ 4G ಸೇವೆಗಾಗಿ ಕಾಯುತ್ತಿರುವ ಮಧ್ಯೆ ಬಿಎಎಸ್ಎನ್ಎಲ್ ಕಂಪನಿಯು 5G ಸೇವೆಯ ಬಗ್ಗೆ ಕೇಂದ್ರ ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಗ್ ಅಪ್ಡೇಟ್ ನೀಡಿದ್ದಾರೆ. BSNL ಬಳಕೆದಾರರು ಶೀಘ್ರವೇ 5G ಸೇವೆಯನ್ನು ಪಡೆಯುವರು ಎಂದು ಖುಷಿ ಸುದ್ದಿಯನ್ನು ನೀಡಿದ್ದಾರೆ.ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ನ 4Gಸೇವೆಯನ್ನು ಪರಿಪೂರ್ಣವಾಗಿ ಅನುಷ್ಠಾನಕ್ಕೆ ತರುವ ಜೊತೆಗೆ 5G ಸೇವೆ ನೀಡಲು ಯೋಜಿಸಿದೆ. ಈ ಸೇವೆ ಆರಂಭಿಸುವ ದಿನಾಂಕವನ್ನು ಕೇಂದ್ರ ಸಚಿವರ ಬಹಿರಂಗಪಡಿಸಿದ್ದಾರೆ. ಸದ್ಯ BSNL 5G ಸೇವೆಯ ತಯಾರಿಯನ್ನು ಪೂರ್ಣಗೊಳಿಸಿದೆ. ದೇಶಾದ್ಯಂತ ನೆಟ್ವರ್ಕ್ ಅಪ್ಡೇಟ್ ಮಾಡಲು ದೇಶಾದ್ಯಂತ ಸಾವಿರಾರು ಮೊಬೈಲ್ ಟವರ್ಗಳನ್ನು ಸ್ಥಾಪನೆಮಾಡುತ್ತಿದೆ ಎಂದು ಸಚಿವರು ತಿಳಿಸಿದರು.
BSNL 5G ಸೇವೆ ಯಾವಾಗ ಪ್ರಾರಂಭ ಆಗುತ್ತೇ ಗೊತ್ತಾ!!
ಬಿಎಸ್ಎನ್ಎಲ್ ಮುಂದಿನ ವರ್ಷ ಜೂನ್ 2025 ರ ಹೊತ್ತಿಗೆ ತನ್ನ 5G ನೆಟ್ವರ್ಕ್ ಸೇವೆಯನ್ನು ಗ್ರಾಹಕರಿಗೆ ನೀಡಲು ನಿರ್ಧರಿಸಿದೆ. ಸದ್ಯ ದೇಶದಲ್ಲಿ 4G ಸೇವೆ ನೀಡಲಾಗುತ್ತಿದೆ. ಬೇರೆ ಬೇರೆ ಕಂಪನಿಗಳಿಂದ 5G ಇಂಟರ್ನೆಟ್ ಸೇವೆ ಲಭ್ಯವಾಗುತ್ತಿದೆ. ಆದಷ್ಟು ಶೀಘ್ರವೇ BSNL 5G (bsnl 5g)ಸೇವೆ ಕೂಡ ಲಭ್ಯವಾಗಲಿದೆ. ಇಂಟರ್ನೆಟ್ ವಿಚಾರದಲ್ಲಿ ಹಂತ ಹಂತವಾಗಿ ಕಂಪನಿಯು ಸಾಗುತ್ತಿದೆ. ಈ 5G ಜಗತ್ತನ್ನು ಸೆಳೆದರೆ, 6G ತಂತ್ರಜ್ಞಾನದಲ್ಲಿ ಜಗತ್ತನ್ನು ಮುನ್ನಡೆಸಲಿದೆ ಎಂದು ಅವರು ಬಣ್ಣಿಸಿದ್ದಾರೆ.