ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್(Rishab Pant) ಅವರನ್ನು
ತನ್ನಲ್ಲೇ ಉಳಿಸಿಕೊಳ್ಳುವುದಾಗಿ ಫ್ರಾಂಚೈಸಿ ಸ್ಪಷ್ಟಪಡಿಸಿದೆ. ಇದರಿಂದ ಮುಂದಿನ ಐಪಿಎಲ್ನಲ್ಲಿ ಪಂತ್ ಚೆನ್ನೈ ಸೂಪರ್ ಕಿಂಗ್ಸ್ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿಗೆ ಬ್ರೇಕ್ ಬಿದ್ದಿದೆ.
2022ರಲ್ಲಿ ಭೀಕರ ರಸ್ತೆ ಅಪಘಾತ ನಡೆದ ಬಳಿಕ ರಿಷಭ್ ಪಂತ್(Rishab Pant) 2024ರ ಐಪಿಎಲ್ನಲ್ಲಿ ಡೆಲ್ಲಿ ಪರ ಆಡಿದ್ದರು. ಈ ವರ್ಷದ ಟಿ20 ವಿಶ್ವಕಪ್ನಲ್ಲೂ ರಿಷಭ್ ಪಂತ್ (Rishab Pant) ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು.
ಸದ್ಯ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚುತ್ತಿರುವ ರಿಷಭ್ ಪಂತ್(Rishab Pant) ಮುಂದಿನ ವರ್ಷ ಐಪಿಎಲ್ ತಂಡ ಬದಲಿಸಲಿದ್ದಾರೆ ಎಂದು ವರದಿಯಾಗಿತ್ತು.ಆದರೆ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್(Rishab Pant) ಅವರ ಬ್ಯಾಟಿಂಗ್ ಫಾರ್ಮ್ ನೋಡಿದ ಬಳಿಕ ಡೆಲ್ಲಿ ಫ್ರಾಂಚೈಸಿ ಇವರನ್ನು ಉಳಿಸಿಕೊಳ್ಳುವ ನಿರ್ಧಾರವನ್ನು ಮಾಡಿದೆ.ಬಿಸಿಸಿಐ ಇನ್ನೂ ಕೂಡ ಆಟಗಾರರನ್ನು ಉಳಿಸಿಕೊಳ್ಳುವ ನಿಯಮವನ್ನು ಪ್ರಕಟಿಸಿಲ್ಲ. ಆದರೆ ರಿಷಭ್ ಪಂತ್(Rishab Pant) ಅವರು ಡೆಲ್ಲಿಯಲ್ಲೇ ಉಳಿಯುವ ಆಟಗಾರರ ಪೈಕಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