ದೈತ್ಯ ಆಪಲ್ ಕಂಪೆನಿಯು ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಕಂಪೆನಿಯ ಮುಖ್ಯ ಕಚೇರಿಯಿಂದ ಆಯೋಜನೆ ಮಾಡಲಾಗಿದ್ದ “ಗ್ಲೋ ಟೈಮ್” ಕಾರ್ಯಕ್ರಮದಲ್ಲಿ ಐ ಫೋನ್(Iphone 16) 16 ನೇ ಸಿರೀಸ್ ಈ ಫೋನ್ ಲ್ಲಿರುವ ವಿಶಿಷ್ಟ ಫೀಚರ್ಸ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ದೈತ್ಯ ಆಪಲ್ ಕಂಪೆನಿಯು ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಕಂಪೆನಿಯ ಮುಖ್ಯ ಕಚೇರಿಯಿಂದ ಆಯೋಜನೆ ಮಾಡಲಾಗಿದ್ದ “ಗ್ಲೋ ಟೈಮ್” ಕಾರ್ಯಕ್ರಮದಲ್ಲಿ ಐ ಫೋನ್ 16(Iphone 16) ನೇ ಸಿರೀಸ್ ಈ ಫೋನ್ ಲ್ಲಿರುವ ವಿಶಿಷ್ಟ ಫೀಚರ್ಸ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಆಪಲ್ ಸಂಸ್ಥೆಯ ಫೋನ್ ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್. ಈ ಬ್ರಾಂಡಿನ ಹೊಸ ಫೋನ್ ಖರೀದಿ ಮಾಡಲು ಅದೇಷ್ಟೋ ಐಫೋನ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಇತ್ತೀಚಿಗೆ ಆಪಲ್ ಕಂಪೆನಿಯು ಐ ಫೋನ್ 16(Iphone 16) ಆವೃತ್ತಿ ಅನ್ನು ಪರಿಚಯಿಸಿದೆ. ಐಒಎಸ್ 18 (ios 18)ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಐಫೋನ್ 16(Iphone 16) ಕೆಲವು ವಿಶಿಷ್ಟ ಪೀಚರ್ ಗಳನ್ನು ಒಳಗೊಂಡಿದೆ.
ಆಪಲ್ ಇಂಟೆಲಿಜೆನ್ಸ್ ಜೊತೆ ಬರುತ್ತಿರುವ ಐಫೋನ್ ಕ್ಯಾಮೆರಾ ಕಂಟ್ರೋಲ್ ಹಾಗೂ ಕ್ಯಾಪ್ಚರ್ ಬಟನ್ನೊಂದಿಗೆ ಲಗ್ಗೆ ಇಟ್ಟಿದೆ. ವರ್ಷ ಆರಂಭದಲ್ಲಿ ಘೋಷಿಸಿದಂತೆ ಐಫೋನ್ (Iphone 16)ಐಫೋನ್ 16 ಪ್ಲಸ್ , ಐಫೋನ್ 16 ಪ್ರೋ ಹಾಗೂ ಐಫೋನ್ 16 ಪ್ರೋಮ್ಯಾಕ್ಸ್ಗಳನ್ನು ಅನಾವರಣಗೊಳಿಸಿದ್ದು ತಿಂಗಳ ಅಂತ್ಯದೊಳಗೆ ಬಿಡುಗಡೆಯಾಗಲು ಸಿದ್ಧಗೊಂಡಿದೆ. ಇದರ ಬೆಲೆಯು 79,900 ರಿಂದ ಪ್ರಾರಂಭವಾಗಲಿದೆ. ಎಂದು ಹೇಳಿದೆ.
ಈ ಹೊಸ ಐಫೋನ್ 16 (Iphone 16)ಮೊಬೈಲ್ ಆರಂಭಿಕ 128GB ವೇರಿಯಂಟ್ ಬೆಲೆಯು $ 799 ಅಂದರೆ ಭಾರತದಲ್ಲಿ 65 ಸಾವಿರಕ್ಕಿಂತ ಹೆಚ್ಚಿನ ಬೆಲೆ ಇರಲಿದೆ. ಐಫೋನ್ 16 ಪ್ಲಸ್ 128GB ಬೆಲೆಯು ಸುಮಾರು 89, 900 ಇರಲಿದೆ, ಐಫೋನ್ 16 ಪ್ರೋ 128GB
ಬೆಲೆಯು ಸುಮಾರು 1,19,900 ಎಂದು ಹೇಳಲಾಗಿದೆ, ಐಫೋನ್ 16 ಪ್ರೊMax 256 GB ಬೆಲೆಯು 1,44, 900 ಎಂದು ಹೇಳಲಾಗಿದೆ.
ಐಫೋನ್ 16 ಫೀಚರ್ಸ್ : ಐಫೋನ್ 16 ಮೊಬೈಲ್ 6.1 ಇಂಚಿನ ಡಿಸ್ಪ್ಲೇ ಅನ್ನು ಹೊಂದಿದ್ದು, ಅದೇ ರೀತಿ ಐಫೋನ್ 16 ಪ್ಲಸ್ ಫೋನ್ 6.7 ಇಂಚಿನ ಡಿಸ್ಪ್ಲೇ ಹೊಂದಿದೆ
ಆಪಲ್ ಐಫೋನ್ 16 ಮೊಬೈಲ್ ಗಳನ್ನು ಏರೋಸ್ಪೇಸ್ ದರ್ಜೆಯ ಅಲ್ಯುಮಿನಿಯಂನಿಂದ ತಯಾರಿಸಲಾಗಿದೆ.
ಐಫೋನ್ 16 A18 ಬಯೋನಿಕ್ ಬೆಪ್ ಪ್ರೊಫೆಸರ್ ಸಾಮರ್ಥ್ಯವನ್ನು ಹೊಂದಿರಲಿದೆ, ಅಲ್ಲದೆ ಇದು ಐಫೋನ್ 15 ನಲ್ಲಿರುವ CPUಗಿಂತ 30 ಪ್ರತಿಷತದಸ್ಟು ವೇಗ ಹೊಂದಿದೆ.
ಐಫೋನ್ 16 ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರವು 48 ಮೆಗಾ ಪಿಕ್ಯಲ್ ಟೆಲಿಫೋಟೋ ಲೆನ್ಸ್ ಇರಲಿದೆ. ಅಷ್ಟೇ ಅಲ್ಲದೆ ಅಲ್ಟ್ರಾ ವೈಡ್ ಕ್ಯಾಮರಾವನ್ನು ಸಹ ಇದರಲ್ಲಿ ಅಳವಡಿಸಲಾಗಿದೆ.
ಐಫೋನ್ 16 ಹಾಗೂ ಐಫೋನ್ 16 ಪ್ಲಸ್ ತನ್ನ ಈ ಹಿಂದಿನ ಸೀರೀಸ್ ಗಿಂತ ಅಧ್ಬುತ ಬ್ಯಾಟರಿ ಫೀಚರ್ಸ್ ಹೊಂದಿರಲಿದೆ. ಇದು ಐಫೋನ್ ಪ್ರೇಮಿಗಳಿಗೆ ಇನ್ನಷ್ಟು ಸಂತಸ ನೀಡಲಿದೆ. ಇನ್ನು ಐಫೋನ್ 16, 5G ಸಪೋರ್ಟ್ ಹೊಂದಿದ್ದು, ಬಳಕೆದಾರರಿಗೆ 5G ಸಿಮ್ ಬಳಸಲು ಅನುವು ಮಾಡಿಕೊಟ್ಟಿದೆ.