ಮುಂದಿನ ವರ್ಷದ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉಳಿಕೆ ಆಟಗಾರರ (ರಿಟೇನ್ ಪಟ್ಟಿ ಪ್ರಕಟಿಸಲು ಮುಂದಾಗಿದ್ದು, ಇದರಲ್ಲಿ ಮಾಜಿ ನಾಯಕ ಎಂ.ಎಸ್. ಧೋನಿ (MS Dhoni) ಹೆಸರು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಮುಂದಿನ ಐಪಿಎಲ್‌ಗೆ ಚೆನ್ನೈ ತಂಡ ಧೋನಿಯನ್ನು(MS Dhoni) ಉಳಿಸಿಕೊಳ್ಳುವುದು ಅನುಮಾನ ಎನ್ನಲಾಗಿತ್ತು.ಕಾರಣ,ಫ್ರಾಂಚೈಸಿ 12 ಕೋಟಿ ರೂ.ಗೆ ಧೋನಿಯನ್ನು ತನ್ನಲ್ಲೇ ಉಳಿಸಿಕೊಳ್ಳುತ್ತ ಬಂದಿತ್ತು.ಇದು ಸಿಎಸ್‌ಕೆಗೆ ದುಬಾರಿ ಆಗಿ ಪರಿಣಮಿಸಿತ್ತು. ಆದರೀಗ, ಈ ಬಾರಿಯೂ ಸಿಎಸ್‌ಕೆಯ ಉಳಿಕೆ ಪಟ್ಟಿಯಲ್ಲಿ ಧೋನಿ(MS Dhoni) ಇರಲಿದ್ದಾರೆ ಎನ್ನಲಾಗಿದೆ. ಧೋನಿ (MS Dhoni)ಜತೆಗೆ ನಾಯಕ ಋತುರಾಜ್ ಗಾಯಕ್ವಾಡ್, ರವೀಂದ್ರಜಡೇಜ, ಶಿವಂ ದುಬೈ, ಮತೀಶ ಪತಿರಣ ಹೆಸರೂ ಪಟ್ಟಿಯಲ್ಲಿವೆ ಎಂದು ಮೂಲವೊಂದು ಹೇಳಿದೆ.