ಅಭಿವೃದ್ಧಿ ಗ್ಯಾರಂಟಿ ಗೆದ್ದಿದೆ: ನರೇಂದ್ರ ಮೋದಿ (Narendra Modi)

ಅಭಿವೃದ್ಧಿ ಗ್ಯಾರಂಟಿ ಗೆದ್ದಿದೆ: ಮೋದಿ

ನವರಾತ್ರಿಯ 6ನೇ ದಿನ ದೇವಿ ಕಾತ್ಯಾಯನಿಯ ಕೈಯಲ್ಲಿರುವ ಕಮಲ ಅರಳಿದೆ! ಹರ್ಯಾಣದ ಗೆಲುವಿನ ರೂಪದಲ್ಲಿ ದೇವಿಯ ಆಶೀರ್ವಾದ ದೊರೆತಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಮಂಗಳವಾರ ಹರ್ಷ ವ್ಯಕ್ತ ಪಡಿಸಿದ್ದಾರೆ. ಸತತ ಮೂರನೇ ಬಾರಿಗೆ ರಾಜ್ಯದಲ್ಲಿ ಸರಕಾರ ಸ್ಥಾಪಿಸಲು ನೆರವಾಗಿದ್ದಕ್ಕಾಗಿ ರಾಜ್ಯದ ಜನತೆಗೆ
ಧನ್ಯವಾದ ಅರ್ಪಿಸಿರುವ ಮೋದಿ, ಜಮ್ಮುಕಾಶ್ಮೀರದಲ್ಲೂ ಬಿಜೆಪಿ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಬಹುನಿರೀಕ್ಷಿತ ಹರ್ಯಾಣ ಫಲಿತಾಂಶ ಹೊರಬೀಳುತ್ತಿದ್ದಂತೆ ದಿಲ್ಲಿಯ ಬಿಜೆಪಿ ಕೇಂದ್ರ ಕಚೇರಿ ಬಳಿ ಜನರನ್ನುದ್ದೇಶಿಸಿ ಪ್ರಧಾನಿ ವಿಜಯದ ಭಾಷಣ ಮಾಡಿದ್ದಾರೆ. ಹರ್ಯಾಣದಲ್ಲಿ ಅಭಿವೃದ್ಧಿಯ
ಗ್ಯಾರಂಟಿಗಳು ಸುಳ್ಳಿನ ಕಂತೆಯನ್ನು ನೆಲಕಚ್ಚಿಸಿವೆ. ಪ್ರಜಾಪ್ರಭುತಕ್ಕೆ ಸಂದ ಜಯ. ಹರ್ಯಾಣ ರಚನೆ
ಯಾದಾಗಿನಿಂದಲೂ ಜನರು ಸರಕಾರಗಳನ್ನು ಬದಲಿಸುತ್ತಾ ಬಂದಿದ್ದಾರೆ. ಆದರೆ ರಾಜ್ಯದ
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತ 3ನೇ ಅವಧಿಗೆ ಒಂದೇ ಪಕ್ಷ ಅಧಿಕಾರಕ್ಕೇರಿದೆ.
ಇದು ಜನರು ನಮ್ಮ ಮೇಲಿಟ್ಟಿರುವ ನಂಬಿಕೆಯ ಪ್ರತೀಕವಾಗಿದೆ ಎಂದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ವಿರುದ್ಧಹರಿಹಾಯ್ದು ಸಮಾಜವನ್ನು ವಿಭಜಿಸಿ ಆರಾಜಕತೆ ತರಲು ಕಾಂಗ್ರೆಸ್ ಪ್ರಯತ್ನಗಳನ್ನು ಮಾಡಿದೆ. ರೈತರನ್ನು ಕೆರಳಿಸಿ, ಪ್ರಚೋದಿಸಿ ಬೆಂಕಿ ಹೊತ್ತಿಸಲು ಹೇಗೆಲ್ಲಾ ಪ್ರಯತ್ನಿಸಲಾಯಿತು ಎಂಬುದನ್ನು
ಇಡೀ ದೇಶ ನೋಡಿದೆ. ರೈತರನ್ನು ಎತ್ತಿಕಟ್ಟಲು ನೋಡಿದ, ಪಿತೂರಿಗಳನ್ನು ಮಾಡಿದ ಕಾಂಗ್ರೆಸ್
ಗೆ ಹರ್ಯಾಣ ರೈತರು ತಕ್ಕ ತಿರುಗೈಟು ನೀಡಿದ್ದಾರೆ ಎಂದು ಮೋದಿ (Narendra Modi) ಹೇಳಿದ್ದಾರೆ.
ಇದೇವೇಳೆ ಕಾಶ್ಮೀರದ ಕಾರ್ಯಕರ್ತರಿಗೂ ಧನ್ಯವಾದ ಸಲ್ಲಿಸಿ, ನ್ಯಾಶನಲ್ ಕಾನ್ವರೆನ್ಸ್. ಪಕ್ಷದ ಅಭೂತಪೂರ್ವ ಪ್ರದರ್ಶನವನ್ನೂ ಶ್ಲಾಘಿಸಿದ್ದಾರೆ.


