ಕರ್ನಾಟಕದ ಕೆ.ಎಲ್. ರಾಹುಲ್ (KL Rahul) ಮತ್ತೆ
ಆರ್ಸಿಬಿಗೆ ಮರಳುವ ಕುರಿತ ಚರ್ಚೆಯೊಂದು ಹುಟ್ಟಿಕೊಂಡಿದೆ
“ನೀವು ಆರ್ಸಿಬಿಗೆ ಮರಳಬೇಕು, ಇಲ್ಲಿ ಭರ್ಜರಿ ಪ್ರದರ್ಶನ
ನೀಡಬೇಕು ಎಂದು ನಾನು ಬಯಸುತ್ತಿದ್ದೇನೆ, ಪ್ರಾರ್ಥಿಸುತ್ತಿದ್ದೇನೆ’
ಎಂದು ಅಭಿಮಾನಿಯೊಬ್ಬರ ಅಭಿಲಾಷೆಗೆ, ಕೆ ಎಲ್ ರಾಹುಲ್ (KL Rahul)’ಹಾಗೆಂದು
ಆಶಿಸೋಣ’ ಎಂದು ಪ್ರತಿಕ್ರಿಯೆ ನೀಡಿದ್ದೇ ಚರ್ಚೆಯ ಮೂಲ.
ಈ ವೀಡಿಯೊ ವೈರಲ್ ಆಗಿದೆ.
ಮುಂದಿನ ಐಪಿಎಲ್ನಲ್ಲಿ ಕೆ.ಎಲ್. ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತೊರೆದು
ಮತ್ತೆ ಆರ್ಸಿಬಿ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವಾಗಲೇ, ಈ
ವೀಡಿಯೊ ಸಂಚಲನ ಮೂಡಿಸಿದೆ. 2013ರಲ್ಲಿ ಆರ್ಸಿಬಿ ಮೂಲಕವೇ ರಾಹುಲ್
ಐಪಿಎಲ್ಗೆ ಪದಾರ್ಪಣೆ ಮಾಡಿದ್ದರು. ಬಳಿಕ 2014ರಲ್ಲಿ ಹೈದರಾಬಾದ್, 2016ರಲ್ಲಿ
ಮತ್ತೆ ಆರ್ಸಿಬಿ, 2018ರಲ್ಲಿ ಪಂಜಾಬ್… ಹೀಗೆ ತಂಡಗಳನ್ನು ಬದಲಾಯಿಸಿದ್ದರು.
2022ರಿಂದ ರಾಹುಲ್ ಲಕ್ಟೋ ಪರ ಆಡುತ್ತಿದ್ದಾರೆ. ಕಳೆದ ಐಪಿಎಲ್ನಲ್ಲಿ
ಹೈದರಾಬಾದ್ ವಿರುದ್ಧ ಲಕ್ಕೋ ಸೋತ ಬೆನ್ನಲ್ಲೇ, ನಾಯಕ ಕೆ ಎಲ್ ರಾಹುಲ್ ಜತೆಗೆ ಲಕ್ಕೋ
ಮಾಲಕ ಸಂಜೀವ್ ಗೋಯೆಂಕಾ ಸಿಡುಕಿನಿಂದ ಮಾತನಾಡಿದ್ದರು. ಅಂದಿನಿಂದ
ರಾಹುಲ್, ಲಕ್ಕೋ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿ ಬಾರಿ ಚರ್ಚೆಗೆ ಕಾರಣವಾಗಿತ್ತು.