ಡೋಲು, ನೃತ್ಯದೊಂದಿಗೆ ಲಡ್ಡು ಹಂಚಿಕೆ !
ಹರ್ಯಾಣದಲ್ಲಿ ಬಿಜೆಪಿ ಮೂರನೇ ಬಾರಿಗೆ
ಗೆದ್ದು, ಹ್ಯಾಟ್ರಿಕ್‌ ಸಾಧಿಸುತ್ತಿದ್ದಂತೆ ದೇಶಾದ್ಯಂತ ಕೇಸರಿ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ.
ಹರ್ಯಾಣದಲ್ಲಿ ಕಳೆದ ಬಾರಿಗಿಂತಲೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆದಿದ್ದು ಜಮ್ಮು-ಕಾಶ್ಮೀರದಲ್ಲಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಗೆಲುವನ್ನು ದೇಶಾದ್ಯಂತ ಬಿಜೆಪಿ ನಾಯಕರು ಸಿಹಿ ಹಂಚುವ ಮೂಲಕ ಆಚರಿಸಿದ್ದಾರೆ. ದಿಲ್ಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮ ಮುಗಿಲು
ಮುಟ್ಟಿದ್ದು ಪ್ರಧಾನಿ ಮೋದಿಯೂ ಇಲ್ಲಿ ಭಾಗಿಯಾಗಿದ್ದಾರೆ. ಇನ್ನು ಕರ್ನಾಟಕ, ಪಂಜಾಬ್ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಸಿಹಿ ಹಂಚಿದ ಬಿಜೆಪಿ ಕಾರ್ಯಕರ್ತರು ಗೆಲುವನ್ನು ಸಂಭ್ರಮಿಸಿದ್ದಾರೆ. ಚಂಡೀಗಢದಲ್ಲಿರುವ
ಪಂಜಾಬ್ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಡೋಲು, ಸಂಗೀತ-ನೃತ್ಯದೊಂದಿಗೆ ಲಡ್ಡು ಹಂಚಿ ಸಂಭ್ರಮಿಸಲಾಗಿದೆ. ಬಹುತೇಕ ರಾಜ್ಯಗಳ ಪ್ರಧಾನ ಕಚೇರಿಗಳಲ್ಲಿ ಪಕ್ಷದ ಪ್ರಮುಖ ನಾಯಕರೆಲ್ಲ ಸೇರಿ ಗೆಲುವನ್ನು ಆಚರಿಸಿದ್ದಾರೆ.

(Narendra Modi)

(Narendra Modi)

Related Posts

ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ (narendra modi)ಹೇಳಿಕೆ!!

ರಂಚಿ: ಕಾಂಗ್ರೆಸ್‌ನ ಗ್ಯಾರಂಟಿ ಬಗ್ಗೆ ಪ್ರಧಾನಿ ಮೋದಿ (narendra modi)ವಾಗ್ಧಾಳಿ ಮುಂದುವರಿಸಿದ್ದು, ಕರ್ನಾಟಕ ಸಹಿತ ಹಲವು ರಾಜ್ಯ ಗಳು ಹಾಳಾಗಲು ಕಾಂಗ್ರೆಸ್‌ ಕಾರಣ ಎಂದು ಆರೋಪ ಮಾಡಿದ್ದಾರೆ. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಗ್ಯಾರಂ ಟಿಗಳನ್ನು ಘೋಷಿಸಬೇಕು. ಕಾರ್ಯ ಸಾಧುವಲ್ಲದ ಗ್ಯಾರಂಟಿಗಳು ದಿವಾಳಿಗೆ ಕಾರಣ…

Continue reading
ರತನ್ ಟಾಟಾ (ratan tata)ಬರೆದಿಟ್ಟ ವಿಲ್ ಬಯಲು: ಪ್ರೀತಿಯ ಶ್ವಾನ, ಶಾಂತನು, ಬಾಣಸಿಗನಿಗೂ ಆಸ್ತಿಯಲ್ಲಿ ಪಾಲು

ಕೆಲವು ದಿನಗಳ ಹಿಂದೆ ವಯೋಸಹಜ ಕಾಯಿಲೆಯಿಂದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ನಿಧನರಾಗಿದ್ದಾರೆ. ಟಾಟಾ ನಿಧನದ ಬಳಿಕ ಅವರ ಆಸ್ತಿ ಯಾರಾ ಪಾಲಾಗಲಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಇದೀಗ ರತನ್ ಟಾಟಾ ಅವರು ಬರೆದಿಟ್ಟಿರಿವು ವಿಲ್ ಬಯಲಾಗಿದೆ. ಹೆಂಡತಿ-ಮಕ್ಕಳಿಲ್ಲದ…

Continue reading

Leave a Reply

Your email address will not be published. Required fields are marked *

You Missed

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).

Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh!!

Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh!!

Pushap 2: ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

Pushap 2:  ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

ಕೆಎಲ್ ರಾಹುಲ್​ಗೆ ತಮ್ಮ ಸ್ಥಾನ ತ್ಯಾಗ ಮಾಡಿದ ನಾಯಕ ರೋಹಿತ್ ಶರ್ಮಾ; ಪಿಂಕ್ ಬಾಲ್ ಟೆಸ್ಟ್ (india vs australia)

ಕೆಎಲ್ ರಾಹುಲ್​ಗೆ ತಮ್ಮ ಸ್ಥಾನ ತ್ಯಾಗ ಮಾಡಿದ     ನಾಯಕ ರೋಹಿತ್ ಶರ್ಮಾ; ಪಿಂಕ್ ಬಾಲ್ ಟೆಸ್ಟ್ (india vs australia)

ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ (pushpa 2)! !

ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ (pushpa 2)! !